ವಿದ್ಯಾರ್ಥಿಗಳು ತಂದೆ ತಾಯಿಯ ಕನಸು ನನಸಾಗಿಸಲು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಮತ್ತು ಮೊಬೈಲ್ ದುರ್ಬಳಿಕೆ ಮಾಡಿಕೊಳ್ಳದೆ ಅವಶ್ಯಕತೆಗೆ ತಕ್ಕಂತೆ ಬಳಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ.ಚನ್ನಪ್ಪ ಹೇಳಿದರು.
ನಗರದ ಜ್ಞಾನಧಾರ ಸಭಾಭವನದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ 2024-25 ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಎನ್.ಸಿ.ಸಿ, ಯುವ ರೆಡ್ ಕ್ರಾಸ್, ರೋವರ್ಸ್ ಹಾಗೂ ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅನವಶ್ಯಕವಾಗಿ ಸಮಯ ವ್ಯರ್ಥ ಮಾಡದೇ ಮೊಬೈಲ್ ದುರ್ಬಳಕೆ ಆಗದಂತೆ ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಬಳಕೆ ಮಾಡಬೇಕು. ಮತ್ತು ತಮ್ಮಲ್ಲಿ ಅಡಗಿರುವ ಅಗಾಧ ಶಕ್ತಿಯನ್ನು ವಿವೇಕದಿಂದ ಬಳಸಿಕೊಂಡು ನಿತ್ಯ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ವಿದ್ಯಾರ್ಥಿಗಳು ಯಾವಾಗಲೂ ದೊಡ್ಡ ಕನಸುಗಳನ್ನೇ ಕಾಣುತ್ತ ಅವುಗಳ ಸಾಧನೆಗೆ ಸತತ ಪ್ರಯತ್ನ ಮಾಡಬೇಕು ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ಸಂವಿಧಾನವು ನಮ್ಮ ರಕ್ಷಾ ಕವಚವಾಗಿದೆ: ನ್ಯಾ. ಪರಶುರಾಮ ದೊಡಮನಿ
ಕಾಲೇಜಿನ ಪ್ರಾಂಶುಪಾಲರಾದ ಡಾ. ನಳಿನಿ ಬೆಂಗೇರಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ತಂದೆ -ತಾಯಿ ಮತ್ತು ಕಾಲೇಜಿಗೆ ಉತ್ತಮ ಹೆಸರು ಬರುವಂತೆ ಬೆಳೆಯಬೇಕು ಎಂದರು.
ಸುಮಿತ್ರಾ ಅಣ್ಣಿಗೇರಿ, ವಿದ್ಯಾ ರಾಯ್ಕರ್, ಸಂಜೋತಾ ಶಿರಸಂಗಿ, ಪರಮೇಶ್ವರಪ್ಪ ಗೆಜ್ಜಿ, ಲತಾ ಕಿಲ್ಲೆದಾರ ವೇದಿಕೆ ಮೇಲಿದ್ದರು. ಇಬ್ರಾಹಿಂ ಸೌದಾಗರ ನಿರೂಪಿಸಿದರು, ಡಾ.ಜಯಾನಂದ ಹಟ್ಟಿ ಸ್ವಾಗತಿಸಿದರು, ಡಾ.ಜಿ.ಕೆ.ಬಡಿಗೇರ ಪ್ರಸ್ತವಿಕವಾಗಿ ಮಾತನಾಡಿದರು ಹಾಗೂ ಶಿವಾನಂದ ನರಹಟ್ಟಿ ವಂದಿಸಿದರು.