ಯಶಸ್ಸು ಒಂದೇ ದಿನದಲ್ಲಿ ಆಗುವುದಿಲ್ಲ ನಡೆಯುವ ಹಾದಿಯಲ್ಲಿ ಕಲ್ಲು ಮುಳ್ಳುಗಳು ಸಹಜ. ಹಾಗೆಂದ ಮಾತ್ರಕ್ಕೆ ಪ್ರಯತ್ನ ನಿಲ್ಲಿಸುವುದು ಬೇಡ. ಸೋಲೇ ಗೆಲುವಿನ ಸೋಪಾನವಾಗಿದ್ದು, ಪ್ರಯತ್ನ ಮುಂದುವರೆದಾಗ ಖಂಡಿತ ಯಶಸ್ಸು ನಮ್ಮದಾಗುತ್ತದೆ ಎಂದು ಧಾರವಾಡ ಅಂಜುಮನ್ ವಿದ್ಯಾಲಯದಲ್ಲಿ ಡಾ. ಗುರುನಾಥ್ ಬುಲ್ ಬುಲೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪಿಜಿ ಅಧ್ಯಯನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಬಿಎ, ಬಿಎಸ್ಸಿ, ಬಿಕಾಂ, ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕುಮಾರ್ ಅಹಮದ್ ರಜಾ ಪಠಾನ್ ಕುರಾನ್, ಕುಮಾರಿ ಆಕಾಂಕ್ಷ ಶ್ಲೋಕ ಪಠಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಎಂ.ಎನ್.ಮಕಾಂದರ್, ಬಿ.ಎ, ಬಿ. ಎಸ್ ಸಿ ಮತ್ತು ಬಿಕಾಂ 18 ವಿಭಾಗಗಳ ಸಿಬ್ಬಂದಿ ವರ್ಗದವರನ್ನು ಪರಿಚಯಿಸಿದರು. ಡಾ. ಏನ್. ವಿ. ಗುದಗನವರ್ ಕಾಲೇಜಿನ ಕುರಿತು ಮಾಹಿತಿಯನ್ನು ತಿಳಿಸಿದರು.
ಐ.ಕ್ಯೂ ಏ ಸಿ ಎಸ್ ಸಂಯೋಜಕ ಡಾ. ಎನ್. ಬಿ ನಾಲತವಾಡ ವೇದಿಕೆ ಮೇಲಿದ್ದರು. ಗ್ರಂಥ ಪಾಲಕ ಡಾ.ಗೌರಿ ಕೆರಿಮಠ ಗ್ರಂಥಾಲಯ ಕುರಿತು ಪಿಪಿಟಿ ಮೂಲಕ ಮಾಹಿತಿ ಒದಗಿಸಿದರು. ಡಾ. ಬಿಬಿ ಆಯೇಶಾ ಚಕೋಲಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಡಾ. ಸೈಯದ್ ತಾಜುನ್ನೆಸಾ ವಂದನಾರ್ಪಣೆ, ದಿನಾಚರಣೆ ಸಮಿತಿ ಅಧ್ಯಕ್ಷೆ ಡಾ. ಸೌಭಾಗ್ಯ ಜಾದವ್ ಕಾರ್ಯಕ್ರಮ ನಿರೂಪಿಸಿದರು.