ಮಕ್ಕಳನ್ನು ಬೆಳೆಸುವಾಗಲೇ ಜಾತಿಯತೆಯ ಸಂಕುಚಿತ ಮನೋಭಾವನೆಯಿಂದ ಹೊರ ತಂದು, ಸರ್ವರೂ ಸರಿಸಮಾನರೆಂಬ ಭಾವನೆ ಬೆಳೆಸಬೇಕು. ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಬೆಳೆದರೆ ದೇಶದ ಪ್ರಗತಿ ಸಾಧ್ಯ ಎಂದು ಧಾರವಾಡ ಜಿಲ್ಲಾ ವಿವಾದಗಳು ಮತ್ತು ಪರಿಹಾರ ಆಯೋಗದ ಅಧ್ಯಕ್ಷ ಈಶ್ವರ ಭೂತೆ ಹೇಳಿದರು.
ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಪಿಜಿ ಅಧ್ಯಯನ ಕೇಂದ್ರ ಸಹಯೋಗದೊಂದಿಗೆ ರಾಜ್ಯಶಾಸ್ತ್ರ ವಿಭಾಗ, ಮಾನವ ಹಕ್ಕುಗಳ ಕೋಶ, ಇ.ಎಲ್.ಸಿ ಹಾಗೂ ದಿನಾಚರಣೆ ಸಮಿತಿಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಮಾನವ ಹಕ್ಕುಗಳ ದಿನ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಸಮಾನತೆ, ಭ್ರಾತೃತ್ವ ಹಾಗೂ ಮಾನವ ಹಕ್ಕುಗಳ ಅರಿವು ಮನೆಯಿಂದಲೇ ಶುರುವಾಗಬೇಕು. ಮತ್ತು ಅವರನ್ನು ಎಲ್ಲರೂ ಸಮಾನರೆಂಬ ಭಾವದಿಂದ ಬೆಳೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ. ಏನ್.ಎಮ್.ಮಕಾನದಾರ ಮಾತನಾಡಿ, ಮಕ್ಕಳಿಗೆ ಉತ್ತಮ ಜ್ಞಾನ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಅಂದಾಗ ಕುಟುಂಬ ಮತ್ತು ಸಮಾಜದ ಪ್ರಗತಿ ಸಾಧ್ಯ ಎಂದು ತಿಳಿಸಿದರು.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಪೌರಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಾಯಿ ಬಡಿದುಕೊಂಡು ಪ್ರತಿಭಟನೆ
ಐಕ್ಯೂಎಸ್ ಸಂಯೋಜಕ ಡಾ. ಎನ್. ಬಿ.ನಾಲತವಾಡ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಆಸ್ಮಾ ನಾಜ್ ಬಳ್ಳಾರಿ ವೇದಿಕೆ ಮೇಲಿದ್ದರು. ಕಾರ್ಯಕ್ರಮವು ಕುಮಾರಿ ಅಫೀಫಾ ಕುರಾನ್ ಮತ್ತು ಕುಮಾರ್ ಪ್ರವೀಣ್ ರಾಠೋಡ್ ಶ್ಲೋಕ ಪಠಿಸುವುದರೊಂದಿಗೆ ಪ್ರಾರಂಭವಾಯಿತು. ಪ್ರೊ. ನಾಗರಾಜ್ ಕನಕಣಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ನೂರ್ ಜಹಾನ್ ಗಲಗಲಿ ವಂದನಾರ್ಪಣೆ ಮಾಡಿದರು. ದಿನಾಚರಣೆ ಸಮಿತಿ ಅಧ್ಯಕ್ಷೆ ಡಾ. ಸೌಭಾಗ್ಯ ಜಾದವ್ ನಿರೂಪಿಸಿದರು.