ರಾಜ್ಯದಲ್ಲಿ ಸಂವಿಧಾನತ್ಮಕಾಗಿ ರಚನೆಯಾದ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಸಂಶಯವಿದೆ ಎಂದು ಹುಬ್ಬಳ್ಳಿಯ ಪತ್ರಿಕಾಗೋಷ್ಠಿಯೊಂದರಲ್ಲಿ ಸಂಸದ ಗೋವಿಂದ ಕಾರಜೋಳ ಹೇಳಿದರು.
ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಸಂಸದ ಜಗದಂಬಿಕಾ ಪಾಲ್ ಅವರ ಬಗ್ಗೆ ಸಿಎಂ, ಡಿಸಿಎಂ ಹಗುರವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಸಂವಿಧಾನದ ಮೇಲೆ ಗೌರವ ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಮತ್ತು ಜೆಪಿಸಿ ಅಧ್ಯಕ್ಷರು ಬಂದಾಗ ಯಾವ ಪ್ರೋಟೋಕಾಲ್ ಮಾಡದೆ ಅಗೌರವ ತೋರಿದ್ದಾರೆ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ನಶಾ ಮುಕ್ತ ಹುಬ್ಬಳ್ಳಿ ಅಭಿಯಾನ: ವಿದ್ಯಾರ್ಥಿಗಳೊಂದಿಗೆ ಶೆಟ್ಟರ್ ಫೌಂಡೇಶನ್ ಸಂವಾದ
ರಾಜ್ಯದ ಆರ್ಥಿಕತೆಯು ದಿವಾಳಿಯಾಗಿದ್ದು, 25ಸಾವಿರ ಕೋಟಿ ರೂ. ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಹಗರಣದ ದುಡ್ಡು ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಈಗ ಮತ್ತೆ ಉಪಚುನಾವಣೆಗೆ ಅದೇ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಡೂರಿನ ಜನ ಮಾತನಾಡುತ್ತಿದ್ದಾರೆ ಎಂದರು.