ಧಾರವಾಡ | ಗೌರಿ ಹಂತಕರಿಗೆ ಸನ್ಮಾನ; ಆರೋಪಿಗಳ ಬಂಧನಕ್ಕೆ ಪ್ರಗತಿಪರ ಚಿಂತಕರ ಒತ್ತಾಯ

Date:

Advertisements

ಗೌರಿ ಲಂಕೇಶ್‌ರವರನ್ನು ಕೊಂದ ಹಂತಕರನ್ನು ಸನ್ಮಾನಗೈದ ಹಿನ್ನೆಲೆಯಲ್ಲಿ ಎಲ್ಲ ಪ್ರಗತಿಪರ ಚಿಂತಕರು, ಸಂಘಟನೆಗಳಿಂದ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕಚೇರಿಗಳ ಮುಂದೆ ಹಂತಕರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆ ದಿಸೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೂಡಲೇ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದರು.

ಬಸವರಾಜ ಸೂಳಿಭಾವಿ‌ ಮಾತನಾಡಿ, ಯಾರೂ ಸಹಿತ ಸಮಾಜದಲ್ಲಿ ಸಮಾನತೆ, ಪ್ರಜಾಪ್ರಭುತ್ವವನ್ನು ಪ್ರತಿಪಾದನೆ ಮಾಡಬಾರದು ಎಂಬ ಉದ್ದೇಶದಿಂದ ಹಂತಕರು ಪ್ರಜಾಪ್ರಭುತ್ವಕ್ಕೆ, ಸಮಾನತೆಗೆ ಗುಂಡಿಟ್ಟು ಕೊಲ್ಲುತ್ತಿದ್ದಾರೆ. ಪ್ರಜಾಪ್ರಭುತ್ವದ ಪ್ರತಿಪಾದನೆ ಮಾಡಿದ ಗೌರಿ ಲಂಕೇಶ್ ಮತ್ತು ಎಮ್ ಎಮ್ ಕಲ್ಬುರ್ಗಿ ಮೇಲೆ ಗುಂಡಿಟ್ಟರು. ಹಿಂದುತ್ವ ಸಂಘಟನೆಯಿಂದ ಹಂತಕರಿಗೆ ಸನ್ಮಾನವಾಗಿದೆ. ಇಬ್ಬರು ವಿಚಾರವಂತರ ಕೊಲ್ಲಲು ಸನಾತನ ಸಂಸ್ಥೆಯಾದ ಸಂಘಪರಿವಾರ ತಾತ್ವಿಕ ಹಿನ್ನೆಲೆ ಒದಗಿಸಿದೆ ಎಂದು ಆರೋಪಿಸಿದರು. ಹಂತಕರನ್ನು ಸನ್ಮಾನ ಮಾಡಿದವರ ಮೇಲೆ ಹಾಲಿ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಾಗೃತ ಕರ್ನಾಟಕ ಸಂಘಟನೆಯ ನೂರ್ ಶ್ರೀಧರ ಮಾತನಾಡಿ, ಅಸಂವಿಧಾನಿಕ ನಡತೆ, ಪ್ರಜಾಪ್ರಭುತ್ವ ವಿರೋಧಿ ನಡುವಳಿಕೆಗಳನ್ನು ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಕಾಣುತ್ತಿದ್ದೆವು. ಆದರೆ ಅಂತಹ ಅವಹೇಳನಕಾರಿ ಹಾಗೂ ಅವಮಾನಕರ ಕೃತ್ಯ ಕರ್ನಾಟಕದಲ್ಲೇ ನಡೆದಿದೆ. ಕೊಲೆಗಾರರಿಗೆ ಸನ್ಮಾನ ಮಾಡುವ ಸಂಸ್ಕೃತಿ ಕರ್ನಾಟಕದಲ್ಲಿ ಬೆಳೆಯುತ್ತಿರುವುದು ಬೇಸರದ ಸಂಗತಿ. ಗೌರಿ ಲಂಕೇಶ್ ಕೊಲೆಯಾಗಿ 7 ವರ್ಷವಾದರೂ ಕೊಲೆಗೈದವರಿಗೆ ಇದುವರೆಗೂ ಶಿಕ್ಷೆ ಆಗಿಲ್ಲ. ಇದಾವುದೂ ವಯಕ್ತಿಕ ಧ್ವೇಷದಿಂದ ಆಗಿದ್ದಲ್ಲ, ಒಂದು ಚಿಂತನೆಗಳ ವಿರುದ್ಧ ಆಗುತ್ತಿರುವ ಕೊಲೆಗಳಾಗಿವೆ. ಸಂವಿಧಾನವಾದಿ ಚಿಂತನೆಗಳನ್ನು ಸಂಪೂರ್ಣ ನಾಶಮಾಡಲು ಮನುವಾದಿ ಸಂಸ್ಥೆಗಳು ಇದರ ಹಿಂದೆ ಇದಾವೆ. ಫನಸಾರೆ, ನರೇಂದ್ರ ದಾಬೋಲ್ಕರ್, ಗೌರಿ ಲಂಕೇಶ್, ಎಮ್ ಎಮ್ ಕಲ್ಬುರ್ಗಿ ಈ ನಾಲ್ಕೂ ಜನ ವಿಚಾರವಂತರನ್ನು ಕೊಂದಿದ್ದು ಒಂದೇ ಸಂಘಟನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements

ಮುಸ್ತಾಕ್ ಅಹಮದ್ ಹಾವೇರಿಪೇಟ್ ಮಾತನಾಡಿ, ಕೊಲೆಗಾರರನ್ನು ಗೌರವಿಸುವುದು ಹೇಯಕೃತ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಆರೋಪಿಗಳನ್ನು ಬಂಧಿಸದೇ ಇರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಹಾಲಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಜಾತ್ಯಾತೀತ ಮತ್ತು ದಲಿತ, ಅಹಿಂದ ಸಮುದಾಯಗಳ ಸಹಕಾರದಿಂದ. ಈ ನಡೆಯನ್ನೆಲ್ಲ ಗಮನಿಸಿದರೆ ಇವರೂ ಮನುವಾದಿಗಳ ಕೈಗೊಂಬೆ ಆಗಿದ್ದಾರೆ ಏನೋ ಅನಿಸುತ್ತಿದೆ. ಕಾಂಗ್ರೆಸ್ ನಲ್ಲೂ ಮನುವಾದಿ ಚಿಂತನೆಗಳು ಸೇರಿಕೊಂಡಿದ್ದು, ಈ ಕೂಡಲೆ ಸಿಎಂ ಮತ್ತು ಗೃಹ ಸಚಿವರು ಇಂತಹ ಕೆಟ್ಟ ಮನಸ್ಸುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಇದನ್ನು ಓದಿದ್ದೀರಾ? ಧಾರವಾಡ | ಭಾರೀ ಮಳೆಗೆ ಕೊಚ್ಚಿಹೋದ ಸೇತುವೆ; ಎಚ್ಚರಗೊಳ್ಳುವರೇ ಜನಪ್ರತಿನಿಧಿಗಳು?

ಪ್ರತಿಭಟನೆಯಲ್ಲಿ ಜನಪರ ಚಿಂತಕರು, ಸಾಹಿತಿಗಳು, ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು, ಸಮಾನ ಮನಸ್ಕರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X