ಧಾರವಾಡದ ಅಲಿ ಪಬ್ಲಿಕ್ ಶಾಲೆಯ ಹಾಗೂ ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ ಶಾಖೆಯ ವತಿಯಿಂದ ಆಯೋಜಿಸಲ್ಪಟ್ಟ ಕಾರ್ಯಗಾರದಲ್ಲಿ ಡಾ. ಎನ್ ಬಿ ನಾಲತವಾಡ ಅವರು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ರಾಷ್ಟ್ರೀಯ ಮತದಾನದ ದಿನದ ಮಹತ್ವ ಮತ್ತು ಸಂವಿಧಾನದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೇಷ್ಮಾ ಸೋನೆ ಖಾನ್ ಮಾತನಾಡಿ, ಸಂವಿಧಾನ ಮತ್ತು ಮತದಾನದ ಕುರಿತ ಕಾರ್ಯಗಾರವು ನಮ್ಮ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಾಕಷ್ಟು ಜ್ಞಾನವನ್ನು ಒದಗಿಸಿದೆ ಎಂದು ಸಂತಸಪಟ್ಟರು.
ಮೊಹಮ್ಮದ್ ಅಫಜಲ್ ಎ.ಎಮ್.ಪಿ’ಯ ಧ್ಯೇಯ ಉದ್ದೇಶಗಳನ್ನು ಮತ್ತು ರಾಷ್ಟ್ರೀಯ ಭಾವೈಕ್ಯತೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಧಾರವಾಡದ ಎ.ಎಮ್.ಪಿ’ಯ ಚಾಪ್ಟರಿನ ಮುಖ್ಯಸ್ಥ ಡಾಕ್ಟರ್ ಮುಸದ್ಧಿಕಾ ಖಾನಂ ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ಮಾಹಿತಿ ನೀಡುತ್ತ ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸಿದರು.
ಕುರಾನ್ ಪಠಣದೊಂದಿಗೆ ವಿದ್ಯಾರ್ಥಿ ಮೊಹಮ್ಮದ್ಅಲಿ ಕುಂಬಿ ಕಾರ್ಯಕ್ರಮ ಆರಂಭವಾಯಿತು. ಕುಮಾರ ತನ್ವೀರ್ ಅಲ್ಮೆಲ್, ಹಬೀಬಾ ಕಾಂಟ್ರಾಕ್ಟರ್ ಮತ್ತು ಶಾಫಿನ್ ಸುಂಕದ ಕಾರ್ಯಕ್ರಮದ ಕುರಿತು ಪ್ರಶಂಸೆ ಮಾಡುತ್ತಾ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಅಯೋಜಿಸಬೇಕೆಂದು ಅನಿಸಿಕೆ ಹಂಚಿಕೊಂಡರು.
ಮಾರೂಫಾ ಇನಾಮ್ದಾರ್ ಕಾರ್ಯಕ್ರಮ ನಿರೂಪಿಸಿದರು. ಮಾಡಿದರು. ಜೈತುನಬಿ ಬಲಬಟ್ಟಿ ವಂದಿಸಿದರು. ಕಾರ್ಯಗಾರದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.