ಧಾರವಾಡ | ಹೊಸ ಎಪಿಎಂಸಿ ನಿರ್ಮಾಣ; ಹಳೆ ಎಪಿಎಂಸಿ ಕುರಿತು ನಿರ್ಲಕ್ಷ್ಯ

Date:

Advertisements

ವಿದ್ಯಾಕಾಶಿ, ಪೇಡಾನಗರಿ, ಟ್ಯುಟೋರಿಯಲ್‌ಗಳ ನಗರ ಎಂದು ಹೆಮ್ಮೆಯಿಂದ ಹೇಳುವ ಧಾರವಾಡ ನಗರ ಸಮಸ್ಯೆಗಳ ಆಗರವಾಗಿಯೂ ಗೊತ್ತಿಲ್ಲದೆ ಬೆಳೆದು ನಿಂತಿರುವುದು ಯಾರಿಗೂ ಕಾಣಿಸುವುದಿಲ್ಲ. ಅದರಲ್ಲಿ‌ ನಗರದ ಶಿವಾಜಿ ವೃತ್ತದ ಹತ್ತಿರವಿರುವ ಹಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪರಿಸ್ಥಿತಿಯನ್ನು ಗಮನಿಸಿದರೆ ಯಾರಿಗಾದರೂ ಮರುಕ ಉಂಟಾಗದೆ ಇರದು. ಇದೇ ಎಪಿಎಂಸಿಯಲ್ಲಿರುವ ರೈತ ಭವನ ಇವತ್ತು ಅನಾಥವಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ, ಸಾರ್ವಜನಿಕರ ಶೌಚಾಲಯ, ಮೂತ್ರಾಲಯವಾಗಿ ಪರಿವರ್ತನೆ ಆಗಿರುವುದೂ ಅತ್ಯಂತ ದುರಂತದ ಸಂಗತಿ.

ಶಿವಾಜಿ ವೃತ್ತದ ಪಕ್ಕದಲ್ಲಿ ಕೆಇ ಬೋರ್ಡಿನ ಪ್ರಥಮ ದರ್ಜೆಯ ಕಾಲೇಜಿನ ಎದುರಿಗಿರುವ ರೈತಭವನ ಕಟ್ಟಡವು 1974ರಲ್ಲಿ ಉದ್ಘಾಟನೆಗೊಂಡಿದ್ದು, ಅಲ್ಲಿಂದ ಈ ರೈತಭವನದಲ್ಲಿ ರಾಜಕೀಯ ಸಭೆಗಳು, ರೈತ ಸಭೆಗಳು‌ ನಡೆಯುತ್ತಿದ್ದವು. ಆದರೆ, ಇತ್ತೀಚಿಗೆ ಅಂದರೆ ಕಳೆದ 20ರಿಂದ 30 ವರ್ಷದಿಂದ ಈ ರೈತಭವನವನ್ನು ಕಣ್ಣೆತ್ತಿ ನೋಡುವವರೇ ಇಲ್ಲ. ಇದರ ಕುರಿತು ಖಾಳಜಿ ವಹಿಸುವವರೂ ಇಲ್ಲದಂತಾಗಿದೆ.

ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಸುಮಾರು ವರ್ಷಗಳಿಂದ ಈ ಕಟ್ಟಡವನ್ನು ನೋಡುತ್ತಿದ್ದೇವೆ. ಆದರೆ, ಯಾವ ಬದಲಾವಣೆಯೂ ಕಂಡುಬಂದಿಲ್ಲ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ಈ ಕಟ್ಟಡವನ್ನು ಹಾಳಾಗಿ ಹೋಗಲಿಕ್ಕೆ ಕೈಬಿಟ್ಟಿದ್ದಾರೆ. ನಮ್ಮ ಹಣ ಈ ರೀತಿಯಾಗಿ ಪೋಲಾಗಿರುವುದನ್ನು ಕಂಡು ನಮಗೂ ಬೇಸರವೆನಿಸುತ್ತಿದೆ. ಯಾವುದೇ ಕಟ್ಟಡಗಳಾದರೂ ಸಾರ್ವಜನಿಕರಿಗಾಗಲಿ, ರೈತರಿಗಾಗಲಿ, ಸರ್ಕಾರಕ್ಕಾಗಲಿ ಸದುಪಯೋಗವಾಗಬೇಕು” ಎನ್ನುತ್ತಾರೆ.

Advertisements

ರೈತ ಭವನ

“ನಾವು ಈ ಶಿವಾಜಿ ಸರ್ಕಲ್‌ನಿಂದಲೇ ನಮ್ಮ ಊರುಗಳಿಗೆ ಹೋಗುತ್ತೇವೆ. ಬಸ್ಸುಗಳು ಬರುವತನಕ ನಾವು ಈ ಜಾಗದಲ್ಲಿ‌ ಕಾಯಲೆಬೇಕು. ಸಾರ್ವಜನಿಕರಿಗೆ ಮೂತ್ರ ವಿಸರ್ಜನೆಗೆಂದು ಇಲ್ಲಿ ಸಮೀಪದಲ್ಲೆಲ್ಲೂ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ನಾವುಗಳು ಹಾಳಾಗಿರುವ ಈ ಕಟ್ಟಡವನ್ನೇ ಮೂತ್ರ ವಿಸರ್ಜನೆಗೆ ಬಳಸುತ್ತೇವೆ” ಎಂದು ಹೇಳುತ್ತಾರೆ.

“ಸಲಿಗೆ ಪಕ್ಕದಲ್ಲಿರುವ ಶಿವಾಜಿ ವೃತ್ತದಲ್ಲಿ ನವಲಗುಂದ, ಅಮ್ಮಿನಭಾವಿ, ಹೆಬ್ಬಳ್ಳಿ, ಸವದತ್ತಿ, ಹಲವು ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಒಂದೆ ಸರ್ಕಲ್‌ನಲ್ಲಿ ಬಸ್‌ಗಳಿಗಾಗಿ ಕಾಯಬೇಕು. ಆದರೆ ಅವರಾರಿಗೂ ಸುತ್ತಮುತ್ತಲು ಒಂದಾದರೂ ಸಾರ್ವಜನಿಕ ಶೌಚಾಲಯವಿಲ್ಲ. ಹೀಗಾಗಿ ಪಾಳುಬಿದ್ದಿರುವ ರೈತಭವನವನ್ನೇ ಶಾಚಾಲಯ, ಮೂತ್ರಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಕಟ್ಟಡವನ್ನು ಒಳಹೊಕ್ಕು ನೋಡಿದಾಗ ಎಲ್ಲಿ ನೋಡಿದರೂ ಸಾರಾಯಿ ಪ್ಯಾಕೆಟ್‌ಗಳೇ ಕಣ್ಣಿಗೆ ಬಿದ್ದವು. ಒಂದು ಹಾಸಿಕೊಳ್ಳುವ ಚಾದಾರ ಸೇರಿದಂತೆ ಇತ್ಯಾದಿಗಳು ಈಗಲೂ ಕಾಣಸಿಗುತ್ತವೆ. ಈ ರೀತಿ ಅನೈತಿಕ ಚಟುವಟಿಕೆಗಳ ತಾಣವಾಗಿರುವ ರೈತಭವನದ ಕಟ್ಟಡ ಇತ್ತ ರೈತರಿಗಂತೂ ಉಪಯೋಗವಿಲ್ಲ” ಎಂದು ಹೇಳಿದರು.

ರೈತ ಭವನ 2

“ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕಾಯ್ದೆಯ ತಿದ್ದುಪಡಿ ವಾಪಸ್ ತೆಗೆದುಕೊಳ್ಳುವುದೊ? ಎಂದು ಕಾದುನೋಡಬೇಕಿದೆ. ಹೊಸ ಎಪಿಎಂಸಿ ನಿರ್ಮಾಣವಾದ ನಂತರ ಹಳೆ ಎಪಿಎಂಸಿ ಮಾರುಕಟ್ಟೆಯ ಪರಿಸ್ಥಿತಿ ಬಹುತೇಕ ಹದಗೆಟ್ಟಿದೆ. ಬಹುತೇಕವಾಗಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಇನ್ನು ಸಾರ್ವಜನಿಕರೂ ಕಸವನ್ನೆಲ್ಲ ಚೆಲ್ಲಿ ಈ ಕಾಟನ್ ಮಾರ್ಕೆಟ್ ಕಸ ವಿಲೇವಾರಿ ಸ್ಥಳದಂತೆ ನೋಡುತ್ತಿರುವುದು ವಿಷಾದ. ಎಪಿಎಂಸಿ ಕಚೇರಿಯ ಹಳೆ ಕಟ್ಟಡವನ್ನೂ ಯಾರೂ ಸಹಿತ ನೋಡುವವರಿಲ್ಲ. ಕುಡುಕರ ವಿಶ್ರಾಂತ ಸ್ಥಳವಾಗಿ ಪರಿವರ್ತನೆಯಾಗಿದೆ” ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ರೈತ ಭವನ

ಹೊಸ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ವೀರಭದ್ರಯ್ಯ ಹಿರೇಮಠ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಳೆ ಎಪಿಎಂಸಿಯಲ್ಲಿರುವ ರೈತಭವನವನ್ನು ನೆಲಸಮಗೊಳಿಸಿ ಅಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುವುದು. ನಿರ್ಮಾಣಕ್ಕೆ ಕ್ರಿಯಾಯೋಜನೆ ಮಂಜೂರಾಗಿದೆ. ಆದರೆ, ಹಣವಿಲ್ಲದ ಕಾರಣ ತಡವಾಗಿದೆ. ಇನ್ನು ಎಪಿಎಂಸಿ ಕಾಯ್ದೆ ಜಾರಿಯಾದ ಮೇಲೆ‌ ಈ ಎಲ್ಲ ಸಮಸ್ಯೆಗಳು ಉಂಟಾಗುತ್ತಿವೆ. ಕೃಷಿ‌ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೂ, ಹಮಾಲರಿಗೂ ಕೆಲಸವಿಲ್ಲದಂತಾಗಿದೆ. ಇದರ ನಡುವೆ ಈಗಲೇ ಕಟ್ಟಡ ನಿರ್ಮಾಣ ಮಾಡುವುದು ಅಸಾಧ್ಯ. ಹಣ ಯಾವತ್ತು ಮಂಜೂರಾಗುತ್ತದೋ ಅಂದು ಹೊಸ ಕಟ್ಟಡ ನಿರ್ಮಾವಾಗುತ್ತದೆ” ಎಂದರು.

ರೈತ ಭವನ

“ರಾಜ್ಯದ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ. ಅದೆಲ್ಲ ಬಗೆಹರಿಯಬೇಕೆಂದರೆ ಕೃಷಿ ಕಾಯ್ದೆ ತಿದ್ದುಪಡಿಯನ್ನು ಸರ್ಕಾರ ವಾಪಸ್ ಪಡೆಯಬೇಕು. ಆಗ ಮಾತ್ರ ಪರಿಹಾರದ ಹಾದಿ ಕಾಣಸಿಗುತ್ತದೆ” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಲ್ಮೇಶ್ವರ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯದರ್ಶಿ ಮಹದೇವಪ್ಪ ಹಂಪಣ್ಣವರ ಮಾತನಾಡಿ, “ಹೊಸ ಎಪಿಎಂಸಿ ಆದಮೇಲೆ ಹಳೆ‌ಮಾರುಕಟ್ಟೆ ಕಡೆಗೆ ಸರ್ಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹಾಳಾಗಿರುವ ರೈತಭವನವನ್ನು ನೆಲಸಮಗೊಳಸಿ ರೈತರಿಗಾಗಿ ತರಬೇತಿ ಕೇಂದ್ರವನ್ನಾಗಿ ನಿರ್ಮಿಸಿದರೆ ರೈತರಿಗೆಲ್ಲ ಅನುಕೂಲವಾಗುತ್ತದೆ. ಈ ಹಳೆ ಮಾರುಕಟ್ಟೆಯಲ್ಲಿ ಸಾರ್ವಜನಿಕ ಮೂತ್ರಾಲಯಗಳಿಲ್ಲ. ಇದ್ದರೂ ಅವು ಸಂಪೂರ್ಣ ಪಾಳುಬಿದ್ದಿವೆ. ಹೀಗಾಗಿ ನೇರವಾಗಿ ಅಧಿಕಾರಿಗಳು ಮತ್ತು ಸರ್ಕಾರವೇ ಇದರ ಹೊಣೆ ಹೊರಬೇಕಾಗುತ್ತದೆ. ಆಡಳಿತ ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ಎಚ್ಚರಿಸಿದರು.

ಇದನ್ನೂ ಓದಿದ್ದೀರಾ? ಯಾದಗಿರಿ | ಸರ್ಕಾರಿ ಶಾಲೆಗಿಲ್ಲ ಸ್ವಂತ ಕಟ್ಟಡ; ಸಮುದಾಯ ಭವನದಲ್ಲೇ ಪಾಠ

“ಹೊಸ ಎಪಿಎಂಸಿಯಲ್ಲಿ ಉಪಹಾರ ಗೃಹವನ್ನು ಕಟ್ಟಿಸಿ ಕೆಲವು ತಿಂಗಳುಗಳು ಕಳೆದರೂ ಇಂದಿಗೂ ಚಾಲ್ತಿಗೆ ಬಾರದ್ದು, ಸಾರ್ವಜನಿಕರೆ ಇಲ್ಲಿನ ವಾತಾವರಣವನ್ನು‌ ಕಲುಷಿತಗೊಳಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಒಟ್ಟಾರೆಯಾಗಿ ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳು ಬಗೆಹರಿಯಲಿ, ಸಾರ್ವಜನಿಕರ ಆಸ್ತಿ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸದುಪಯೋಗವಾಗಲಿ” ಎಂಬುದು ಸ್ಥಳಿಯರ ಆಶಯವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X