ಧಾರವಾಡ | ಸರ್ಕಾರಿ ಶಾಲೆಗಳ ವಿಲೀನ ಪ್ರಸ್ತಾಪವನ್ನು ಸರ್ಕಾರ ಕೈಬಿಡಬೇಕು; ಎಐಡಿಎಸ್‌ಒ ಆಗ್ರಹ

Date:

Advertisements

ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ವೃದ್ಧಿಸಿ, ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಿ, ಶಾಲೆಗಳನ್ನು ಬಲಪಡಿಸಬೇಕು. ಒಂದೇ ಒಂದು ಸರ್ಕಾರಿ ಶಾಲೆಯನ್ನು ರಾಜ್ಯದಲ್ಲಿ ಮುಚ್ಚಬಾರದು ಎಂದು ಎಐಡಿಎಸ್‌ಒ ಆಗ್ರಹಿಸಿದೆ.

ಸರ್ಕಾರಿ ಶಾಲೆಗಳ ವಿಲೀನ ಪ್ರಸ್ತಾಪವನ್ನು ಖಂಡಿಸಿ ಸಂಘಟನೆ ಧಾರವಾಡ ಜಿಲ್ಲಾ ಉಪಾಧ್ಯಕ್ಷ ಶಶಿಕಲಾ ಮೇಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಕರ್ನಾಟಕ ರಾಜ್ಯದಲ್ಲಿ, ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಹಲವು ಶಾಸಕರು ತಮ್ಮ ಬಳಿ ಮನವಿ ಸಲ್ಲಿಸಿದ್ದಾರೆ ಎಂದು ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಹೇಳಿಕೆ ನೀಡಿದ್ದಾರೆ ಹಾಗೂ ಈ ಕುರಿತು ಮಾನ್ಯ ಮುಖ್ಯಮಂತ್ರಿಯವರ ಜೊತೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ಇರುವ ಮತ್ತೊಂದು ಹೆಸರು ವಿಲೀನ ಎಂಬುದು ಎಲ್ಲ ಶಿಕ್ಷಣ ಪ್ರೇಮಿ ಜನರಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ತಿಳಿದ ವಿಚಾರ” ಎಂದು ಹೇಳಿದ್ದಾರೆ.

“ಸರ್ಕಾರಿ ಶಾಲೆಗಳ ವಿಲೀನವು ಎನ್‌ಇಪಿ 2020ರ ಹಲವು ಶಿಫಾರಸ್ಸುಗಳಲ್ಲಿ ಒಂದಾಗಿದೆ. ಕಳೆದ ವರ್ಷ ಹಿಂದಿನ ಸರ್ಕಾರ ಇದೇ ವಿಲೀನದ ಹೆಸರಿನಲ್ಲಿ ರಾಜ್ಯದ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಾಗ ಆ ನಿರ್ಧಾರದ ವಿರುದ್ಧ ಸಾರ್ವಜನಿಕ ಶಿಕ್ಷಣ ಉಳಿಸಿ ಎಂಬ ಘೋಷಣೆಯ ಅಡಿಯಲ್ಲಿ ಬೃಹತ್ ಜನಾಂದೋಲನ ಜರುಗಿ, ಸರ್ಕಾರ ತನ್ನ ನಿಲುವನ್ನು ಮುಂದುವರಿಸಲಿಲ್ಲ. ಪ್ರಸ್ತುತ ಸರ್ಕಾರ ಎನ್.ಈ. ಪಿ 2020ಅನ್ನು ರಾಜ್ಯದಲ್ಲಿ ಅನುಷ್ಠಾನ ಗೊಳಿಸುವುದಿಲ್ಲ ಎಂದು ಹೇಳುತ್ತಲೇ, ಸರ್ಕಾರಿ ಶಾಲೆಗಳ ವಿಲೀನದ ಪ್ರಸ್ತಾವನೆಯನ್ನು ಚರ್ಚಿಸುತ್ತೇವೆ ಎಂದು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಪ್ರಚಾರಕ್ಕಾಗಿ ಸಚಿವರನ್ನ ರೇಣುಕಾಚಾರ್ಯ ಭೇಟಿ ಮಾಡುತ್ತಿದ್ದಾರೆ: ಶಾಸಕ ಬಸವರಾಜ್ ಶಿವಗಂಗಾ

“ಸರ್ಕಾರಿ ಶಾಲೆಗಳ ದಾಖಲಾತಿ ಕುಸಿದರೆ, ಅದಕ್ಕೆ ಸಂಪೂರ್ಣ ಹೊಣೆಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಶಾಲೆಗಳ ಮೂಲಭೂತ ಪರಿಸ್ಥಿತಿ ಸುಧಾರಿಸಿದರೆ ತಾನಾಗೇ ಶಾಲೆಗಳು ಬಲಿಷ್ಟಗೊಳ್ಳುತ್ತವೆ ಹಾಗೂ ದಾಖಲಾತಿ ಪ್ರಮಾಣ ಏರಿಕೆಯಾಗುತ್ತದೆ. ಮಾನ್ಯ ಶಿಕ್ಷಣ ಮಂತ್ರಿಗಳೇ ಹೇಳಿರುವಂತೆ, ಸಾವಿರಾರು ಶಿಕ್ಷಕರ ಹುದ್ದೆಗಳು ಭರ್ತಿಯಾಗದೇ ಉಳಿದಿದ್ದು, ರಾಜ್ಯವ್ಯಾಪಿ ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಇಲ್ಲ ಅಥವಾ ಒಬ್ಬರೇ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ಈ ಭೀಕರ ಶಿಕ್ಷಕರ ಕೊರತೆಯ ಕುರಿತು ಪ್ರತಿ ದಿನ ಹಲವು ವರದಿಗಳು ಬರುತ್ತಿವೆ. ಈ ಪರಿಸ್ಥಿತಿಗೆ ಹಲವು ಸರ್ಕಾರಗಳ ನೀತಿಗಳೇ ಕಾರಣವಾಗಿದೆ” ಎಂದು ದೂರಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ | ಗೃಹಿಣಿ ಅಸಹಜ ಸಾವು: ಕೊಲೆ ಶಂಕೆ

ಇತ್ತೀಚಿಗಷ್ಟೇ ವಿವಾಹವಾಗಿದ್ದ ಗೃಹಿಣಿಯೊಬ್ಬರ ಅಸಹಜ ಸಾವು ಸಂಭವಿಸಿರುವ ಘಟನೆ ಹುಬ್ಬಳ್ಳಿ ನಗರದ...

ಧಾರವಾಡ | ಆ. 15 ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವ, ಏಕತೆ ರೂಢಿಸಿಕೊಳ್ಳುವ ದಿನ: ಸಚಿವ ಸಂತೋಷ್ ಲಾಡ್

ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ...

ಹುಬ್ಬಳ್ಳಿ | ಜಾತಿ ನಿಂದನೆ; ಸೂಕ್ತ ಕಾನೂನು‌ ಕ್ರಮಕ್ಕೆ ಕುರುಬ ಸಮಾಜ ಒತ್ತಾಯ

ಸಾರ್ವಜನಿಕವಾಗಿ ಕುರುಬ ಸಮಾಜವನ್ನು ನಿಂದನೆ ಮಾಡಿ ಹಾಗೂ ಕುರುಬ ಸಮುದಾಯದ ಮುಖ್ಯಮಂತ್ರಿ...

Download Eedina App Android / iOS

X