ಅಂತರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಜಂಟಿಯಾಗಿ ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಅಕ್ಟೋಬರ್ನಲ್ಲಿ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ವಿಶ್ವದ ಹಲವು ದೇಶಗಳ ಶ್ರೇಯಾಂಕಿತ ಟೆನ್ನಿಸ್ ಆಟಗಾರರು ಭಾಗವಹಿಸಲಿದ್ದಾರೆ.
ಟೆನ್ನಿಸ್ ಕ್ರೀಡಾ ಆಸಕ್ತರಿಗೆ ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್ನ ಆಜೀವ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ ಟೆನ್ನಿಸ್ ಕೋರ್ಟ್ ಸುಮಾರು 96 ವರ್ಷಗಳ ಐತಿಹಾಸಕತೆಯನ್ನು ಹೊಂದಿದೆ. ಐದು ಸಿಂಥೆಟಿಕ್ ಯುಎಸ್ಟಿಎ ಶ್ರೇಣಿಯ ಟೆನ್ನಿಸ್ ಕೋರ್ಟ್ ಹೊಂದಿದೆ. ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಜಿಮ್ ಹಾಗೂ ಟೆನ್ನಿಸ್ ಉತ್ತಮ ತರಬೇತಿದಾರರನ್ನು ಹೊಂದಿದೆ. ಇಲ್ಲಿನ ಟೆನ್ನಿಸ್ ಕೋರ್ಟ್ ಅಂತರಾಷ್ಟ್ರೀಯ ಗುಣಮಟ್ಟದ್ದಾಗಿದೆ.
ಈ ಸುದ್ದಿ ಓದಿದ್ದೀರಾ? ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು: ಮುಖ್ಯಮಂತ್ರಿ ಚಂದ್ರು
ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್ದ ಆಜೀವ ಸದಸ್ಯತ್ವ ಪಡೆಯಲು ಸೆಪ್ಟೆಂಬರ್ 15 ರಿಂದ 22ರವರೆಗೆ ಸೀಮಿತ ಕಾಲಾವಕಾಶ ನೀಡಲಾಗಿದೆ. ನಿಗದಿತ ಅರ್ಜಿ ನಮೂನೆ ಹಾಗೂ ಸದಸ್ಯತ್ವ ಶುಲ್ಕದೊಂದಿಗೆ ಆಸಕ್ತರು ಸದಸ್ಯತ್ವ ಪಡೆಯಬಹುದು. ಸಂಪರ್ಕಕ್ಕಾಗಿ ಕಾರ್ಯದರ್ಶಿ ಸಂದೀಪ ಬಣವಿ, ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್ ಡಿ ಸಿ ಕಾಂಪೌಂಡ್, ಮೊ.ಸಂ: 9448460955, 6361398510 ಗೆ ಸಂಪರ್ಕಿಸಬಹುದು. ಟೆನ್ನಿಸ್ ಕಚೇರಿಗೆ ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದೆಂದು ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.