ಈ ದಿನ ವರದಿ ಫಲಶೃತಿ | ಧಾರವಾಡ: ಅಂಗನವಾಡಿ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದ ಅಧಿಕಾರಿಗಳು

Date:

Advertisements

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ‌ ವಿವಿಧ ಅಂಗನವಾಡಿಗಳಿಗೆ ಭೇಟಿಕೊಟ್ಟು ಅಲ್ಲಿರುವ ಮೂಲಭೂತ ಸಮಸ್ಯೆಗಳ ಕುರಿತು ಈದಿನ.ಕಾಮ್ ವರದಿ ಮಾಡಿ ಸುದ್ಧಿ ಪ್ರಸಾರ ಮಾಡಿತ್ತು. ಸುದ್ಧಿಯನ್ನು ಅಂಗನವಾಡಿಗಳು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಹರಿಸಿತ್ತು.

ಈದಿನ.ಕಾಮ್ ಅಧಿಕಾರಿಗಳ ಬೆಂಬಿಡದೆ ಸಮಸ್ಯೆಗಳ ಬಗೆಹರಿಸಲು ತಿಳಿಸಿ, ವರದಿಯನ್ನೂ ಮಾಡಲಾಗಿತ್ತು. ಅದರಂತೆ ತಾಲೂಕಿನ ಶಿರೂರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಚಿಣ್ಣರನ್ನು ಶಿಥಿಲಗೊಂಡ ಕಟ್ಟಡದಿಂದ ನೂತನ ಹೊಸ ಕಟ್ಟಡವಾದ ಬೇರೆ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದಾರೆ.

1001222681

ಶಿಥಿಲಾವಸ್ಥೆಗೆ ತಲುಪಿದ್ದ ಪಂಚಾಯತ್ ಕಟ್ಟಡದಲ್ಲಿದ್ದ ಅಂಗನವಾಡಿ

Advertisements

ಸಮಸ್ಯೆ ಏನಿತ್ತು?

ಶಿರೂರ ಗ್ರಾಮದ ಅಂಗನವಾಡಿ ಕೇಂದ್ರವೊಂದನ್ನು ಹಲವಾರು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಗ್ರಾಮ ಪಂಚಾಯತಿ ಕಟ್ಟಡದಲ್ಲೇ, ಅದೂ ಆಗಲೊ‌ಈಗಲೊ ಬೀಳುವ ಹಂತದಲ್ಲಿದ್ದ ಕಟ್ಟಡದಲ್ಲೇ ನಡೆಸುತ್ತಿದ್ದರು.

ಅದೇ ಕಟ್ಟಡದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳೂ ಕಾರ್ಯನಿರ್ವಹಿಸುತ್ತಿದ್ದರು. ಜನಜಂಗುಳಿ‌ ಹೆಚ್ಚಾದಾಗ ಚಿಣ್ಣರನ್ನು ಪಕ್ಕದಲ್ಲಿರುವ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಅಲ್ಲಿಯೇ ಪಾಠ ಹೇಳಿಕೊಡುವ ಪರಿಪಾಠ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಾ ಬಂದಿತ್ತು.‌ ಅಲ್ಲದೇ, ಈ ಬಗ್ಗೆ ಸ್ಥಳೀಯರು ಕೂಡ ನಮಗೆ ಮಾಹಿತಿ ನೀಡಿದ್ದರು.

1001222682

ಈ ಕುರಿತು ಗ್ರಾಮಸ್ಥರು ಹಲವುಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿರಲಿಲ್ಲ. ಇದೀಗ ಈದಿನ.ಕಾಮ್ ವರದಿಗೆ ಸ್ಪಂದಿಸಿ ಎಚ್ಚೆತ್ತುಕೊಂಡ ಅಧಿಕಾರಿಗಳು ಶಿಥಿಲಗೊಂಡ ಕಟ್ಟಡದಲ್ಲಿದ್ದ ಮಕ್ಕಳನ್ನು ಪಂಚಾಯತಿ ಪಕ್ಕದಲ್ಲಿರುವ ಮತ್ತೊಂದು ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದಾರೆ.

IMG 20240805 WA0207
ಶರಣಪ್ಪ ಗೊಲ್ಲರ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಆ. 15 ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವ, ಏಕತೆ ರೂಢಿಸಿಕೊಳ್ಳುವ ದಿನ: ಸಚಿವ ಸಂತೋಷ್ ಲಾಡ್

ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ...

ಹುಬ್ಬಳ್ಳಿ | ಜಾತಿ ನಿಂದನೆ; ಸೂಕ್ತ ಕಾನೂನು‌ ಕ್ರಮಕ್ಕೆ ಕುರುಬ ಸಮಾಜ ಒತ್ತಾಯ

ಸಾರ್ವಜನಿಕವಾಗಿ ಕುರುಬ ಸಮಾಜವನ್ನು ನಿಂದನೆ ಮಾಡಿ ಹಾಗೂ ಕುರುಬ ಸಮುದಾಯದ ಮುಖ್ಯಮಂತ್ರಿ...

ಹುಬ್ಬಳ್ಳಿ | ಜನಸಾಮಾನ್ಯರಿಂದ ವೃತ್ತಿ ರಂಗಭೂಮಿ ದೂರವಾಗುತ್ತಿದೆ: ಸುಭಾಷ್ ನರೇಂದ್ರ

ಸಿನೆಮಾ, ದೂರದರ್ಶನ, ಮೊಬೈಲ್‌ಗಳ ಹಾವಳಿಯಿಂದ ಮತ್ತು ಆಧುನಿಕತೆಗೆ ಮಾರುಹೋಗಿ ರಂಗ ಭೂಮಿಯ...

Download Eedina App Android / iOS

X