ಮಾದಿಗ ಸಮುದಾಯಕ್ಕೆ ಒಳಮೀಸಲಾತಿಗೆ ಒತ್ತಾಯ; ನ.18ರಂದು ಹೈದರಾಬಾದ್ ಚಲೋ

Date:

Advertisements

ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೆ ಒತ್ಥಾಯಿಸಿ ಮಾದಿಗ ದಂಡೋರ ಎಂಆರ್‌ಪಿಎಸ್‌ ಸಂಘಟನೆಯು ನವೆಂಬರ್ 18ರಂದು ಹೈದರಾಬಾದ್‌ ಚಲೋಗೆ ಕರೆ ಕೊಟ್ಟಿದೆ. ಚಲೋಗೆ ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟವು ಬೆಂಬಲ ನೀಡುತ್ತದೆ ಎಂದು ಒಕ್ಕೂಟದ ಸಂಚಾಲಯ ಮಂಜುನಾಥ ಕೊಂಡಪಲ್ಲಿ ತಿಳಿಸಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಡೆಯ ಅಧಿವೇನವು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯಲಿದೆ. ಆ ವೇಳೆ, ಒಳ ಮೀಸಲಾತಿ ಜಾರಿ ಬಗ್ಗೆ ಚರ್ಚಿಸಿ ಅಂಗೀಕರಿಬೇಕೆಂದು ಒತ್ತಾಯಿಸಿ ಮಾದಿಗ ದಂಡೋರ MRPS ನವೆಂಬರ್ 18ರಂದು ಹೈದರಾಬಾದ್ ಚಲೋಗೆ ಕರೆಕೊಟ್ಟಿದೆ. ಈಗಾಗಲೇ ಅಕ್ಟೋಬರ್ 7ರಿಂದ ತೆಲಂಗಾಣದ ಆಲಂಪುರದಿಂದ ಹೈದರಾಬಾದ್‌ಗೆ 250 ಕಿ.ಮೀ ‘ವಿಶ್ವರೂಪ ಮಹಾ ಪಾದಯಾತ್ರೆ’ ಆರಂಭಿಸಿದೆ. ನವೆಂಬರ್ 18ರಂದು ಹೈದರಾಬಾದ್‌ನಲ್ಲಿ ಮಾದಿಗರ ‘ವಿಶ್ವರೂಪ ಬೃಹತ್ ಸಮಾವೇಶ’ ನಡೆಯಲಿದೆ” ಎಂದು ಅವರು ತಿಳಿಸಿದ್ದಾರೆ.

“ಕರ್ನಾಟಕದಲ್ಲಿ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂದು ‘ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟ’ ಮತ್ತು ಹಲವಾರು ಹೋರಾಟಗಾರರು ಹೋರಾಟ ನಡೆಸಿದ್ದರು. ಕಳೆದ ಜನವರಿಯಲ್ಲಿ ಒಕ್ಕೂಟವು ಹುಬ್ಬಳ್ಳಿಯಲ್ಲಿ 68 ದಿನಗಳ ಅನಿರ್ಧಿಷ್ಠಾವಧಿಯ ಧರಣಿ ಸತ್ಯಾಗ್ರಹ ನಡೆಸಿತ್ತು. ಎಲ್ಲರ ಹೋರಾಟದ ಫಲವಾಗಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್‌ ತಿಂಗಳಿನಲ್ಲಿ ಒಳಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಒಳಮೀಸಲಾತಿ ಪ್ರಸ್ತಾವನೆ ಬಗ್ಗೆ ಕೇಂದ್ರವು ಚರ್ಚಿಸಿ, ಜಾರಿಗೊಳಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದ್ದಾರೆ.

Advertisements

“ಮಂದಕೃಷ್ಣ ಮಾದಿಗ ಅವರು ಸುಪ್ರೀಂ ಕೋರ್ಟಿನಲ್ಲಿ ಒಳಮೀಸಲಾತಿಗಾಗಿ ಸಲ್ಲಿಸಿದ್ದ ಪಿಟಿಷನ್ ಅರ್ಜಿಯನ್ನು ಕಳೆದ ವಾರ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಗೆ ಪರಿಗಣಿಸಿದೆ” ಎಂದು ತಿಳಿಸಿದ್ದಾರೆ.

“ಒಳಮೀಸಲಾತಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲು ಹೈದರಾಬಾದ್ ಚಲೋಗೆ ಕರೆಕೊಡಲಾಗಿದ್ದು,  ದೇಶದ ಮೂಲೆ ಮೂಲೆಗಳಿಂದ ಅಂದಾಜು 25-30 ಲಕ್ಷ ಜನ ಹೈದರಾಬಾದ್‌ನಲ್ಲಿ ಒಂದೆಡೆ ಸೇರಲಿದ್ದಾರೆ. ಉತ್ತರ ಕರ್ನಾಟಕದ ವಿವಿಧ ಮೂಲೆಗಳಿಂದಲೂ ಮಾದಿಗ ಸಮುದಾಯ ಮತ್ತು ಮಾದಿಗ ಉಪಜಾತಿಗಳ ಸಮುದಾಯಗಳ ಜನರು ಸಮಾವೇಶಕ್ಕೆ ತೆರಳಲಿದ್ದಾರೆ” ಎಂದು ಅವರು ತಳಿಸಿದ್ದಾರೆ.

ಈ ವೇಳೆ, ಹಿರಿಯ ಮುಖಂಡ ಜಯರಾಮ ಜನ್ನಿ, ಪ್ರಕಾಶ ಹುಬ್ಬಳ್ಳಿ, ಗಂಗಾಧರ ಪೇರೂರು, ದುರ್ಗಪ್ಪ ಪೂಜಾರ, ಗೋವಿಂದ ಬಂಡಮೀದಪಲ್ಲಿ, ಸೋಮಶೇಖರ ಸಾಕೆ, ಪ್ರಕಾಶ ಕನಮಕ್ಕಲ, ಸಿ ವಿ ಸ್ವಾಮಿ, ಕುಲ್ಲಾಯಪ್ಪ ಮಂತ್ರಿ, ರಾಜೇಶ ಮಂತ್ರಗಾರ, ಗೋಪಾಲ ದೊಡ್ಡಮನಿ, ಮಲ್ಲಪ್ಪ ದೇವಸುರ, ಸತ್ಯನಾರಾಯಣ ಎಂ, ಶ್ರೀಕಾಂತ ಮದರಕಲ್ಲ ಇನ್ನೂ ಮುಂತಾದವರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

Download Eedina App Android / iOS

X