ಸಿಎಂ ಆಗಿದ್ದ ಕುಮಾರಸ್ವಾಮಿ, ಬೊಮ್ಮಾಯಿಗೆ ಕಾವೇರಿ ನೀರಿನ ಹಂಚಿಕೆ ಬಗ್ಗೆ ಕನಿಷ್ಠ ಜ್ಞಾನವಿಲ್ಲವೇ: ಲಕ್ಷ್ಮಣ್‌ ಪ್ರಶ್ನೆ

Date:

Advertisements
  • ಅಣೆಕಟ್ಟಿನ ಗೇಟ್‌ ತೆರೆಯುವ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇದೆ
  • ‘ಕುಮಾರಸ್ವಾಮಿ ಪ್ರಶ್ನಿಸಬೇಕಿರುವುದು ನಮ್ಮನ್ನಲ್ಲ, ಬಿಜೆಪಿಯನ್ನು’

ಎಚ್‌ ಡಿ ಕುಮಾರಸ್ವಾಮಿ ಎರಡು ಸಲ ಮತ್ತು ಬಸವರಾಜ ಬೊಮ್ಮಾಯಿ ಒಂದು ಸಲ ಮುಖ್ಯಮಂತ್ರಿಗಳಾಗಿದ್ದವರು. ಆದರೂ ಕಾವೇರಿ ನೀರಿನ ವಿಚಾರದ ಬಗ್ಗೆ ಇವರಿಗೆ ಕನಿಷ್ಠ ಜ್ಞಾನವಿಲ್ಲವೇ? ನಮ್ಮ ಕಾಡ (ಕಾವೇರಿ ನೀರಾವರಿ ನಿಗಮ) ಅವರ ಕೆಲಸ ಕೇವಲ ನಾಲೆಗಳಿಗೆ ನೀರನ್ನು ಹರಿಸುವ, ಹಂಚಿಕೆ ಮಾಡುವ ಕೆಲಸ. ಮುಖ್ಯ ಅಣೆಕಟ್ಟಿನ ಗೇಟ್‌ ತೆರೆಯುವ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇದೆ. ಇದು ಗೊತ್ತಿಲ್ಲವೇ ಮಾಜಿ ಮುಖ್ಯಮಂತ್ರಿಗಳಿಗೆ? ಕಾಂಗ್ರೆಸ್‌ ವಕ್ತಾರ ಎಂ ಲಕ್ಷ್ಮಣ್‌ ಕುಟುಕಿದ್ದಾರೆ

ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಜಲ ಆಯೋಗ ಅಂತ ಇದೆ. ಅದರ ನಿರ್ದೇಶನದ ಮೇರೆಗೆ ಈ ಪ್ರಾಧಿಕಾರ ಕೆಲಸ ಮಾಡುತ್ತದೆ. ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಸುಮಾರು 114 ಗೇಟ್‌ಗಳಿವೆ. ಮೊದಲು ಗೇಟ್‌ ಅನ್ನು ಮ್ಯಾನುಯಲ್‌ ಆಗಿ ತೆರೆಯಬೇಕಿತ್ತು, ಒಂದು ವರ್ಷದ ಹಿಂದೆ ಇದನ್ನು ಬದಲಾಯಿಸಲಾಗಿದೆ. ದೆಹಲಿಯಲ್ಲಿ ಇದರ ನಿಯಂತ್ರ ಇದೆ” ಎಂದರು.

“ಆಗಸ್ಟ್‌ 16 ನೇ ತಾರೀಖು ಕೇಂದ್ರ ಜಲ ಸಂಪನ್ಮೂಲ ಸಚಿವರ ಸಮ್ಮುಖದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಎಂಜಿನಿಯರ್‌ಗಳ ಸಭೆ ನಡೆಸಿದರು, ನಾವು ನೀರು ಕಡಿಮೆ ಇದೆ ಎಂದು ಹೇಳಿದೆವು, ಅವರು ಸಭೆ ಬಹಿಷ್ಕಾರ ಮಾಡಿ ಹೋದರು. ನೇರವಾಗಿ ಸುಪ್ರೀಂ ಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಿದರು. ಈ ಅರ್ಜಿ ಸೋಮವಾರದ ಒಳಗೆ ವಾದ- ವಿವಾದಕ್ಕೆ ಬರುತ್ತದೆ” ಎಂದು ಹೇಳಿದರು.

Advertisements

ಸುಪ್ರೀಂ ಕೋರ್ಟ್‌ ತುರ್ತು ಆದೇಶ

“ಕರ್ನಾಟಕ-ತಮಿಳುನಾಡು- ಪಾಂಡಿಚೇರಿಗೆ ನೀರನ್ನು ಹರಿಸಬೇಕು. ಆಗಸ್ಟ್‌ 31ನೇ ತಾರೀಖಿನ ತನಕ ದಿನನಿತ್ಯ 10 ಸಾವಿರ ಕ್ಯೂಸೆಕ್ಸ್‌ ನೀರನ್ನು ಹರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಒಂದು ತುರ್ತು ಆದೇಶ ನೀಡಿದೆ. ಆನಂತರ ನಾವು ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

“ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದ್ದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರು ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟಿನ ಅಂತಿಮ ತೀರ್ಮಾನ ಏನಿದೆ ಎಂದು ವಿವರಿಸಲಾಗುವುದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಚುನಾವಣೆ ಸೋತ ನಂತರವೂ ಗೂಂಡಾ ರಾಜಕಾರಣ ಬಿಡದ ಬಿಜೆಪಿ: ರಮೇಶ್‌ ಬಾಬು ವಾಗ್ದಾಳಿ

“2018 ಮಾರ್ಚ್‌ ತಿಂಗಳಲ್ಲಿ ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಅಂತಿಮ ತೀರ್ಮಾನ ನೀಡಿತು. ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಮುಖ ನಾಲ್ಕು ಅಣೆಕಟ್ಟುಗಳಿವೆ ಹಾರಂಗಿ, ಕಬಿನಿ, ಹೇಮಾವತಿ, ಕೃಷ್ಣರಾಜ ಇವುಗಳು ಸಂಪೂರ್ಣವಾಗಿ ಕಾವೇರಿ ವಾಟರ್‌ ಮಾನಿಟರಿಂಗ್‌ ಅಥಾರಿಟಿ ಕೈಯಲ್ಲಿ ಇದ್ದು ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಬಳಿ ಇಲ್ಲ” ಎಂದು ವಿವರಿಸಿದರು.

ಕೇಂದ್ರದಿಂದ ಕರ್ನಾಟಕ ವಿರೋಧಿ ನಡೆ

“ಕೇಂದ್ರ ಸರ್ಕಾರ ಇದಕ್ಕೆ ಒಂದು ತಂಡ ಕಳಿಸಬೇಕು, ಪರಿಶೀಲಿಸಬೇಕು, ತಮಿಳುನಾಡಿನ ಸರ್ಕಾರ ಕರ್ನಾಟಕದ ವಿರುದ್ದ ಕೋರ್ಟಿಗೆ ಹೋಗಿಲ್ಲ, ಕೇಂದ್ರ ನೀರಾವರಿ ಪ್ರಾಧಿಕಾರದ ವಿರುದ್ಧ ಹೋಗಿರುವುದು, ಇದನ್ನು ಸರಿಯಾಗಿ ತಿಳಿದುಕೊಳ್ಳದೆ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಸರ್ಕಾರದ ಮೇಲೆ ಆರೋಪ ಮಾಡಿದರೆ ಏನು ಲಾಭ? ಇದರ ವಿರುದ್ದ ತಕ್ಷಣ ಕೇಂದ್ರ ಸರ್ಕಾರ ಅಫಿಡವಿಟ್‌ ಸಲ್ಲಿಸಬೇಕಾಗಿತ್ತು. ಆದರೆ ಮಾಡಿಲ್ಲ, ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ಧೋರಣೆ” ಎಂದು ವಾಗ್ದಾಳಿ ನಡೆಸಿದರು.

“ಕುಮಾರಸ್ವಾಮಿ ಅವರು ಯಾವಾಗ ಯಾರ ಪರ ಮಾತನಾಡುತ್ತಾರೆ ಎನ್ನುವುದು ಆ ದೇವರಿಗೆ ಗೊತ್ತು. ಕುಮಾರಸ್ವಾಮಿ ಅವರೇ ಟ್ವೀಟ್‌ ಮಾಡುವ ಮೊದಲು ಪರಿಶೀಲಿಸಿ ಮಾತನಾಡಿ, ನೀವು ಬಿಜೆಪಿಗೆ ಪ್ರಶ್ನಿಸಬೇಕು, ನಮ್ಮನ್ನಲ್ಲ. ಬಿಜೆಪಿ ಪರವಾಗಿ ಏಕೆ ಮಾತನಾಡುತ್ತಿದ್ದೀರಾ” ಎಂದು ಪ್ರಶ್ನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X