ದೊಡ್ಡಬಳ್ಳಾಪುರದಲ್ಲಿ ಕೆರೆ ನೀರು ಕಲುಷಿತವಾಗಿದೆ, ಅಂತರ್ಜಲ ನೀರು ವಿಷವಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ, ಸ್ವಾತಂತ್ರ್ಯ ದಿನದಂದು 17 ಗ್ರಾಮಗಳ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುತ್ತೇವೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಕೆರೆ ನೀರು ಕಲುಷಿತವಾಗಿದೆ, ಅಂತರ್ಜಲ ನೀರು ವಿಷವಾಗಿದೆ, ಶುದ್ಧೀಕರಣ ಘಟಕ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ, ಎರಡು ಗ್ರಾಮ ಪಂಚಾಯಿತಿಯ 17 ಗ್ರಾಮಗಳ ಜನರು ಶುದ್ಧ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ, ಅಧಿಕಾರಿಗಳಿಂದ ಸಮಸ್ಯೆಗಳಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವ ಎಚ್ಚರಿಕೆಯನ್ನ ದೊಡ್ಡಬಳ್ಳಾಪುರದ ಹೋರಾಟಗಾರರು ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಕೆರೆ ಏರಿ ಮೇಲೆ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಡಾ.ಟಿ.ಎಚ್.ಆಂಜಿನಪ್ಪ ಮಾತನಾಡಿ, ಜನರ ಆರೋಗ್ಯ ಸುತ್ತಮುತ್ತಲಿನ ಪರಿಸರವನ್ನ ಅವಲಂಬಿಸಿದೆ. ಕುಡಿಯುವ ನೀರು, ಸೇವಿಸುವ ಗಾಳಿ ಶುದ್ಧವಾಗಿರಬೇಕು. ಶುದ್ಧ ನೀರಿಗಾಗಿ ಕಳೆದ 4 ವರ್ಷಗಳಿಂದ ಹೋರಾಟ ಮಾಡುತ್ತಿರುವುದು ದುಃಖದ ವಿಷಯ. ಇದು ನಮ್ಮ ಕೊನೆಯ ಹೋರಾಟವಾಗಿದ್ದು, ರಾಷ್ಟ್ರ ಧ್ವಜ್ವದ ಮೇಲೆ ಗೌರವಿದೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ದಿನ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವುದಾಗಿ ತಿರ್ಮಾನ ಮಾಡಲಾಗಿದೆ ಎಂದರು.
ಇದನ್ನು ಓದಿದ್ದೀರಾ? ಕಲಬುರಗಿ | ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲು
ಗ್ರಾಮಸ್ಥರಾದ ರಾಮಕೃಷ್ಣಪ್ಪ ಮಾತನಾಡಿ, ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಕೈಗಾರಿಕಾ ತ್ಯಾಜ್ಯ ನೀರು ಸೇರುತ್ತಿರುವುದರಿಂದ ಎರಡು ಪಂಚಾಯಿತಿಯ 36 ಕೊಳವೆ ಬಾವಿಗಳಲ್ಲಿ 34 ಕೊಳವೆ ಬಾವಿಗಳ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಇತ್ತೀಚೆಗೆ ಕೊಳವೆ ಬಾವಿಯಲ್ಲಿ ಕಪ್ಪು ಬಣ್ಣದ ನೀರು ಬಂದಿದೆ. ಇಂತಹ ವಿಷದ ಪರಿಸರದಲ್ಲಿ ನಾವು ಬದುಕುತ್ತಿದ್ದೇವೆ. ನಾವು ಬದುಕುಲು ಬೇರೆ ಆಯ್ಕೆ ಇಲ್ಲದೆ ಇರುವುದರಿಂದ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುತ್ತಿದ್ದೇವೆ. ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದರು.

https://shorturl.fm/9kUJM