ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ದೊಡ್ಡಬಳ್ಳಾಪುರದ ಶ್ರೀ ವಿದ್ಯಾ ಜ್ಯೋತಿ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹೆಸರಾಂತ ಕನ್ನಡ ಚಲನಚಿತ್ರ ನಟ ನಟಿಯರಿಂದ ಸಾಮಾಜಿಕ ನಾಟಕೋತ್ಸವ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಚಲನಚಿತ್ರ ನಟರಾದ ಡಿಂಗ್ರಿ ನಾಗರಾಜ್, ಮಂಡ್ಯ ಜಯರಾಂ, ಕೆ.ಮುರಳಿ, ಓಬಳೇಶ್, ಮಲ್ಲಿಕಾರ್ಜುನ್, ರಘುಪತಿ, ಕೃಷ್ಣಪ್ಪ, ಮಂಜುಳಾ, ಮಾಲ, ಮಹೇಶ್ವರಿ, ಮುನಿಯಮ್ಮ, ಪುಷ್ಪಮ್ಮ ಮುಂತಾದವರು ನಟಿಸಿ ಜನಮನ್ನಣೆ ಗಳಿಸಿದರು.

