ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಡಾ.ಶರಣಬಸವಪ್ಪ ಕ್ಯಾತನೂರ ಅವರು ಪ್ರಪ್ರಥಮ ಬಾರಿಗೆ ಕಮಲಾಪುರ ತಾಲೂಕಿನ ಆರೋಗ್ಯ ಕೇಂದ್ರಕ್ಕೆ ಸಂದರ್ಶನ ನೀಡಿರುವ ಸಂದರ್ಭದಲ್ಲಿ ತಾಲೂಕಿನ ಜನರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಡಾ.ಕ್ಯಾತನೂರ ಅವರು ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿ, “ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಜಾಗರೂಕತೆ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆರೋಗ್ಯವಂತ ಸಮಾಜಕ್ಕೆ ಆರೋಗ್ಯವಂತ ಜನರು ಬೇಕು” ಎಂದು ತಿಳಿಸಿದರು.
ಮಕ್ಕಳ ಮಹಿಳೆಯರ, ಗರ್ಭಿಣಿಯರ, ವಯೋವೃದ್ಧರ ಬಗ್ಗೆ ಕಾಳಜಿ ವಹಿಸಿ ಅವರನ್ನು ಕಾಲಕಾಲಕ್ಕೆ ಎಚ್ಚರದಿಂದ ನೋಡಿಕೊಳ್ಳುವುದರಿಂದ ವೈದ್ಯರ ಕೆಲಸ ಕಡಿಮೆಯಾಗುತ್ತದೆ. ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಮಲಾಪುರ ತಾಲೂಕಿನ ಆರೋಗ್ಯ ಅಧಿಕಾರಿಗಳಾದ ಡಾ.ಮಾರುತಿರಾವ ಕಾಂಬಳೆ ಅವರು ಉಪಸ್ಥಿತರಿದ್ದರು. ಹಿರಿಯ ಮುಖಂಡರಾದ ಮಲ್ಲೇಶ್ವಪ್ಪ ಮಾಳಗೆ, ದಲಿತ ಮುಖಂಡರಾದ ವಿದ್ಯಾಧರ ಮಾಳಗೆ, ಡಾ.ಕೆ.ಎಸ್. ಬಂಧು.ಸಿದ್ದೇಶ್ವರ, ಮಲ್ಲಿಕಾರ್ಜುನ ಡೊಂಗರಗಾಂವ ಅಮರನಾಥ ಪಟ್ಟನಾಯಕ, ವಿಜಯಲಕ್ಷ್ಮೀ, ವಿನೋದಕುಮಾರ ಅಮಲಾಪೂರ, ಪಾಂಡುರಂಗ ಪೂಜಾರಿ, ಅಂಬಾದಾಸ ವಂಟಿ ಮತ್ತು ಭೂಪತಿ ಧಿನ್ಸಿ ಇನ್ನಿತರರು ಇದ್ದರು.
