ಕಲಬುರಗಿ| ನಾಟಕ ಕಲಾವಿದರನ್ನು ಬೆಳೆಸುವ ಅವಶ್ಯಕತೆ ಇದೆ : ಸಂಜೀವಕುಮಾರ್

Date:

Advertisements

ಅಫಜಲಪುರದ ರಂಗ ಸಂಗ ಬಳಗ ಸಹಯೋಗದಲ್ಲಿ ಮೈಸೂರಿನ ನಿರ್ದಿಗಂತ ತಂಡ ಪ್ರಸ್ತುತ ಪಡಿಸಿರುವ ʼತಿಂಡಿಗೆ ಬಂದ ತುಂಡೇರಾಯʼ ನಾಟಕವು ಅಫಜಲಪುರ ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಯಶಸ್ವಿ ಪ್ರದರ್ಶನ ಕಂಡಿತು.

ಪೌರಕಾರ್ಮಿಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಚಲವಾದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼರಂಗಭೂಮಿಯ ವಿಭಿನ್ನ ಆಯಾಮಗಳನ್ನು ತಾಲೂಕಿಗೆ ಪರಿಚಯಿಸುವ ಉದ್ದೇಶವಿರುವ ರಂಗ ಸಂಗ ಬಳಗದ ಈ ವಿಭಿನ್ನ ಪ್ರಯತ್ನ ಶ್ಲಾಘನೀಯ. ನಾಡಿನ ಇತಿಹಾಸ, ಕಲೆ, ಸಾಂಸ್ಕೃತಿಕ ಶ್ರೀಮಂತಿಕೆ ಮೆರೆಯುವ ಹಾಗೂ ಸೌಹಾರ್ದ ಸಮಾಜ ನಿರ್ಮಾಣ ಮಾಡುವ ಕಥೆಗಳಿರುವ ನಾಟಕಗಳು ಇನ್ನೂ ಹೆಚ್ಚು ಪ್ರದರ್ಶನವಾಗಲಿʼ ಎಂದು ಆಶಯ ವ್ಯಕ್ತಪಡಿಸಿದರು.

ಶಿಕ್ಷಕ ಡಿ.ಎಂ.ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿ, ʼಅಫಜಲಪುರ ತಾಲೂಕಿನ ಹವ್ಯಾಸಿ ಹೊಸ ಅಲೆಯ ನಾಟಕ ಪ್ರದರ್ಶನದ ಇತಿಹಾಸವನ್ನು ಹೇಳಿದರು. 1992ರಲ್ಲಿ ನೀನಾಸಂ ತಂಡದ ‘ಹೂ ಹುಡುಗಿ’ ‘ದ್ಯಾವನೂರು’ ನಾಟಕವನ್ನು ಪ್ರದರ್ಶಿಸಲಾಗಿತ್ತು. ಇದರೊಂದಿಗೆ ಆಟ – ಮಾಟ ತಂಡದ ಮತ್ತು ಶಿವಸಂಚಾರ ತಂಡದ ಹಲವಾರು ನಾಟಕಗಳನ್ನು ನಮ್ಮಲ್ಲಿ ಪ್ರದರ್ಶನ ಏರ್ಪಡಿಸಿತ್ತು. ಈ ರೀತಿಯ ಪ್ರಯತ್ನಗಳಿಂದಾಗಿ ಅಫಜಲಪುರದ ಅನಿಲ ರೇವೂರ್, ಚಿಂಚೋಳಿ ಗ್ರಾಮದ ಗಂಗೂಬಾಯಿ ಇಂತಹ ಹಲವಾರು ಕಲಾವಿದರು ಇಂದು ರಂಗ ಭೂಮಿ ಮತ್ತು ಚಿತ್ರರಂಗಗಳಲ್ಲಿ ಭವಿಷ್ಯ ಕಂಡುಕೊಂಡಿದ್ದಾರೆʼ ಎಂದು ತಿಳಿಸಿದರು.

Advertisements

ತಾಲೂಕು ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ್ ಬಗಲಿ ಮಾತನಾಡಿ, ʼನಮ್ಮ ತಾಲೂಕಿನಲ್ಲಿ ಇಂತಹ ವಿಭಿನ್ನ ಪ್ರಯತ್ನಗಳು ಅಪರೂಪವಾಗಿ ನಡೆಯುತ್ತವೆ. ಕಲ್ಯಾಣ ಕರ್ನಾಟಕದಲ್ಲಿ ಇಂತಹ ಹೊಸ ಅಲೆಯ ನಾಟಕಗಳು ಮತ್ತು ಕಲಾವಿದರನ್ನು ಬೆಳೆಸುವ ಅವಶ್ಯಕತೆ ಇದೆ. ಆ ಪ್ರಯತ್ನ ರಂಗ ಸಂಗ ಬಳಗ ಮಾಡುತ್ತಿರುವುದು ಸಂತೋಷದಾಯಕʼ ಎಂದರು.

ಈ ಸುದ್ದಿ ಓದಿದ್ದೀರಾ? ಅಕ್ರಮ ಪಡಿತರ ವಿರುದ್ಧ ಕಾರ್ಯಾಚರಣೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ : ಸಚಿವ ಕೆ ಎಚ್ ಮುನಿಯಪ್ಪ

ಕಾರ್ಯಕ್ರಮದಲ್ಲಿ ಪ್ರಮುಖರಾದ ಬೀರಣ್ಣ ಪೂಜಾರಿ ಕನಕ, ಶ್ರೀಮಂತ ಬಿರಾದಾರ್, ರವಿ ಗೌರ್, ರಾಜು ಆರೇಕರ್, ಗೌತಮ ಸಕ್ಕರಗಿ, ಶರಣ ಬಸು ಹೊಸಮನಿ ಸದಾಶಿವ ಮೇತ್ರಿ, ಸಾದಿಕ್ ನಾಗೂರ್, ಬಸವರಾಜ್ ಕೆಂಗನಾಳ್, ಶ್ರೀಕಾಂತ್ ಕಾಚಾಪೂರ್, ಬಿ.ಎಂ.ರಾವ್, ಶಾಂತರಸ ಹೊಸ್ಮನಿ, ಅಬ್ಬಾಸಲಿ ಸದಾಫ್, ರವಿಚಂದ್ರ ಅತನೂರ, ಪ್ರಭಾವತಿ ಮೇತ್ರಿ, ರಾಹುಲ್ ಸಿಂಗೆ, ಹಿರಗಪ್ಪ ಜಿಡ್ಡಿಮನಿ ಬಾಬು ನಡುವಿನಕೇರಿ ಸೇರಿದಂತೆ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X