ಕಲಬುರಗಿ ಜಿಲ್ಲೆಯ ಹಾಗರಗಾ ಮುಖ್ಯ ರಸ್ತೆ ದುರಸ್ತಿಗೆ ₹14 ಕೋಟಿ ವೆಚ್ಚದಲ್ಲಿ ಕಾಮಗಾರಿ ಶುರುವಾಗಿರುವುದು ಕಂಡುಬಂದಿದೆ. ಉತ್ತರ ಮತ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಈ ದಿನ.ಕಾಮ್ ವರದಿಯನ್ನು ಗಮನಿಸಿ ರಸ್ತೆ ದುರಸ್ತಿ ಮಾಡಲು ಮುಂದಾಗಿರುವುದು ಅತ್ಯಂತ ಶ್ಲಾಘನೀಯ.
ಈ ಹಿಂದೆ ಹಾಗರಗಾ ಮುಖ್ಯ ಹೆದ್ದಾರಿ ಅವ್ಯವಸ್ಥೆ ಕುರಿತು ಈ ದಿನ.ಕಾಮ್ 2024ರ ಆಗಸ್ಟ್ 26ರಂದು ʼಕಲಬುರಗಿ | ಇಬ್ಬರು ಶಾಸಕರಿದ್ದರೂ ದುರಸ್ತಿ ಕಾಣದ ಹಾಗರಗಾ ಮುಖ್ಯ ಹೆದ್ದಾರಿ; ಸ್ಥಳೀಯರಿಂದ ಹಿಡಿಶಾಪʼ ಎಂಬ ತಲೆಬರಹದಡಿ ವರದಿ ಪ್ರಕಟಿಸಿ, ಶಾಸಕರ ಗಮನಕ್ಕೆ ತರಲಾಗಿತ್ತು. ಈ ವರದಿ ಮಾಡಿ ಒಂದು ತಿಂಗಳಾದರು ಯಾವುದೇ ದುರಸ್ತಿ ಕುರಿತು ಕಂಡಿರಲಿಲ್ಲ.

ಇದರ ಬೆನ್ನೆಲ್ಲೇ ಹದಗೆಟ್ಟ ಹಾಗರಗಾ ಮುಖ್ಯ ಹೆದ್ದಾರಿ ಕುರಿತು ಸ್ಥಳೀಯರ ಅಭಿಪ್ರಾಯ, ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿ ರಸ್ತೆ ಅವ್ಯವಸ್ಥೆರ ಭೀಕರ ಸ್ಥಿತಿಯ ವಿಡಿಯೋ ಕಲೆಹಾಕಿ ಸೆಪ್ಟೆಂಬರ್ 30ರಂದು ʼಇಬ್ಬರು ಶಾಸಕರ ಮಧ್ಯ ಸಿಲುಕಿ ಗುಂಡಿ ಪಾಲದ ರಸ್ತೆʼ ಎಂಬ ಶೀರ್ಷಿಕೆಯಡಿ ವಿಡಿಯೊ ಸ್ಟೋರಿ ಪ್ರಸಾರವಾದ ಬೆನ್ನೆಲ್ಲೇ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಇಂದು ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಲ್ಲಿ ಮುಂದಾಗಿದ್ದಾರೆ.
ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿ ಅಸಿಸ್ಟೆಂಟ್ ಎಂಜಿನಿಯರ್ ಹಾಜಿ ಪಾಟೀಲ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಹಾಗರಗಾ ಕ್ರಾಸ್ನಿಂದ ಮಾಲಗತ್ತಿ ಕ್ರಾಸ್ವರೆಗೆ ಅಂದರೆ 1.080 ಕಿಮೀ ಎಸ್ಡಿಬಿಸಿ, ಬಿಎಮ್ ಈಗಿರುವ ರಸ್ತೆಗೆ ಮತ್ತೆ ಡಾಂಬರ್ ಹಾಕಿ ರಸ್ತೆ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಮಾಲಗತ್ತಿ ಕ್ರಾಸ್ನಿಂದ 940 ಮೀಟರ್ ರಿಕನ್ಸ್ಟ್ರಕ್ಷನ್(ಪುನ್ನರ್ ನವೀಕರಣ) ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.

“1 ಮೀಟರ್ ವಿನ್ಯಾಸದಲ್ಲಿ1.3 ಕಿಮೀ ರಸ್ತೆ ಬಲಭಾಗ, ಎಡಭಾಗದಲ್ಲಿ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ₹14 ಕೋಟಿ ವೆಚ್ಚದಲ್ಲಿ ಎಂಇಸಿಒ ಕನ್ಸ್ಟ್ರಕ್ಷನ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಅಡಿಯಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಈರಣ್ಣ ಎಂಬುವವರು ಈ ಕಾಮಗಾರಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ” ಎಂದು ತಿಳಿಸಿದರು.