ತುಮಕೂರು ತಾಲೂಕು ಗೂಳೂರು ಹೋಬಳಿಯ ಏ ಕೆ ಕಾವಲ್‌ನ ಜಮೀನೊಂದರಲ್ಲಿ ನಡೆದಿದ್ದ ಬೆಳೆ ಹಾನಿಗೆ ಸಂಬಂಧಿಸಿದಂತೆ ಈ ದಿನ ಡಾಟ್ ಕಾಮ್ನ ನಿರಂತರ ವರದಿ ಪ್ರಕಟಿಸಿದ ಪರಿಣಾಮ, ಆರೋಪಿಗಳ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊನೆಗೂ ಎಫ್‌ಐಆರ್ ದಾಖಲಾಗಿದೆ.
ರೈತ ರಾಮಾಂಜಿನಯ್ಯ ಹಾಗೂ ರಾಧಾಕೃಷ್ಣ ಅವರ ಜಮೀನಿನಲ್ಲಿ ಬೆಳೆದಿದ್ದ ರಾಗಿ ಪೈರಿನ ಮೇಲೆಯೇ ಆಗಸ್ಟ್ 13ರಂದು ಉಳುಮೆ ಮಾಡಿ ಕ್ರೌರ್ಯ ಮೆರೆದಿದ್ದ ಆರೋಪಿ ಪದ್ಮನಾಭ್ ಮೇಲೆ ಪೊಲೀಸರು ಎಫ್‌ಐಆರ್ ದಾಖಲು ಮಾಡುವ ಮೂಲಕ ಪುಂಡಾಟಕ್ಕೆ ಬ್ರೇಕ್ ಹಾಕಿದ್ದಾರೆ.

‘ರಾಗಿ ಪೈರಿನ ಮೇಲೆ ಉಳುಮೆ ಮಾಡಿ ಕ್ರೌರ್ಯ’, ‘ಬೆಳೆ ಹಾನಿ: ಆರೋಪಿ ರಕ್ಷಣೆಗೆ ಯತ್ನ’ ಎಂಬ ಶೀರ್ಷಿಕೆ ಬರಹದಡಿಯಲ್ಲಿ ಈದಿನ ಡಾಟ್ ಕಾಮ್ ನಲ್ಲಿ ವಾರವಾದರೂ ಪ್ರಕರಣ ದಾಖಲಿಸದ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿ ಫಾಲೋ-ಅಪ್ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಪೊಲೀಸರು, ಸ್ಥಳ ಮಹಜರು ಮಾಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ತುಮಕೂರು| ಬೆಳೆ ಹಾನಿ : ಆರೋಪಿಗಳ ರಕ್ಷಣೆಗೆ ಯತ್ನ
ಈ ದಿನ.ಕಾಮ್ ಈ ಕಾರ್ಯಕ್ಕೆ ರೈತರಿಂದ ಶ್ಲಾಘನೆ ವ್ಯಕ್ತವಾಗಿದ್ದು, ರೈತರೊಂದಿಗೆ ನಿಂತು ನ್ಯಾಯ ಒದಗಿಸಿಕೊಡಲು ಶ್ರಮಿಸುವ ಈದಿನ ಡಾಟ್ ಕಾಮ್ ಗೆ ನಾವು ಎಂದಿಗೂ ಋಣಿಯಾಗಿರುತ್ತೇವೆ ಎನ್ನುವ ಮೂಲಕ ಸಂತ್ರಸ್ತರು ಕೃತಜ್ಞತೆ ಸಲ್ಲಿಸಿದರು.
