ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅಶೋಕ್ ಗ್ಯಾಸ್ ಏಜೆನ್ಸಿಯವರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದಲ್ಲದೇ, ಡೋರ್ ಡೆಲಿವರಿ ಮಾಡಲು ನಿರಾಕರಣೆ ಮಾಡುತ್ತಿರುವುದಾಗಿ ಗ್ರಾಹಕರು ದೂರಿದ್ದರು. ಇದರಿಂದ ಗ್ರಾಹಕರಿಗೆ ವಿಪರೀತ ತೊಂದರೆ ಆಗಿತ್ತು.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಗ್ರಾಹಕರು ನೋವು ತೋಡಿಕೊಂಡಿದ್ದರಿಂದ ಈ ಬಗ್ಗೆ ಸೆ.23ರಂದು ಈ ದಿನ.ಕಾಮ್ ವಿಸ್ತ್ರತವಾಗಿ ವರದಿ ಮಾಡಿತ್ತು.
ಅಶೋಕ ಗ್ಯಾಸ್ ಏಜೆನ್ಸಿಯವರು ಹೆಚ್ಚುವರಿ ಹಣ ಪಡೆಯುತ್ತಿದ್ದರು. ಸಿಲಿಂಡರ್ಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿರಲಿಲ್ಲ. ಇದನ್ನು ಸರಬರಾಜು ವಾಹನದ ಡ್ರೈವರ್ ಕೂಡ ಒಪ್ಪಿಕೊಂಡಿದ್ದರು. ಸೇವಾ ನ್ಯೂನತೆಗಳನ್ನು ಪ್ರಶ್ನಿಸುವ ಗ್ರಾಹಕರಿಗೆ ಏಜೆನ್ಸಿ ಬದಲಿಸಿಕೊಳ್ಳುವಂತೆ ಬೆದರಿಕೆ ಹಾಕುತಿದ್ದರು. ಈ ಹಿನ್ನೆಲೆಯಲ್ಲಿ ಸೆ.23ರಂದು ಈ ದಿನ.ಕಾಮ್ ‘ಶ್ರೀರಂಗಪಟ್ಟಣ | ಗ್ಯಾಸ್ ಏಜೆನ್ಸಿಯಿಂದ ಹೆಚ್ಚುವರಿ ಹಣ ವಸೂಲಿ, ಡೋರ್ ಡೆಲಿವರಿ ನಿರಾಕರಣೆ: ಗ್ರಾಹಕರ ಆರೋಪ’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು.
ಈದಿನ.ಕಾಮ್ ವರದಿಯ ನಂತರ ಎಚ್ಚೆತ್ತುಕೊಂಡ ಶ್ರೀರಂಗಪಟ್ಟಣ ತಾಲೂಕು ಆಡಳಿತ ಅಶೋಕ ಗ್ಯಾಸ್ ಏಜೆನ್ಸಿಗೆ ಸೆ.24ರಂದು ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ಲಿಖಿತ ಸಮಜಾಯಿಷಿ ನೀಡುವಂತೆ ತಾಕೀತು ಮಾಡಿದೆ.

ಗ್ಯಾಸ್ ಸಿಲಿಂಡರ್ಗಳನ್ನು ಗ್ರಾಹಕರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ವಿತರಿಸಬೇಕಾಗಿರುತ್ತದೆ. ಹಾಗೂ ಡೋರ್ ಡೆಲಿವರಿ ನೀಡಬೇಕಾಗಿರುತ್ತದೆ. ಆದರೆ ನಿಮ್ಮ ಏಜೆನ್ಸಿಯ ಡೆಲಿವರಿ ಸಿಬ್ಬಂದಿಗಳು ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುವುದು ಮತ್ತು ಡೋರ್ ಡೆಲಿವರಿ ಮಾಡಲು ನಿರಾಕರಣೆ ಮಾಡುವುದು ಎಲ್.ಪಿ.ಜಿ. (ರೆಗ್ಯೂಲೇಷನ್ ಆಪ್ ಸಪ್ಪೆ ಅಂಡ್ ಡಿಸ್ಟ್ರಿಬ್ಯೂಷನ್) ಆದೇಶ 2000ಕ್ಲಾಸ್ (ಡಿ) ಷೆಡ್ಯೂಲ್-1, ಕ್ಲಾಸ್ 3(4)11ರ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ.
ನಿಮ್ಮ ಏಜೆನ್ಸಿಗೆ ಸಂಬಂಧಿಸಿದಂತೆ ಮೇಲ್ಕಂಡ ಲೋಪದೋಷಗಳಿಗೆ ಕಾರಣವೇನೆಂಬುದಕ್ಕೆ ನಿಮ್ಮ ಲಿಖಿತ ಸಮಜಾಯಿಷಿಯನ್ನು ಮೂರು ದಿನಗಳೊಳಗಾಗಿ ಸಲ್ಲಿಸಲು ತಿಳಿಸಿದೆ. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ಮೇಲಿನ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ಮುಂದಾದರೂ ಸಾರ್ವಜನಿಕರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕಾನೂನು ಪ್ರಕಾರ ಸರಿಯಾದ ಸೇವೆ ಒದಗಿಸ ಬೇಕೆಂಬುದು ಈದಿನ.ಕಾಮ್ನ ವರದಿಯ ಆಶಯ. ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನಕ್ಕೆ ತಂದದ್ದಕ್ಕೆ ಶ್ರೀರಂಗಪಟ್ಟಣದ ಜನತೆ ಈ ದಿನ.ಕಾಮ್ಗೆ ಧನ್ಯವಾದ ಸಲ್ಲಿಸಿದ್ದಾರೆ.

ಇಂಡಿಯನ್ ಗ್ಯಾಸ್ ನವರು ಇದೆ ತರ ಮಾಡ್ತಾರೆ ನಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇದ್ದರೆ ನಾವು ಗ್ಯಾಸ್ ಬುಕ್ ಮಾಡಿದರೆ ಮೇನ್ ರೋಡ್ ನಲ್ಲಿ ಇಳಿಸಿ ವಯಸ್ಸಾದವರಿಗೆ ಬೆಲೆ ಕೊಡದೆ ಹೋಗುತ್ತಾರೆ ಮತ್ತೆ ಆ ಗ್ಯಾಸ್ ಸಿಲಿಂಡರ್ ನ್ನು ಮನೆಗೆ ತರುವುದಕ್ಕೆ ನಮ್ಮ ತಾಯಿ ಸುಸ್ತು ಆಗ್ತಾರೆ ನಮ್ಮ ಊರು ದೇಶವಳ್ಳಿ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೋಕ್, ಕಿರುಗವಾಲು ಹೋಬಳಿ
ಬಂಡ್ಡಿ ಸಿದ್ದೇಗೌಡ ಗ್ಯಾಸ್ ಏಜೆನ್ಸಿ ಅರಕೆರೆ ಶ್ರೀರಂಗಪಟ್ಟಣ ತಾಲ್ಲೋಕು, ಅರಕೆರೆ ಹೋಬಳಿ, ಮಂಡ್ಯ ಜಿಲ್ಲೆ