ಬೀದರ್‌ | ಆಂತರ್ಯದ ಪ್ರೇರಣೆಯಿಂದ ಪ್ರತಿಯೊಬ್ಬರ ಬೆಳವಣಿಗೆ ಸಾಧ್ಯ : ವಿಕ್ರಮ ವಿಸಾಜಿ

Date:

Advertisements

ಬಾಹ್ಯ ಪ್ರೇರಣೆ ಒಂದು ಹಂತದವರೆಗೆ ಇರುತ್ತದೆ. ಆಂತರ್ಯದ ಪ್ರೇರಣೆಯಿಂದ ಪ್ರತಿಯೊಬ್ಬರ ಬೆಳವಣಿಗೆ ಸಾಧ್ಯ. ಜಯದೇವಿತಾಯಿ ಲಿಗಾಡೆ ಹಾಗೂ ದೇಶಾಂಶ ಹುಡಗಿ ತಮ್ಮೊಳಗಿನ ಪ್ರೇರಣೆಯಿಂದಲೇ ದೊಡ್ಡ ಲೇಖಕರಾಗಿದ್ದಾರೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು.

ಬಸವಕಲ್ಯಾಣದ ಶಾಂತಿನಿಕೇತನದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ನಡೆದ ಡಾ. ಜಯದೇವಿತಾಯಿ ಲಿಗಾಡೆ ಅವರ ಜನ್ಮದಿನ ಪ್ರಯುಕ್ತ ಡಾ. ಜಯದೇವಿತಾಯಿ ಲಿಗಾಡೆ ಗೌರವ ಪುರಸ್ಕಾರ ಪ್ರಧಾನ ಹಾಗೂ ಶಿವಾಜಿ ಮೇತ್ರೆ ಅವರು ಸಂಪಾದಿಸಿದ ಡಾ.ಜಯದೇವಿತಾಯಿ ಲಿಗಾಡೆ ವಾಚಿಕೆ, ಭೀಮಾಶಂಕರ ಬಿರಾದಾರ ಸಂಪಾದಿಸಿದ ದೇಶಾಂಶ ಹುಡುಗಿ ವಾಚಿಕೆ ಬಿಡುಗಡೆ ಸಮಾರಂಭದಲ್ಲಿ ಕೃತಿಗಳ ಕುರಿತು ಮಾತನಾಡಿದರು.

“ಬುದ್ಧನ ವ್ಯಕ್ತಿತ್ವದ ಹಲವು ಮುಖಗಳು ದೇಶಾಂಶ ಹುಡುಗಿಯವರು ಬುದ್ದ ಚರಿತೆಯಲ್ಲಿ, ಶರಣರ ಚಿಂತನೆ ಪ್ರಭಾವ ಲಿಗಾಡೆ ತಾಯಿಯವರ ಕಾವ್ಯದಲ್ಲಿ ಅಡಕವಾಗಿವೆ. ಬಸವಣ್ಣನವರ ಜಾತ್ಯತೀತ ಮನೋಭಾವ, ವಚನಕಾರ್ತಿಯರ ಪ್ರಜ್ಞೆ, ಗಾಂಧೀಜಿಯ ಸರಳತೆ, ಮರಾಠಿ ಸಂತರ ಪ್ರೇರಣೆ, ಕನ್ನಡ ಮರಾಠಿ ಸಂಸ್ಕೃತಿಯ ಅಪರೂಪದ ಲೇಖಕಿ ಲಿಗಾಡೆಯವರಾಗಿದ್ದರು. ಕನ್ನಡ, ಉರ್ದು, ಹಿಂದಿ, ಮರಾಠಿ ಭಾಷೆಯ ತಿಳುವಳಿಕೆ, ಸಾಹಿತ್ಯ, ರಂಗಭೂಮಿ, ಸಾಕ್ಷರತೆ, ಸಂಗೀತದ ಒಡನಾಡಿ ದೇಶಾಂಶರು ಈ ಇಬ್ಬರೂ ಅನನ್ಯ ಲೇಖಕರು” ಎಂದರು.

Advertisements

ಮನೆ ಮಾರಿ ಮಹಾಕಾವ್ಯ ಪ್ರಕಟಿಸಿದ ದೇಶಾಂಶ ಹುಡಗಿ :

“ಮುಖ್ಯ ಲೇಖಕರು ಸಾಹಿತ್ಯದ ಹಲವು ಪ್ರಕಾರಗಳನ್ನು ಬರೆದಿರುತ್ತಾರೆ. ಅವರ ಸಾಹಿತ್ಯದ ಕುರಿತು ಆಸಕ್ತಿ ಬೆಳೆಸಲು ವಾಚಿಕೆಗಳಿಂದ ಸಾಧ್ಯ. ಸಣ್ಣ ಸಣ್ಣ ವಾಚಿಕೆ ಓದುತ್ತ ಪ್ರಧಾನ ಲೇಖಕರ ಸಮಗ್ರ ಸಾಹಿತ್ಯದ ಕಡೆಗೆ ಹೋಗಬೇಕು. ವಾಚಿಕೆ ಎಂಬುದು ಪಾಶ್ಚಿಮಾತ್ಯದ ರೀಡರ್ಸ್‌ನ ರೂಪವಾಗಿದೆ. ಡಾ.ಜಯದೇವಿತಾಯಿ ಲಿಗಾಡೆ ಅವರು ತಮ್ಮ ಬದುಕನ್ನು ಶರಣ ಸಾಹಿತ್ಯ ಅಧ್ಯಯನಕ್ಕೆ ಸಮರ್ಪಿಸಿಕೊಂಡರು. ಭೌತಿಕ ಸಂಪತನ್ನು ಬಿಟ್ಟು ಆಂತರಿಕ ಶ್ರೀಮಂತಿಕೆ ಬೆಳೆಸಿಕೊಂಡವರು ಲಿಗಾಡೆ ತಾಯಿ ಮತ್ತು ದೇಶಾಂಶ ಹುಡುಗಿ. ಮನೆ ಮಾರಿ ಮಹಾಕಾವ್ಯ ಪ್ರಕಟಿಸಿದ ಬರಹಗಾರ ದೇಶಾಂಶರು. ಲಿಗಾಡೆ ಅವರು ತನ್ನ ಹುಟ್ಟೂರು ಕರ್ನಾಟಕಕ್ಕೆ ಸೇರಲಿಲ್ಲ ತನ್ನ ದೇಹವಾದರೂ ಕನ್ನಡ ನಾಡಿನಲ್ಲಿ ಸೇರಲಿ ಎಂದು ಕಲ್ಯಾಣದಲ್ಲಿಯೇ ಲೀನರಾದರು” ಎಂದು ಸ್ಮರಿಸಿದರು.

“ಅನೇಕರು ಲೇಖಕರು ಮಾತ್ರ ಆಗಿರುತ್ತಾರೆ. ಸಾಧಕರಾಗುವುದು ಕಷ್ಟ. ಲೇಖಕರಾಗಿ ಸಾಧಕರಾದವರಲ್ಲಿ ಜಯದೇವಿತಾಯಿ ಲಿಗಾಡೆ ಮತ್ತು ದೇಶಾಂಶ ಹುಡಗಿಯವರು. ಮಧುರ ಚೆನ್ನರಂತೆ ಲಿಗಾಡೆತಾಯಿ ಮತ್ತು ದೇಶಾಂಶ ಹುಡಗಿ ಸಾಧನಾ ಮಾರ್ಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಾಮಾಜಿಕ ಸಾಧನೆ, ಆಧ್ಯಾತ್ಮಿಕ ಸಾಧನೆ, ಶೈಕ್ಷಣಿಕ ಸಾಧನೆ, ಸಾಹಿತ್ಯಿಕ ಸಾಧನೆ, ಸಾಂಸ್ಕೃತಿಕ ಸಾಧನೆಗೈದ ಮಹನಿಯರು” ಎಂದರು.

ʼಕಲ್ಯಾಣ ವಾಚಿಕೆʼ ಕೃತಿ ಪ್ರಕಟವಾಗಲಿ :

ಗುಲ್ಬರ್ಗ ವಿವಿ ಪ್ರಾಧ್ಯಾಪಕ ಹಾಗೂ ಹಿರಿಯ ಚಿಂತಕ ಪ್ರೊ. ಎಚ್.ಟಿ. ಪೋತೆ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, “ವಚನಗಳ ತಾತ್ವಿಕತೆ ಜಗತ್ತಿಗೆ ತಲುಪಿಸಬೇಕಾದ ದಾರಿ ಹುಡುಕಬೇಕಿದೆ. ಆಧುನಿಕ ಕಾಲದಲ್ಲಿ ಅಂಬೇಡ್ಕರವರ ಪ್ರಭಾವ ಜಗತ್ತಿಗೆ ಆವರಿಸಿದೆ. ಬಸವಣ್ಣನವರು ಸೇರಿ ಹಲವು ವಚನಕಾರರ ತತ್ವ ಚಿಂತನೆ ಜಗತ್ತಿಗೆ ತಲುಪಿಸಬೇಕಿದೆ. ಕಲ್ಯಾಣಕ್ಕೆ ಚಾರಿತ್ರಿಕ, ಸಾಂಸ್ಕೃತಿಕ ಕುರುಹಗಳಿವೆ. ವಚನ-ತತ್ವಪದ-ಸೂಫಿಯ ಸ್ಪರ್ಶವಿದೆ. ಹಾಗಾಗಿ ‘ಕಲ್ಯಾಣ ವಾಚಿಕೆ’ ಕೃತಿ ಬರಬೇಕು” ಎಂದು ಆಶಯ ವ್ಯಕ್ತಪಡಿಸಿದರು.

“ಡಾ. ಜಯದೇವಿತಾಯಿ ಲಿಗಾಡೆ ಹಾಗೂ ದೇಶಾಂಶ ಹುಡುಗಿ ಈ ನೆಲದಲ್ಲಿ ಕನ್ನಡ ಮತ್ತು ಕನ್ನಡತ್ವವನ್ನು ತಮ್ಮ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಎರಡು ವಾಚಕೆಗಳು ಅವರ ಬರಹಗಳ ಬಿಂಬವನ್ನು ಇಬ್ಬರು ಸಂಪಾದಕರ ಕಟ್ಟಿಕೊಟ್ಟಿದ್ದಾರೆ. ಈ ವಾಚಿಕೆಗಳ ಮೂಲಕ ಅವರ ಒಟ್ಟು ಸಾಹಿತ್ಯದ ಅಧ್ಯಯನಕ್ಕೆ ಓದುಗರು ಪ್ರವೇಶಿಸಬೇಕು” ಎಂದರು.

ಕಲಬುರ್ಗಿ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಬಸವರಾಜ ಕೊನೆಕ್ ಮಾತನಾಡಿ, “ಈ ಭಾಗದ ಹಿರಿಯ ಲೇಖಕರ ಬರಹ ಕುರಿತು ಕಿರಿಯ ಬರಹಗಾರರು ಸಂಪಾದಿಸಿದ ಯೋಜನೆ ವಾಚಿಕೆಗಳಾಗಿವೆ. ಒಬ್ಬ ಮಹತ್ವದ ಲೇಖಕನ ಒಟ್ಟು ಬರಹದ ಹಲವು ಭಾಗ ಓದುಗರಿಗೆ ತಲುಪಿಸುವ ಉದ್ದೇಶ ಇದಾಗಿದೆ. ‘ಕಲ್ಯಾಣ ವಾಚಿಕೆ’ ಬರುವ ಡಿಸೆಂಬರ್‌ನಲ್ಲಿ ಪ್ರಕಟಿಸುವ ಯೋಚನೆ ಹೊಂದಿದ್ದೇನೆ” ಎಂದರು.

WhatsApp Image 2024 06 24 at 5.17.03 PM 1
ಪ್ರೊ. ವಿಕ್ರಮ ವಿಸಾಜಿ ಅವರಿಗೆ 2024ನೇ ಸಾಲಿನ ಡಾ. ಜಯದೇವಿತಾಯಿ ಲಿಗಾಡೆ ಗೌರವ ಪುರಸ್ಕಾರ ನೀಡಿ ಗೌರವಿಸಿದರು.

ಹಿರಿಯ ಸಾಹಿತಿ ಡಾ. ಶ್ರೀಶೈಲ್ ನಾಗರಾಳ ಮಾತನಾಡಿ, “ಸಿದ್ದಲಿಂಗೇಶ್ವರ ಪ್ರಕಾಶನವು ಮಹತ್ವದ ಪುಸ್ತಕ ಪ್ರಕಟಿಸಿ ನಾಡಿನ ಗಮನ ಸೆಳೆದಿದೆ. ಲಿಗಾಡೆ‌ ತಾಯಿ ಮತ್ತು ದೇಶಾಂಶ ಹುಡಗಿ ಈ ನೆಲದ ಅಸ್ತಿತ್ವವನ್ನು ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಎರಡು ವಾಚಿಕೆಯಲ್ಲಿ ಅವರ ಬರಹದ ಸತ್ವ ಅಡಗಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಹುಡೇದ ಹಾಗೂ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ರವೀಂದ್ರನಾಥ ನಾರಾಯಣಪೂರ ಮಾತನಾಡಿದರು.

ಪ್ರೊ. ಸಿ.ಬಿ. ಪರತಾಪುರೆ, ಪ್ರೇಮಸಾಗರ ಪಾಟೀಲ, ಸಂಜುಕುಮಾರ ನಡುಕರ, ಓಂನಾಥ ಇಂಡೆ ಅವರಿಗೆ ಪ್ರೊ. ಎಚ್.ಟಿ. ಪೋತೆ ಅವರು ಕೃತಿಗಳು ನೀಡುವ ಮೂಲಕ ಈ ಎರಡೂ ಕೃತಿಗಳ ಲೋಕಾರ್ಪಣೆ ಮಾಡಿದರು. ಕಲಬುರ್ಗಿಯ ಸಿಯುಕೆ ಪ್ರಾಧ್ಯಾಪಕ, ಕವಿ, ವಿಮರ್ಶಕ, ನಾಟಕಕಾರ ಪ್ರೊ. ವಿಕ್ರಮ ವಿಸಾಜಿ ಅವರನ್ನು 2024ರ ಡಾ. ಜಯದೇವಿತಾಯಿ ಲಿಗಾಡೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಕನ್ನಡದಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸೀಕರಿಸಿದ ಸಾಗರ್‌ ಖಂಡ್ರೆ

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಚಿಂತಕ, ಲೇಖಕ, ಸರೋದ ವಾದಕ ಡಾ. ರಾಜೀವ್ ತಾರನಾಥ ಹಾಗೂ ಹಿರಿಯ ಲೇಖಕಿ ಡಾ. ಕಮಲಾ ಹಂಪನಾ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಡಾ. ಚಿತ್ರಶೇಖರ ಚಿಕಳ್ಳಿ, ಮೀನಾಕ್ಷಿ ಬಿರಾದಾರ, ಸುಮಂಗಲಾ ಮೇತ್ರೆ, ಲಕ್ಷ್ಮೀಬಾಯಿ ಪಾಟೀಲ, ಕನ್ಯಾಕುಮಾರಿ ಮೂಲಗೆ, ಭೀಮಾಶಂಕರ ಮಾಶಾಳಕರ, ಶರಣಬಸವ ಬಿರಾದಾರ, ಶಾಲಿವಾನ ಕಾಕನಾಳೆ, ರಾಜಕುಮಾರ ಬಿರಾದಾರ, ಶ್ರೀಪತಿ ಎಕ್ಕೆಳ್ಳಿ, ನಾಗಪ್ಪ ನಿಣ್ಣೆ, ಸಿದ್ಧಲಿಂಗೇಶ್ವರ ಪ್ರಕಾಶನದ ಸಿದ್ಧಲಿಂಗ ಕೊನೇಕ, ಶರಣಬಸಪ್ಪ ವಡ್ಡನಕೇರಿ, ಶಿವಪುತ್ರ ಗಿರಗಂಟೆ ಹಾಗೂ ಇತರರಿದ್ದರು. ಪ್ರತಿಷ್ಠಾನದ ದೇವೇಂದ್ರ ಬರಗಾಲೆ ನಿರೂಪಿಸಿದರು. ಡಾ.ಭೀಮಾಶಂಕರ ಬಿರಾದಾರ ಸ್ವಾಗತಿಸಿದರು. ಡಾ. ಶಿವಾಜಿ ಮೇತ್ರೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಕೊಲೆಯಾದ ದಲಿತ ವಿದ್ಯಾರ್ಥಿನಿ ಮನೆಗೆ ಎಸ್ಎಫ್ಐ ನಿಯೋಗ; ಪೋಷಕರ ಭೇಟಿ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದ ಕೊಲೆಗೀಡಾದ ದಲಿತ ವಿದ್ಯಾರ್ಥಿನಿ...

ಸಿಎಂ ಸ್ಥಾನ ಸಿಗುತ್ತೆ ಎಂದರೆ ನಾನು ಕೂಡ ಆರ್‌ಎಸ್‌ಎಸ್‌ ಗೀತೆ ಹಾಡುತ್ತೇನೆ: ಸಚಿವ ಸತೀಶ್ ಜಾರಕಿಹೊಳಿ

ಆರ್‌ಎಸ್‌ಎಸ್‌ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಎಂದರೆ ನಾನು, ಶಾಸಕ...

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

Download Eedina App Android / iOS

X