ಟಿ20 ವಿಶ್ವಕಪ್ | ಆಸ್ಟ್ರೇಲಿಯಾ ವಿರುದ್ಧ 24 ರನ್‌ಗಳ ಜಯ: ಟೀಮ್ ಇಂಡಿಯಾ ಸೆಮಿಫೈನಲ್‌ಗೆ

Date:

ಸೈಂಟ್ ಲೂಸಿಯಾದ ಡೇರೆನ್ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು(ಜೂನ್ 24) ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ 2024ರ ಸೂಪರ್ 8ರ ಘಟ್ಟದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ 24 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ 2023ರ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಸೆಮಿಫೈನಲ್ ಪ್ರವೇಶಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಟೀಮ್ ಇಂಡಿಯಾವು, ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಅರ್ಧಶತಕದ ನೆರವಿನಿಂದ 205 ರನ್‌ಗಳನ್ನು ದಾಖಲಿಸಿತ್ತು.

206 ರನ್‌ಗಳ ಗುರಿಯನ್ನು ಬೆನ್ನಟ್ಟಲು ಹೊರಟ ಮಿಚೆಲ್ ಮಾರ್ಷ್‌ ನೇತೃತ್ವದ ಆಸ್ಟೇಲಿಯಾವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 24 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಆಸ್ಟ್ರೇಲಿಯಾವು ಸೋಲೊಪ್ಪಿಕೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜೂನ್ 24ರಂದು ಸೈಂಟ್ ವಿನ್ಸೆಂಟ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ವ್ಯರ್ಥವಾದ ಟ್ರಾವಿಸ್ ಹೆಡ್ ಹೋರಾಟ

ಭಾರತ ನೀಡಿದ್ದ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 6 ರನ್ ಗಳಿಸಿ ವಾರ್ನರ್ ಅರ್ಶ್ ದೀಪ್ ಸಿಂಗ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಹಂತದಲ್ಲಿ ಜೊತೆಗೂಡಿದ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಶ್ 81 ರನ್ ಗಳ ಅಮೋಘ ಜೊತೆಯಾಟವಾಡಿದರು.

ಒಂದು ಹಂತದಲ್ಲಿ ಪಂದ್ಯ ಭಾರತ ತಂಡದ ಕೈತಪ್ಪುವ ಅಪಾಯ ಕೂಡ ಇತ್ತು. ಈ ಹಂತದಲ್ಲಿ ಅಕ್ಸರ್ ಪಟೇಲ್ ಹಿಡಿದ ಕ್ಯಾಚ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಭಾರತ ತಂಡಕ್ಕೆ ಅಪಾಯಕಾರಿಯಾಗಿ ಬ್ಯಾಟ್ ಮಾಡುತ್ತಿದ್ದ ಮಿಚೆಲ್ ಮಾರ್ಶ್ ಅಕ್ಸರ್ ಪಟೇಲ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು.

ಕುಲ್‌ದೀಪ್ ಯಾದವ್ ಎಸೆದ 9ನೇ ಓವರ್ ನ ಕೊನೆಯ ಎಸೆತದಲ್ಲಿ ಮಾರ್ಶ್ ಅದ್ಭುತ ಹೊಡೆತಕ್ಕೆ ಮುಂದಾಗಿ ಅಕ್ಸರ್ ಪಟೇಲ್ ಕ್ಯಾಚಿತ್ತು ಔಟಾದರು. ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್‌ ಬಾರಿಸಲು ಮಾರ್ಶ್ ಯತ್ನಿಸಿದರೂ ಬೌಂಡರಿ ಲೈನ್ ಬಳಿ ಅಕ್ಸರ್ ಪಟೇಲ್ ಆ ಎಸೆತವನ್ನು ಅದ್ಭುತವಾಗಿ ಜಂಪ್ ಮಾಡಿ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಇಡೀ ಪಂದ್ಯಕ್ಕೆ ಮೊದಲ ತಿರುವು ನೀಡಿದರು.

ಆಸ್ಟ್ರೇಲಿಯಾ-ಅಫ್ಘಾನಿಸ್ತಾನಕ್ಕೆ ತೆರೆದ ‘ಸೆಮಿ’ ಬಾಗಿಲು!

ಟೀಮ್ ಇಂಡಿಯಾ ವಿರುದ್ಧದ ಇಂದಿನ ಪಂದ್ಯದಲ್ಲಿ ಸೋತರೂ ಕೂಡ ಆಸ್ಟ್ರೇಲಿಯಾಗೂ ಕೂಡ ಸೆಮಿಫೈನಲ್‌ಗೆ ತೆರಳಲು ಅವಕಾಶವಿದೆ. ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಒಂದು ವೇಳೆ ಅಫ್ಘಾನಿಸ್ತಾನ ಸೋತಲ್ಲಿ, ರನ್‌ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾವು ಸೆಮಿಫೈನಲ್‌ ಪ್ರವೇಶಿಸಲಿದೆ. ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆದ್ದಲ್ಲಿ ಆಸ್ಟ್ರೇಲಿಯಾದ ಸೆಮಿಫೈನಲ್‌ ಕನಸಿಗೆ ತೆರೆ ಬೀಳಲಿದೆ.

ಬಾಂಗ್ಲಾದೇಶಕ್ಕೂ ಇದೆ ಒಂದು ಚಾನ್ಸ್‌

ಟೀಮ್ ಇಂಡಿಯಾ ಇಂದು ಆಸ್ಟ್ರೇಲಿಯಾ ವಿರುದ್ಧ ಗೆದ್ದ ಬಳಿಕ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ-ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲದೇ, ಬಾಂಗ್ಲಾದೇಶಕ್ಕೂ ಕೂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ.

ಕುತೂಹಲಕಾರಿ ಅರ್ಹತೆಯ ಸನ್ನಿವೇಶ ಸದ್ಯ ನಿರ್ಮಾಣವಾಗಿದ್ದು, ಅಫ್ಘಾನ್ ವಿರುದ್ಧ ಬಾಂಗ್ಲಾದೇಶವು 61 ರನ್‌ಗಳಿಗಿಂತ ಹೆಚ್ಚು ಗೆದ್ದರೆ ಅಥವಾ 13 ಓವರ್‌ಗಳಲ್ಲಿ ಚೇಸ್ ಮಾಡಿದರೆ ಅರ್ಹತೆ ಪಡೆಯಲಿದೆ. ಬಾಂಗ್ಲಾದೇಶ 61 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದರೆ ಆಸ್ಟ್ರೇಲಿಯಾ ಅರ್ಹತೆ ಪಡೆಯುತ್ತದೆ. ಬಾಂಗ್ಲಾದೇಶವನ್ನು ಸೋಲಿಸಿದರೆ ಅಫ್ಘಾನಿಸ್ತಾನ ಅರ್ಹತೆ ಪಡೆಯುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಗ್ಲೆಂಡ್ v/s ವೆಸ್ಟ್‌ ಇಂಡೀಸ್‌ | ಇಂಗ್ಲೆಂಡ್‌ಗೆ ಇನ್ನಿಂಗ್ಸ್‌ ಗೆಲುವು; ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಆ್ಯಂಡರ್ಸನ್‌

ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ...

ಯೂರೋ ಕಪ್ | ನೆದರ್‌ಲೆಂಡ್ಸ್ ಮಣಿಸಿ ಇಂಗ್ಲೆಂಡ್ ಫೈನಲ್‌ಗೆ; ಸ್ಪೇನ್ ವಿರುದ್ಧ ಪೈಪೋಟಿ

ನೆದರ್​ಲೆಂಡ್ಸ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಹೆಚ್ಚುವರಿ 91ನೇ ನಿಮಿಷದಲ್ಲಿ ಬದಲಿ ಆಟಗಾರ...

ಕೆಲವೇ ತಿಂಗಳ ಅಂತರದಲ್ಲಿ ಏಳು-ಬೀಳು ಎದುರಿಸಿ ಗೆದ್ದು ಬಂದ ಹಾರ್ದಿಕ್ ಪಾಂಡ್ಯ!

ಅಂದು ಡಿಸೆಂಬರ್ 19, 2023. ಐಪಿಎಲ್ 2024ರ ಪಂದ್ಯಾವಳಿಯ ಹರಾಜಿನ ಸಮಯ....

ಚಾಂಪಿಯನ್ಸ್ ಟ್ರೋಫಿಯ ಪಾಕ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಯಾಣ ಅಸಂಭವ; ಹೈಬ್ರಿಡ್ ಮಾದರಿ ಸರಣಿ ಸಾಧ್ಯತೆ

ಮುಂದಿನ ವರ್ಷ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಚಾಂಪಿಯನ್ಸ್‌ ಟ್ರೋಫಿ...