ಮಂಡ್ಯ ನಗರದಲ್ಲಿ ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಪ್ರತಿನಿಧಿಗಳ ನೋಂದಣಿಯ ಅವಧಿಯನ್ನು ಡಿ.12ರವರೆಗೆ ವಿಸ್ತರಿಸುವಂತೆ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ ಸತೀಶ್ ಜವರೇಗೌಡ(ಸಜಗೌ) ಒತ್ತಾಯಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಇವರು, “ನಾಡಿನ ಹಲವು ಜಿಲ್ಲೆಗಳಿಂದ ತುಂಬಾ ಮಂದಿ ಸಾಹಿತ್ಯಾಸಕ್ತರು ತಮಗೆ ಕರೆ ಮಾಡಿ ‘ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತರಾಗಿದ್ದೇವೆ. ಆದರೆ, ಆನ್‌ಲೈನ್ ನೋಂದಣಿಯಾದ್ದರಿಂದ, ಸಕಾಲಕ್ಕೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ನೋಂದಣಿಗೆ ಕಡೆಯ ದಿನಾಂಕ ವಿಸ್ತರಿಸಲು ಸ್ವಾಗತ ಸಮಿತಿ ಗಮನಕ್ಕೆ ತನ್ನಿ’ರೆಂದು ಕೋರಿದ್ದಾರೆ. ಹಾಗಾಗಿ ಅವಧಿ ವಿಸ್ತರಿಸಬೇಕು” ಎಂದು ಮನವಿ ಮಾಡಿದ್ದಾರೆ.
ಇದನ್ನು ನೋಡಿದ್ದೀರಾ? ಚನ್ನಪಟ್ಟಣ | ‘ಯೋಗೇಶ್ವರ್‌ಗೆ ಜೈ ಎಂದ ಮತದಾರ!
“ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಇಚ್ಛಿಸುವವರು ‘ಆನ್‌ಲೈನ್’ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕಿದೆ. ಎಲ್ಲರಿಗೂ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಬರುವುದಿಲ್ಲ. ಬರುವವರು ನೋಂದಣಿ ಮಾಡಿಕೊಳ್ಳಲು ಯತ್ನಿಸಿದಾಗ, ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಕೆಲವರು ನೋಂದಣಿ ಮಾಡಲಾಗದೆ ನಿರಾಶರಾಗಿದ್ದಾರೆ. ಆದ್ದರಿಂದ ಪ್ರತಿನಿಧಿ ನೋಂದಣಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವ್ಯವಸ್ಥೆ ಮಾಡಬೇಕು” ಎಂದು ಸಲಹೆ ನೀಡಿದ್ದಾರೆ.
“ನೋಂದಣಿ ಮಾಡಲಾಗದ ಸಾಹಿತ್ಯಾಸಕ್ತರು ಮತ್ತು ಈಗಾಗಲೇ ನೋಂದಣಿ ಮಾಡಿಕೊಂಡಿರುವ ಪ್ರತಿನಿಧಿಗಳು ಸಮ್ಮೇಳನ ಕುರಿತ ಅಗತ್ಯ ಮಾಹಿತಿಗಾಗಿ ನೋಂದಣಿ ಸಮಿತಿಯವರಿಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುವುದಿಲ್ಲವೆಂದು ತಮ್ಮ ಬಳಿ ದೂರವಾಣಿ ಮೂಲಕ ಅಲವತ್ತುಕೊಂಡಿದ್ದಾರೆ. ಆದ್ದರಿಂದ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ಕೊಡಲು ‘ಸಹಾಯ ವಾಣಿ’ ಆರಂಭಿಸಬೇಕು” ಎಂದು ಸತೀಶ್ ಜವರೇಗೌಡ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಮಾಹಿತಿ ಆಯುಕ್ತರ ಜರೂರು ನೇಮಕಕ್ಕೆ ಸಾರ್ವಜನಿಕರ ಆಗ್ರಹ
“ಪ್ರತಿನಿಧಿಗಳಾಗಿ ಭಾಗವಹಿಸುವ ನೋಂದಾಯಿತ ಸಾಹಿತ್ಯಾಸಕ್ತರಿಗೆ ‘ಬೆಲ್ಲ ಅಥವಾ ಸಕ್ಕರೆ’ಯ ಕೊಡುಗೆ ಕೊಡುವ ಬದಲು, ಮಂಡ್ಯ ಜಿಲ್ಲೆಯ ಸಾಹಿತಿಗಳ ಪರಿಚಯ, ಅವರ ಕೊಡುಗೆ, ಸಾಂಸ್ಕೃತಿಕ ಸಂಘ, ಸಂಸ್ಥೆಗಳ ಸೇವೆ, ಮಂಡ್ಯದ ಸಾಧಕ ಗಣ್ಯರು, ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯೂ ಸೇರಿದಂತೆ ವಿವಿಧ ಕ್ಷೇತ್ರದ ಸಾಧನೆಯಗಳನ್ನು ಬಿಂಬಿಸುವ ಮತ್ತು ‘ಮಂಡ್ಯದ ಸಾಹಿತ್ಯ – ಸಾಂಸ್ಕೃತಿಕತನ’ವನ್ನು ಸಾರುವ ಕಿರುಹೊತ್ತಿಗೆ ಪ್ರಕಟಿಸಿ ಉಚಿತ ಕೊಡುಗೆಯಾಗಿ ನೀಡುವುದು ಸೂಕ್ತ” ಎಂದು ಸಲಹೆಯಿತ್ತಿದ್ದಾರೆ.
“ನೋಂದಣಿ ಉಪಸಮಿತಿ ರಚನೆಯಾದ ದಿನದಿಂದ ಈವರೆಗೆ ಎರಡು ಭಾರಿಯಷ್ಟೇ ಸಭೆ ನಡೆದಿದೆ. ಸಮಿತಿಯ ಸದಸ್ಯರಲ್ಲಿ ಹುರುಪು ಕಾಣುತ್ತಿಲ್ಲ. ಸಾಹಿತ್ಯ ಸಮ್ಮೇಳನದ ದಿನಾಂಕ ಹತ್ತಿರವಾಗುತ್ತಿರುವುದರಿಂದ, ಮತ್ತಷ್ಟು ಸಭೆಗಳು ನಡೆದು, ನೋಂದಾಯಿತ ಪ್ರತಿನಿಧಿಗಳ ಸಮಸ್ಯೆಗಳ ನಿವಾರಣೆಗೆ ಬಯಸುವ ಮಾಹಿತಿಗಳಿಗೆ ‘ತುರ್ತು ಸಹಾಯ ವಾಣಿ’ ಆರಂಭಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕುಡ್ ನಾಟ್ ಪಾಸಿಬಲ್ to ರಿಜಿಸ್ಟರ್ ಕನ್ನಡ sahithya ಸಮ್ಮೇಳನಸ್ ಸ್ಟೇಟಸ್ ಮಂಡ್ಯ ಪ್ಲೀಸ್ ಹೆಲ್ಪ್ ಯೋ ರಿಜಿಸ್ಟರ್ ಮೈ ಮಾಬ್ is 9141629583