- ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಬಹುದು
- ಜೂನ್ 15ರವರೆಗೆ ಹಳೆಯ ಬಸ್ ಪಾಸ್‌ಗಳ ವಿಸ್ತರಣೆ
ಬೇಸಿಗೆ ರಜೆ ಕಳೆದು 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಈ ಹಿನ್ನೆಲೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಕೆಎಸ್‌ಆರ್‌ಟಿಸಿ, “ಮೇ 31ರಂದು ನಿಗಮ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಹಳೆಯ ಬಸ್ ಪಾಸ್‌ಗಳನ್ನು ಜೂನ್ 15ರವರೆಗೆ ವಿಸ್ತರಣೆ ಮಾಡಿದೆ” ಎಂದಿದೆ.
“ವಿದ್ಯಾರ್ಥಿಗಳು 2022-23ನೇ ಸಾಲಿನ ಹಳೆಯ ಬಸ್‌ಪಾಸ್‌ಗಳನ್ನು ನಿರ್ವಾಹಕರಿಗೆ ತೋರಿಸಿ ಬಸ್‌ನಲ್ಲಿ ಪ್ರಯಾಣ ಮಾಡಬಹುದು ಅಥವಾ ಒಂದು ವೇಳೆ ಪಾಸ್ ಇಲ್ಲದಿದ್ದರೇ, ಪ್ರಸಕ್ತ ವರ್ಷ ಶಾಲೆಗೆ ದಾಖಲಾದ ಶುಲ್ಕ ಪಾವತಿ ರಸೀದಿ ತೋರಿಸಿ ಪ್ರಯಾಣ ಮಾಡಬಹುದಾಗಿದೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಡೆತ್‌ನೋಟ್ ಬರೆದಿಟ್ಟು, ಟವೆಲ್‌ನಿಂದ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
“ಜೂನ್ 15ರವರೆಗೆ ವಿದ್ಯಾರ್ಥಿಗಳು ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಬಹುದು ” ಎಂದು ಹೇಳಿದೆ.