ವಿಶ್ವ ರೈತ ದಿನಾಚರಣೆ ಅಂಗವಾಗಿ ಸೋಮವಾರ ಮಂಡ್ಯದಲ್ಲಿ ಏಕೀಕರಣಗೊಂಡ ರೈತಸಂಘಗಳ ಅಡಿಯಲ್ಲಿ ಮೇಲುಕೋಟೆ ಶಾಸಕರು ಹಾಗೂ ರೈತ ಮುಖಂಡರಾದ ದರ್ಶನ್ ಪುಟ್ಟಣ್ಣಯ್ಯ ಕಛೇರಿಯಲ್ಲಿ ರೈತ ದಿನಾಚರಣೆಯನ್ನು ಆಚರಿಸಲಾಯಿತು.

ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಪಾಂಡವಪುರ, ರೈತ ಮುಖಂಡರುಗಳು ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ಪುಟ್ಟಣ್ಣಯ್ಯ ಹಾಗೂ ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗರ ಜನ್ಮದಿನವನ್ನು ವಿಶೇಷವಾಗಿ ಒಟ್ಟಿಗೆ ಆಚರಿಸಲಾಯಿತು.
ರೈತ ದಿನಾಚರಣೆಯ ನೆಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಗಳ ಒಗ್ಗೂಡಿಸುವ ಯತ್ನಕ್ಕೆ ವೇಗ ಸಿಕ್ಕಿದೆ. ಈ ನಡೆ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ರೈತರ ನಡುವೆ ಆಶಾಕಿರಣ ಮೂಡಿಸಿದೆ. ಒಂದೇ ಸೂರಿನಡಿ, ಸಿದ್ದಾಂತ ಆಧಾರದ ಮೇಲೆಯೇ ಚಳುವಳಿಗಳು ನಡೆಸುವ ಇಚ್ಚೆಗೆ ಇಂಬು ಸಿಕ್ಕಿದೆ. ಮಂಡ್ಯ ಜಿಲ್ಲೆಯ ರೈತ ಸಂಘಗಳ ಒಗ್ಗೂಡಿವಿಕೆ ಆದ್ಯತೆ ಇರಬೇಕು ಎಂಬುದು ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರ ಅಂಬೋಣ ಆಗಿತ್ತು.
ಒಗ್ಗೂಡಿಸುವ ಯತ್ನಕ್ಕೆ ಶಾಸಕರು ಕೂಡ ಕೈಜೋಡಿಸಿದ್ದಾರೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಪ್ರಯತ್ನಗಳು ಮುನ್ನೆಲೆಗೆ ಬಂದಿವೆ. ಹಂತ ಹಂತವಾಗಿ ಕಾರ್ಯ ರೂಪಕ್ಕೆ ತರಲು ಎಲ್ಲರ ಸಹಕಾರ, ಸಹಮತ ಅಗತ್ಯ. ಜಿಲ್ಲೆಯ ರೈತ ಮುಖಂಡರ ಸಭೆ ಮಾಡಿ ಒಗ್ಗೂಡಿಸುವ ಮೂಲಕ ಹೊಸ ದಿಕ್ಕು ಆರಂಭಿಸುವ ಆಲೋಚನೆ ಮಾಡೋಣ ಎಂಬ ಇಂಗಿತ ಎಲ್ಲರ ನಡುವೆ ವ್ಯಕ್ತವಾಗಿದೆ.
ಇದನ್ನು ಓದಿದ್ದೀರಾ? ರಾಮನಗರ | ಮೇಡನಹಳ್ಳಿ ಸರಕಾರಿ ಶಾಲೆಯ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳ ಕೊಡುಗೆ
ಇತಿಹಾಸ ಹೊಂದಿರುವ ರೈತ ಚಳವಳಿಯನ್ನು ಉಳಿಸುವ ಪ್ರಯತ್ನ ಆಗಲೇಬೇಕು ಎಂದು ರೈತ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು. ಸಭೆಯಲ್ಲಿ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಇಂಡವಾಳು ಚಂದ್ರಶೇಖರ್, ಮಂಜೇಶ್ ಗೌಡ, ಮರಿ ಚನ್ನೇಗೌಡ, ಶಿವಳ್ಳಿ ಚಂದ್ರು, ಅಣ್ಣೂರು ಮಹೇಂದ್ರ, ಶಂಭೂನಳಹಳ್ಳಿ ಸುರೇಶ, ಬಾಲು, ಪ್ರಭುಲಿಂಗ, ವೆಂಕಟೇಶ್, ಮರಲಿಂಗಯ್ಯ, ಲಿಂಗರಾಜು, ಪುಟ್ಟಸ್ವಾಮಿ, ಸುರೇಶ್, ಇಂಡುವಾಳು ಸಿದ್ದೇಗೌಡ ಇನ್ನೂ ಮುಂತಾದ ರೈತ ಮುಖಂಡರು ಚಿಂತನಾ ಸಭೆಯಲ್ಲಿ ಹಾಜರಿದ್ದರು.