ಮೊದಲ ಬಾರಿಗೆ ₹8000 ಕೋಟಿ ಆದಾಯ ದಾಟಿದ ನೈರುತ್ಯ ರೈಲ್ವೆ ಇಲಾಖೆ

Date:

Advertisements
  • ಪ್ರಯಾಣಿಕರ ಬೇಡಿಕೆಯ ಮೇರೆಗೆ ಹಬ್ಬ ಹರಿದಿನಗಳಲ್ಲಿ ವಿಶೇಷ ರೈಲುಗಳ ಓಡಾಟ
  • ರೈಲು ಸೇವೆ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ಪ್ರಧಾನ ವ್ಯವಸ್ಥಾಪಕ

ನೈರುತ್ಯ ರೈಲ್ವೆ ವಲಯ ಪ್ರಾರಂಭದ ನಂತರ ಇದೇ ಮೊದಲ ಬಾರಿಗೆ ಒಟ್ಟು ಆದಾಯವು ₹8,000 ಕೋಟಿ ದಾಟಿದೆ. 2022-23ರಲ್ಲಿನ ಒಟ್ಟು ಆದಾಯವು 2021-22ರಲ್ಲಿ ದಾಖಲಾದ ಶೇ.30 ಕ್ಕಿಂತ ಹೆಚ್ಚಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ.

ನೈರುತ್ಯ ರೈಲ್ವೆಯ ಇದುವರೆಗಿನ ಅತ್ಯಧಿಕ ಒಟ್ಟು ಆದಾಯ ₹8,071 ಕೋಟಿ ಈ ಪೈಕಿ ಪ್ರಯಾಣಿಕರಿಂದ ₹2,756 ಕೋಟಿ, ಸರಕು ಸಾಗಣೆಯಿಂದ ₹4,696 ಕೋಟಿ, ನಾನಾ ಮೂಲಗಳಿಂದ ₹348 ಕೋಟಿ ಮತ್ತು ಇತರೆ ಮೂಲಗಳಿಂದ (ಕೋಚಿಂಗ್‌) ₹271 ಕೋಟಿ ಆಗಿದೆ ಎಂದು ಹೇಳಿದೆ.

ನೈರುತ್ಯ ರೈಲ್ವೆ ಪ್ರಾರಂಭವಾದಾಗಿನಿಂದ (2003) ಇಲ್ಲಿಯವರೆಗೆ, 2022-23 ರಲ್ಲಿನ ವಾರ್ಷಿಕ ಆದಾಯವು ₹8071 ಕೋಟಿ ಆಗಿದ್ದು, ಇದು 2003ರಿಂದ ಇಲ್ಲಿಯವರೆಗಿನ ವಾರ್ಷಿಕ ಆದಾಯಗಳಿಗೆ ಹೋಲಿಸಿದರೆ, ಅತ್ಯಧಿಕವಾಗಿದೆ. ಇದೊಂದು ನೂತನ ದಾಖಲೆ ಆಗಿದೆ ಎಂದು ಮಾಹಿತಿ ನೀಡಿದೆ.

Advertisements

“ನೈರುತ್ಯ ರೈಲ್ವೆ ವಲಯವು 2007-08ರಲ್ಲಿ ದಾಖಲಿಸಿದ್ದ 46.24 ಮಿಲಿಯನ್ ಟನ್‌ಗಳ ಹಿಂದಿನ ದಾಖಲೆ ಮೀರಿ, 2022-23ರಲ್ಲಿ 47.7ಮಿಲಿಯನ್ ಟನ್‌ಗಳ ಸರಕು ಸಾಗಣೆ ಸಾಗಿಸಿದೆ. ವಲಯದ ಮೂರು ವಿಭಾಗಗಳ ವ್ಯಾಪ್ತಿಯಲ್ಲಿ ಗ್ರಾಹಕರ ಕೇಂದ್ರಿತ ವ್ಯಾಪಾರ ಅಭಿವೃದ್ಧಿ ಘಟಕಗಳ ಸ್ಥಾಪನೆ ಹಾಗೂ ರೈಲ್ವೆ ಯೋಜನೆ ಮತ್ತು ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುವ ಸಂಘಟಿತ ಪ್ರಯತ್ನದ ಫಲಗಳಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ” ಎಂದು ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಶ್ ಹೆಗಡೆ ಹೇಳಿದ್ದಾರೆ.    

“ಆಟೋಮೊಬೈಲ್ ಉದ್ಯಮಿಗಳಿಗೆ ರೈಲ್ವೆಯು ಸುರಕ್ಷಿತ, ಸಕಾಲಿಕ, ಹಾನಿ ರಹಿತ, ವಿಶ್ವಾಸಾರ್ಹ ಮತ್ತು ಪರಿಸರ ಸ್ನೇಹಿ ‘ಆಯ್ಕೆಯ ಸಾರಿಗೆ’ ಆಗಿ ಹೊರಹೊಮ್ಮಿದೆ. ನೈರುತ್ಯ ರೈಲ್ವೆಯು ಕಳೆದ ವರ್ಷ 238 ರೇಕ್‌, 2022-23ರಲ್ಲಿ 509 ರೇಕ್‌ಗಳಲ್ಲಿ (ರೇಕ್=ಗೂಡ್ಸ್ ರೈಲು) ಆಟೋಮೊಬೈಲ್‌ಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸುವ ಜೊತೆಗೆ ಖನಿಜ ತೈಲ (2.05 ಮೆಟ್ರಿಕ್‌ ಟನ್‌), ಸಿಮೆಂಟ್ (1.07 ಮೆಟ್ರಿಕ್‌ ಟನ್‌) ಮತ್ತು ಸಕ್ಕರೆ (1.45 ಮೆಟ್ರಿಕ್‌ ಟನ್‌) ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಲೋಡಿಂಗ್ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

“ಪ್ರಯಾಣಿಕರ ಬೇಡಿಕೆಯ ಮೇರೆಗೆ ಹಬ್ಬ ಹರಿದಿನ, ರಜಾದಿನ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗಿದೆ. 253 ಹೆಚ್ಚುವರಿ ಬೋಗಿಗಳನ್ನು ಶಾಶ್ವತ ಮತ್ತು 224 ಬೋಗಿಗಳನ್ನು ತಾತ್ಕಾಲಿಕ ಆಧಾರದ ಮೇಲೆ ಜೋಡಿಸಲಾಗಿದೆ. 6 ಜೋಡಿ ರೈಲುಗಳನ್ನು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಾಗಿ ಮೇಲ್ದರ್ಜೆಗೇರಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ನಾನಾ ನಗರಗಳಿಗೆ ಏಕಮಾರ್ಗದ ವಿಶೇಷ ರೈಲುಗಳ ಸಂಚಾರ: ನೈರುತ್ಯ ರೈಲ್ವೆ

“2022-23ರ ಆರ್ಥಿಕ ವರ್ಷದಲ್ಲಿ ಒಟ್ಟು 150.34 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದ್ದು, ಇದು ವಲಯ ಪ್ರಾರಂಭ ಆದಾಗಿನಿಂದ ಇಲ್ಲಿವರೆಗಿನ ಅತ್ಯಧಿಕ ದಾಖಲೆಯಾಗಿದೆ. ಒಟ್ಟು 3,506 ಪಾರ್ಸೆಲ್ ವ್ಯಾನ್‌ಗಳನ್ನು ಗುತ್ತಿಗೆ ನೀಡಲಾಗಿದೆ. ಇವುಗಳು 82,200 ಟನ್ ಅಗತ್ಯ ವಸ್ತುಗಳ ಸಾಗಣೆ ಸರಕುಗಳನ್ನು ಸಾಗಿಸುವ ಮೂಲಕ ₹57 ಕೋಟಿ ಆದಾಯ ಗಳಿಸಿರುತ್ತವೆ. 170 ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್‌ ಟ್ರೈನ್ಸ್‌ಗಳನ್ನು ಗುತ್ತಿಗೆ ನೀಡಿ ಅವುಗಳಿಂದ 60,493 ಟನ್‌ ಸರಕು ಸಾಗಿಸುವ ಮೂಲಕ ₹28 ಕೋಟಿ ಆದಾಯ ಗಳಿಸಲಾಗಿದೆ” ಎಂದಿದ್ದಾರೆ.

” ‘ಗ್ರಾಹಕ ಕೇಂದ್ರಿತ’ ನಿಲುವಿನೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೈಲು ಸೇವೆಯನ್ನು ಪ್ರೋತ್ಸಾಹಿಸಿದ ಸರಕು ಮತ್ತು ಪಾರ್ಸೆಲ್ ಗ್ರಾಹಕರು ಹಾಗೂ ಪ್ರಯಾಣಿಕರಿಗೆ ತುಂಬು ಹೃದಯದ ಅಭಿನಂದನೆಗಳು” ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ಅವರು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X