ನಾನಾ ನಗರಗಳಿಗೆ ಏಕಮಾರ್ಗದ ವಿಶೇಷ ರೈಲುಗಳ ಸಂಚಾರ: ನೈರುತ್ಯ ರೈಲ್ವೆ

Date:

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ನಾನಾ ನಗರಗಳಿಗೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ.

1. ಹುಬ್ಬಳ್ಳಿ- ಉತ್ತರ ಪ್ರದೇಶದ ಕಾನ್ಪುರ ನಡುವೆ ವಿಶೇಷ ರೈಲು(06557)

ಮೇ 27 ರಂದು ರಾತ್ರಿ 11:50 ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮೇ 29 ರ ಬೆಳಿಗ್ಗೆ 11:10 ಗಂಟೆಗೆ ಕಾನ್ಪುರ ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಗದಗ, ಬಾದಾಮಿ, ಬಾಗಲಕೋಟೆ, ಬಸವನ ಬಾಗೇವಾಡಿ ರೋಡ್‌, ವಿಜಯಪುರ, ಸೊಲ್ಲಾಪುರ, ಕುರ್ದುವಾಡಿ, ದೌಂಡ್, ಅಹ್ಮದ್‌ನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ರಾಣಿ ಕಮಲಾಪತಿ, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ಮತ್ತು ಓರೈ ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ವಿಶೇಷ ರೈಲು (2) ಎಸಿ ತ್ರಿ ಟೈಯರ್ ಬೋಗಿ, (11) ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು, (6) ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು (2) ದಿವ್ಯಾಂಗಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿವೆ.

2. ಯಶವಂತಪುರ – ವಡೋದರಾದ ವಿಶ್ವಾಮಿತ್ರಿ ನಡುವೆ ವಿಶೇಷ ರೈಲು

ಈ ರೈಲು (06565) ಮೇ 27ರಂದು ಬೆಳಿಗ್ಗೆ 8:15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಸಂಜೆ 4:30 ಗಂಟೆಗೆ ವಡೋದರಾ ನಗರದ ವಿಶ್ವಾಮಿತ್ರಿ ಜಂಕ್ಷನ್‌ಗೆ ತಲುಪಲಿದೆ.

ಈ ರೈಲು ಮಾರ್ಗದಲ್ಲಿ ತುಮಕೂರು, ಅರಸೀಕೆರೆ, ಚಿಕ್ಕಜಾಜೂರ್, ದಾವಣಗೆರೆ, ಕೊಟ್ಟೂರು, ಕೊಪ್ಪಳ, ಗದಗ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಪುಣೆ, ವಸಾಯಿ ರೋಡ್, ವಾಪಿ ಮತ್ತು ಸೂರತ್ ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ವಿಶೇಷ ರೈಲು (1) ಎಸಿ ತ್ರಿ ಟೈಯರ್ ಬೋಗಿ, (18) ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು ಮತ್ತು (2) ದಿವ್ಯಾಂಗಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿರಲಿದೆ.

3. ಬೆಂಗಳೂರು – ಹೌರಾ ನಡುವೆ ವಿಶೇಷ ರೈಲು

ಈ ರೈಲು (06569) ಮೇ 28 ರಂದು ರಾತ್ರಿ 12:30 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 11:45 ಗಂಟೆಗೆ ಹೌರಾ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೇಟೆ, ಕಟಪಾಡಿ, ರೇಣಿಗುಂಟಾ, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊಟ್ಟವಲಸಾ, ವಿಜಯನಗರಂ ಜಂ, ಶ್ರೀಕಾಕುಲಂ, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್‌, ಭುವನೇಶ್ವರ, ಕಟಕ್‌, ಜಾಜ್‌ಪುರ ಕೆ. ರೋಡ್‌, ಭದ್ರಖ್, ಖರಗ್‌ಪುರ ಜಂ ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ವಿಶೇಷ ರೈಲು (1) ಎಸಿ ತ್ರಿ ಟೈಯರ್ ಬೋಗಿ, (14) ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು ಮತ್ತು (2) ದಿವ್ಯಾಂಗಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿರಲಿವೆ.

4. ಬೆಂಗಳೂರು – ಬಿಹಾರದ ದಾನಪುರ ನಡುವೆ ವಿಶೇಷ ರೈಲು

ಈ ರೈಲು (06567) ಮೇ 30 ರಂದು ಬೆಳಿಗ್ಗೆ 6:50 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮೂರನೇ ದಿನ ಬೆಳಿಗ್ಗೆ 8 ಗಂಟೆಗೆ ದಾನಪುರ್‌ ನಿಲ್ದಾಣವನ್ನು ತಲುಪಲಿದೆ.

ಈ ಸುದ್ದಿ ಓದಿದ್ದೀರಾ? ರಣ ಬಿಸಿಲಿನ ಝಳದ ಜತೆಗೆ ಜನರಿಗೆ ಹೆಸ್ಕಾಂ ಶಾಕ್‌

ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ, ಜೋಲಾರ್‌ಪೆಟ್ಟೈ, ಕಟ್ಪಾಡಿ, ಅರಕ್ಕೋಣಂ, ಪೆರಂಬೂರ್, ಗುಡೂರು, ವಿಜಯವಾಡ, ವಾರಂಗಲ್, ಬಲ್ಹರಷ್ಹಾ, ನಾಗ್ಪುರ, ಇಟಾರ್ಸಿ, ಜಬ್ಬಲಪುರ, ಸತ್ನಾ, ಪ್ರಯಾಗ ರಾಜ್‌ ಛೋಕಿ, ದೀನ-ದಯಾಳ-ಉಪಾದ್ಯಯ, ಬಕ್ಸರ್, ಆರಾ ಜಂ ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ವಿಶೇಷ ರೈಲು (1) ಎಸಿ ಟು ಟೈಯರ್ ಬೋಗಿ,  (1) ಎಸಿ ತ್ರಿ ಟೈಯರ್ ಬೋಗಿ, (15) ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು, (2) ಜನರಲ್‌ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು (2) ದಿವ್ಯಾಂಗಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಇರಲಿವೆ.

ಪ್ರಯಾಣಿಕರಿಗೆ ಈ ವಿಶೇಷ ರೈಲುಗಳ ಎಸಿ ಬೋಗಿಗಳಲ್ಲಿ ಬೆಡ್‌ ಶೀಟ್‌ ಮತ್ತು ಹೊದಿಕೆಗಳನ್ನು ಒದಗಿಸಲಾಗುವುದಿಲ್ಲ ಎಂದು ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕರ್ನಾಟಕ’ ನಾಮಕರಣಕ್ಕೆ 50ರ ಸಂಭ್ರಮ | ವರ್ಷವಿಡಿ ವಿಶೇಷ ಕಾರ್ಯಕ್ರಮ: ಸಚಿವ ಶಿವರಾಜ್ ತಂಗಡಗಿ

'ರಾಜ್ಯ 'ಕರ್ನಾಟಕ' ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿದೆ' ವರ್ಷವಿಡಿ ಕಾರ್ಯಕ್ರಮ ಆಯೋಜಿಸಲು...

ಚಿತ್ರದುರ್ಗ | ಮನೆ ಬಾಗಿಲಿಗೆ ಇ-ಸ್ವತ್ತು ‘ಜನಸ್ನೇಹಿ ಕಾರ್ಯಕ್ರಮ’ಕ್ಕೆ ಮತ್ತೆ ಚಾಲನೆ ನೀಡಿದ ಸಿಇಒ ದಿವಾಕರ್

ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಖಲೆಗಳನ್ನು ಸರ್ಕಾರವು ಡಿಜಿಟಲೀಕರಣಗೊಳಿಸಿದ್ದು, ಮನೆಯ ಖಾಯಂ ಹಕ್ಕು...

ಶಾಸಕ ಪ್ರದೀಪ್ ಈಶ್ವರ್ ಸಹಾಯ ಅರಸಿ ಬಂದ ವೃದ್ಧೆ; ಬರಿಗೈನಲ್ಲೇ ವಾಪಸ್

ಸದ್ಯ ರಾಜ್ಯ ರಾಜಕಾರಣದಲ್ಲಿ ತೆಲುಗು-ಕನ್ನಡ ಮಿಶ್ರಿತ ಡೈಲಾಗ್‌ಗಳಿಂದ ಅಬ್ಬರಿಸಿ ಬೊಬ್ಬಿರಿಯುತ್ತಿರುವವರು ಶಾಸಕ...

ಭ್ರಷ್ಟ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಡಿಒಗಳ ಮೇಲಿನ ತನಿಖೆಯನ್ನು ಚುರುಕುಗೊಳಿಸಿ ಅಂತಹವರ ವಿರುದ್ಧ...