ಜಿಲ್ಲೆಯ ಸ್ಥಳಿಯ ಸಂಸ್ಥೆಗಳಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ ಅಂದಾಜು ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಸೂಚಿಸಿದರು.
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಕುರಿತು ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, “ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ತಾಂತ್ರಿಕತೆಯಿಂದ ಕೂಡಿರುವ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ ಇ-ಸ್ಮಾರ್ಟ್ ಕಂಪನಿ ಮುಂದೆ ಬಂದಿದೆ. ಈ ಕುರಿತು ಇ-ಸ್ಮಾರ್ಟ್ ಸಂಸ್ಥೆಯು ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಸಿ ಯಶಸ್ವಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಕುರಿತು ಸಂಸ್ಥೆಯು ನಿರ್ವಹಣೆ ಮಾಡಲಿದೆ ಎಂದು ಸಂಸ್ಥೆಯ ಪ್ರತಿನಿಧಿಯು ತಿಳಿಸಿದ್ದು ಡೆಮೋ ಮಾಹಿತಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಸ್ಥಳಿಯ ಸಂಸ್ಥೆಗಳು ಅಂದಾಜು ಕ್ರಿಯಾ ಯೋಜನೆ ಸಲ್ಲಿಸಿಬೇಕಾಗಿದೆ” ಎಂದರು.
ರಾಯಚೂರು ನಗರಸಭೆಯು 15ನೇ ಹಣಕಾಸು, ಎಸ್‌ಎಫ್‌ಸಿ ಅನುದಾನ ಸೇರಿದಂತೆ ಉಳಿಕೆಯಾದ ಅನುದಾನ ಹಾಗೂ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ ಬೇಕಾಗಿರುವ ಅಂದಾಜಿಗೆ ಅನುಗುಣವಾಗಿ 7 ಕೋಟಿ ರೂ. ನಿಗದಿಪಡಿಸಿದ್ದು, ಕ್ರಿಯಾ ಯೋಜನೆಯು ಸಲ್ಲಿಸಬೇಕು, ಬೀದಿ ದೀಪಗಳ ಅಳವಡಿಕೆ ಕುರಿತು ಜೆಸ್ಕಾಂಗೆ ಸಲ್ಲಿಸಬೇಕು. ಲಿಂಗಸುಗೂರು ಪುರಸಭೆಯಲ್ಲಿ 24 ಕೋಟಿ ರೂ. ಅಂದಾಜಿಸಿದ್ದು ಮತ್ತೊಮ್ಮೆ ಕ್ರಿಯಾ ಯೋಜನೆ ಸಲ್ಲಿಸಬೇಕು, ಸಿಂಧನೂರು ನಗರಸಭೆಯು ಅಂದಾಜಿನ ಹೊಸ ಬಡಾವಣೆಯ ಸೇರಿಸಿ ಸಲ್ಲಿಸಿದ್ದು ಅವಶ್ಯಕತೆ ಇರುವ ಕಡೆ ಮಾತ್ರ ಸೇರಿಸಲು ಸೂಚಿಸಿದರು.
“ದೇವದುರ್ಗ ಪುರಸಭೆಯಲ್ಲಿ 20 ಲಕ್ಷ ರೂ. ನಿಗದಿಪಡಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿರುವುದರಿಂದ ಕ್ರಿಯಾ ಯೋಜನೆ ಸಿದ್ದಪಡಿಸಬೇಕು, ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ 3 ಕೋಟಿ ಸಲ್ಲಿಸಿದೆ, ಅನುದಾನ ಎಲ್ಲಿಂದ ಸಂಗ್ರಹ ಕುರಿತು ಅಂದಾಜು ಹಾಗೂ ಈ ಯೋಜನೆಗೆ ಬೇಕಾಗಿರುವ ಹಣಕಾಸು ಕುರಿತು ಕ್ರಿಯಾ ಯೋಜನೆ ಸಲ್ಲಸಲು ತಿಳಿಸಿದರು. ಮಸ್ಕಿ ಪಟ್ಟಣ ಪಂಚಾಯತಿಯು 70 ಲಕ್ಷ ರೂ. ಅನುದಾನ ಪಟ್ಟಿ ನಿಗದಿಪಡಿಸದೆ, ಯೋಜನೆಗೆ ಅವಶ್ಯಕತೆ ಇರುವ ಕ್ರಿಯಾ ಯೋಜನೆ ಮಾಡಿ ಸಲ್ಲಿಸಬೇಕು, ಮುದಗಲ್ ಪಟ್ಟಣ ಪಂಚಾಯತಿ 48 ಲಕ್ಷ ರೂ ಪಟ್ಟಿಯಲ್ಲಿ ತಿಳಿಸಿದ್ದು ಅಂದಾಜು ಸಿದ್ದಪಡಿಸಲು” ಹೇಳಿದರು.

“ತುರವಿಹಾಳ, ಬಳಗಾನೂರು, ಪಟ್ಟಣ ಪಂಚಾಯತಿಗಳು ಅವಶ್ಯಕತೆ ಇರುವನ್ನು ಮಾತ್ರ ಕ್ರಿಯಾ ಯೋಜನೆಯಲ್ಲಿ ಸೇರಿಸಿ, ಎಲ್ಲ ಸ್ಥಳೀಯ ಸಂಸ್ಥೆಗಳು ಕ್ರಿಯಾ ಯೋಜನೆ ಸಿದ್ದಪಡಿಸುವಾಗ ಯಾವ ಕಡೆಯಿಂದ ಹಣ ಸಂಗ್ರಹ ಮತ್ತು ಬಾಕಿ ಉಳಿಸಿಕೊಂಡ 14, 15 ನೇ ಹಣಕಾಸು ಕುರಿತು ಮಾಹಿತಿ ಸಲ್ಲಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮುದಗಲ್‌ನ ಹಮಾಲಿ ಕಾರ್ಮಿಕರ ಸಮಸ್ಯೆ ಪರಿಹರಿಸಲು ಕ್ರಮ; ಎಸಿ ಭರವಸೆ
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಗಂಗಣ್ಣನವರ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಇ-ಸ್ಮಾರ್ಟ್ ಕಂಪನಿ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಸಿಟಿಜನ್ ಜರ್ನಲಿಸ್ಟ್, ಹಫೀಜುಲ್ಲ