ಮಂಡ್ಯ ತಾಲೂಕಿನ ಕೆರಗೋಡು ಹೋಬಳಿ ಮರಲಿಂಗನದೊಡ್ಡಿ ಗ್ರಾಮದಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಇವರ ಸಹಯೋಗದಲ್ಲಿ ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಪ್ರಯೋಗಾಲಯ ಕಟ್ಟಡದ ಕಾಮಗಾರಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಎಂ.ಎಸ್.ರಘುನಂದನ್ ಗುದ್ದಲಿ ಪೂಜೆ ನೆರವೇರಿಸಿದರು.
ಇದೇ ವೇಳೆ ಮನ್‌ಮುಲ್ ಮಾಜಿ ಅಧ್ಯಕ್ಷರಾದ ರಾಮಚಂದ್ರರವರು ಮಾತನಾಡಿ, ಪ್ರತಿಯೊಂದು ಅಭಿವೃದ್ಧಿಗೆ ರೈತರ ಅನುಕೂಲ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದೀರಿ ಎಂದರು.
ಐದು ವರ್ಷಗಳಿಂದ ನಾವು ರೈತರಿಗೆ ಪೀಡ್ಸ್, ರಬ್ಬರ್ ಮ್ಯಾಟ್, ಇನ್ನು ಹಲವಾರು ಸಮಸ್ಯೆಗಳನ್ನು ಬಗೆ ಹರಿಸಿದ್ದೇವೆ. ಮುಂದಿನ ದಿನಗಳಲ್ಲಿ ಡೈರಿ ಉನ್ನತ ಹಚ್ಚಿನ ಮಟ್ಟಕ್ಕೆ ಬೆಳವಣಿಗೆ ಆಗಲಿ ಎಂದರು.
ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಂ.ಕೆ.ಶ್ರೀನಿವಾಸ್, ಉಪಾಧ್ಯಕ್ಷರಾದ ಎಂ.ಎಲ್.ಲಕ್ಷಮ್ಮ, ನಿರ್ದೇಶಕರುಗಳಾದ ಹೆಚ್.ಎಲ್.ಕೃಷ್ಣೇಗೌಡರು, ಶಿವಣ್ಣ, ಬಿ.ಎಸ್.ನಾಗರಾಜು, ಹೆಚ್.ಸಿ.ಮಹೇಶ್, ಪುಟ್ಟಮ್ಮ, ಲೀಲಾವತಿ, ಮನ್‌ಮುಲ್ ಉಪ ವ್ಯವಸ್ಥಾಪಕರಾದ ಮಂಜೇಶ್, ಮನ್‌ಮುಲ್ ವಿಸ್ತರಣಾಧಿಕಾರಿ ತೇಜಸ್ವಿನಿ, ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿಕ್ಕಣ್ಣ, ಹಾಲು ಪರೀಕ್ಷಕಿ ಸಿ.ಆರ್.ವನಿತ, ಸಹಾಯಕ ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
