ಕಲಬುರಗಿ | ಯುವ ಪತ್ರಕರ್ತರಿಂದ ಮಾಧ್ಯಮಕ್ಕೆ ಭವಿಷ್ಯವಿದೆ: ಸೂರ್ಯಕಾಂತ ಜಮಾದಾರ

Date:

Advertisements

ಡಿಜಿಟಲ್ ಮಾಧ್ಯಮ ಈಗ ತಾನೆ ಜನಿಸಿದ ಕೂಸು. ಈ ಮಾಧ್ಯಮಗಳು ನೈತಿಕತೆ ಕಾಪಾಡುವುದು ಮುಖ್ಯ. ಸುದ್ದಿ ಪ್ರಕಟ ಮಾಡುವ ಅವಸರದಲ್ಲಿ ಸತ್ಯಾಂಶವನ್ನು ಶೋಧಿಸುವಲ್ಲಿ ಅನೇಕ ಡಿಜಿಟಲ್ ಮಾಧ್ಯಮಗಳು ವಿಫಲವಾಗುತ್ತಿವೆ. ಯುವ ತಲೆಮಾರು ಮಾಧ್ಯಮ ಕ್ಷೇತ್ರಕ್ಕೆ ಬರಬೇಕು ಎಂದು ಹಿರಿಯ ಪತ್ರಕರ್ತ ಸೂರ್ಯಕಾಂತ ಜಮಾದಾರ ಅಭಿಪ್ರಾಯಪಟ್ಟರು.

ಕಲಬುರಗಿಯಲ್ಲಿ ಈಸುದ್ದಿ.ಕಾಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪತ್ರಕರ್ತರು ಜನರ ನಂಬಿಕಯನ್ನು ಪಡೆದುಕೊಳ್ಳುವುದು ಮುಖ್ಯ, ಜನರ ನಂಬಿಕೆಯಿಂದ ಮಾಧ್ಯವಗಳು ಉಳಿದುಕೊಳ್ಳಲು ಸಾಧ್ಯ ಎಲ್ಲಾ ವರ್ಗದ ಯುವಜನರಲ್ಲಿ ಆಕ್ರೋಶವಿದೆ ಹಾಗೂ ಪ್ರಶ್ನೆ ಮಾಡ್ತಾರೆ ಆದರೆ ಆ ಪ್ರಶ್ನೆಗಳಿಗೆ ನೈತಿಕತೆ ಇದೆಯಾ? ಎಂದು ತಮ್ಮನ್ನು ತಾವೆ ಪ್ರಶ್ನೆ ಮಾಡಿಕೊಳ್ಳಬೇಕು. ಪತ್ರಕರ್ತರ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮುಂದಿನ ಹೆಜ್ಜೆಯನ್ನಿಡಬೇಕು” ಎಂದರು.

“ವಿದ್ಯುನ್ಮಾನ ಮಾಧ್ಯಮಗಳು ಟಿಆರ್‌ಪಿಗಾಗಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇದರ ನಡುವೆ ಡಿಜಿಟಲ್ ಮಾಧ್ಯಮಗಳು ಪದಾರ್ಪಣೆ ಮಾಡಿದ್ದು, ಅತಿವೇಗವಾಗಿ ಜನರಿಗೆ ತಲುಪುವ ಮತ್ತು ವಸ್ತುಸ್ಥಿತಿ ಹೊಂದಿರುವ ವರದಿಗಳನ್ನು ಜನರಿಗೆ ತಲುಪಿಸಿ ಅತಿ ವೇಗವಾಗಿ ಬೇಳೆಯುತ್ತಿವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisements

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಮಾವಿನಕರ್, ” ಪ್ರತಿಷ್ಠಿತ ಮಾಧ್ಯಮಗಳು ಬಡ ಜನರ ಸಮಸ್ಯೆಗಳನ್ನು ಬಿಟ್ಟು ವೈಭವೀಕರಣದ ಹಿಂದೆ ಬಿದ್ದಿವೆ ಜನರ ಸಮಸ್ಯೆಗಳು ಕಣ್ಮಂದೆ ಕಂಡರು ಕೂಡ ಕಾಣದ ರೀತಿಯಲ್ಲಿ ವರ್ತಿಸುತ್ತಿವೆ. ಜನರಿಗೆ ಬೇಡಾವಾದ ಸುದ್ದಿಗಳನ್ನೆ ಮತ್ತೆ ಮತ್ತೆ ತೋರಿಸಿ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿವೆ” ಎಂದು ಹೇಳಿದರು.

“ಡಿಜಿಟಲ್ ಮಾಧ್ಯಮಗಳು ಸತ್ಯಾಂಶವದ ಹುಡುಕಾಟ ಮಾಡಿ ಜನರ ದ್ವನಿಯಾಗಬೇಕು. ಕೆಲ ಜನರಪ ಮೀಡಿಯಾಗಳು ವೈಭವೀಕರಣದ ಸುದ್ದಿ ಚಾನೆಲ್ ಗಳ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಾಮಾನ್ಯ ಜನರಿಗೆ ಸತ್ಯ ತಲುಪುತ್ತಿದೆ, ಡಿಜಿಟಲ್ ಮಾಧ್ಯಮಗಳ ಮೇಲೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ” ಎಂದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪಗಡೆ, ಸಂವಾದ ಯುವಜನ ಕಾರ್ಯಕರ್ತರಾದ ನಾಗೇಶ ಹರಳಯ್ಯ, ಸಂಶೋದಕಿಯಾದ ವಿಜಯಲಕ್ಷ್ಮಿ ದೊಡ್ಡಮನಿ, ರಾಜೇಂದ್ರ ರಾಜುವಾಳ, ಲಕ್ಷ್ಮಣ್ ಮಂಡಲಗೇರಾ, ಚಾಮರಾಜ ದೊಡ್ಡಮನಿ ಸೇರಿದಂತೆ ಇನ್ನಿತರರು ಇದ್ದರು…

ವರದಿ: ಅಶೋಕ್, ವಾಲೆಂಟಿಯರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X