“ರಕ್ಷಿಸಿ! ರಕ್ಷಿಸಿ! ಕಪ್ಪತಗುಡ್ಡ ರಕ್ಷಿಸಿ, ಗಿಡ ಮರ ಕಡಿಯಯಬೇಡ, ಪ್ರಾಣಿ ಪಕ್ಷಿಗಳ ಗೂಡ ಕದಿಯಬೇಡ, ಹಸಿರೇ ಉಸಿರಂತಿ ನಾನು ಬಾಡುವಾಗ ನೀರು ಹಾಕದೇ ಏಕೆ ಕುಂತಿ, ನಾನು ಕಪ್ಪತ ಗುಡ್ಡ, ನನ್ನನ್ನು ಬೆಂಕಿಯಿಂದ ರಕ್ಷಿಸಿ” ಎಂಬಿತ್ಯಾದಿ ಘೋಷ ವಾಕ್ಯಗಳೊಂದಿಗೆ ಕಪ್ಪತಗುಡ್ಡದ ಜಾಗೃತಿ ಕಾರ್ಯಕ್ರಮ ನಡೆಯಿತು.
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕಪ್ಪತಗುಡ್ಡದಲ್ಲಿ ಸರ್ವೋದಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಿವಿದೊದ್ಧೇಶಗಳ ಎಸ್ ಸಿ (ರಿ)ಸಂಸ್ಥೆ ಡಂಬಳ ಮತ್ತು ಮಾನಸ ಜ್ಞಾನಾಮೃತ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ತರಬೇತಿ ಕೇಂದ್ರ ಡಂಬಳ ಮತ್ತು ಪರಿವರ್ತನಾ ಕಲಾತಂಡ ಡಂಬಳ ಮತ್ತು ಗಂಗಾಧರ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಶಿಕ್ಷಣ ಸಂಸ್ಥೆ (ರಿ) ಮುಂಡರಗಿ ಇವುಗಳ ನೇತೃತ್ವದಲ್ಲಿ ಕಪ್ಪತಗುಡ್ಡದಲ್ಲಿ ಕಪ್ಪತಗುಡ್ಡದ ಜಾಗೃತಿ ಮತ್ತು ಬೀಜದ ಉಂಡೆಯನ್ನು ಎಸೆಯುವ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸರ್ವೋದಯ ಶೈಕ್ಷಣಿಕ,ಸಾಂಸ್ಕೃತಿಕ ಹಾಗೂ ವಿವಿದೊದ್ಧೇಶಗಳ ಸಂಸ್ಥೆಯ ಮುಖ್ಯ ಕಾರ್ಯದರ್ಶಿಗಳಾದ ಗುಡದಪ್ಪ ತಳಗೇರಿ ಮಾತನಾಡಿ, “ಕಪ್ಪತಗುಡ್ಡವು ಗದಗ ಜಿಲ್ಲೆಯ ಪ್ರತಿಯೊಬ್ಬರ ಆಸ್ತಿ. ಇದನ್ನು ರಕ್ಷಿಸಿದರೆ ನಮ್ಮನ್ನು ರಕ್ನಿಸುತ್ತದೆ ಶುದ್ಧಗಾಳಿ, ಔಷಧಿ ಸಂಪತ್ತು ಹೊಂದಿದ ಕಪ್ಪತಗುಡ್ಡವನ್ನು ರಕ್ಷಿಸುವುದು ಈ ಭಾಗದ ಜನರ ಜವಾಬ್ದಾರಿಯಾಗಿದೆ. ಸುರಕ್ಷತೆಯಿಂದ, ಶುದ್ಧ ಗಾಳಿ ಪಡೆದು ಉತ್ತಮ ಆರೋಗ್ಯದಿಂದ ಜನರು ಬದುಕುತಿದ್ದಾರೆ. ಎಂದು ಹೇಳಿದರು.
‘ಕೆಲ ಮೂಡ ಜನರು ಗುಡ್ಡದ ನೆತ್ತಿ ಸುಟ್ಟರೇ ಮಳೆ ಬರತ್ತದೆ’ ಎಂಬ ಮೂಢನಂಬಿಕೆಯಿಂದ ಬೆಂಕಿ ಇಟ್ಟು ಹಾನಿ ಮಾಡುತ್ತಿದ್ದಾರೆ. ಎಂದು ಅಸಮಾಧಾನ ವ್ಯಕ್ತಪಡಿಸಿ, ‘ಬೆಂಕಿ ಇಟ್ಟರೇ ಮಳೆ ಬರುವುದಿಲ್ಲ! ಗಿಡಮರಗಳನ್ನು ನೆಟ್ಟು ಪೋಷಿಸಿದರೆ ಮಳೆ, ಬೆಳೆ ಉತ್ತಮ ಆರೋಗ್ಯ ಎಲ್ಲವೂ ದೊರೆಯುತ್ತದೆ” ಎಂದು ಕಪ್ಪತಗುಡ್ಡದ ಜಾಗೃತಿ ಮೂಡಿಸಿದರು.
ಗಂಗಾಧರ ಶಿಕ್ಷಣ ಸಂಸ್ಥೆಯ ಮಲ್ಲಿಕಾರ್ಜುನ ಹಡಪದ ಮಾತನಾಡಿ, “ಬೀಜದ ಉಂಡಿಯು ವಿಶೇಷವಾಗಿ ಕಾರ್ಯನಿರ್ವಹಿಸಿ ಮೊಳಕೆ ಹೊಡೆಯುತ್ತದೆ. ಇದರಿಂದ ಮಳೆಯಾದಾಗ ಹಸಿಯಾಗಿ ಬೀಜಕ್ಕೆ ಶಕ್ತಿ ತುಂಬಿ ಸಸಿ ಚಿಗುರಲು ಸಹಾಯವಾಗುತ್ತದೆ. ಎಂದು ಹೇಳಿದರು.
“ಕಪ್ಪತಗುಡ್ಡವೂ ಪ್ರೇಕ್ಷಣೀಯ ಸ್ಥಳವಾಗಿದ್ದು, ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಅನುಕೂಲಕರ ವ್ಯವಸ್ಥೆ ಕಲ್ಪಿಸಬೇಕು. ಬೆಂಕಿ ಮತ್ತು ಇತರೆ ಹಾನಿಯಾಗದಂತೆ ಹೆಚ್ಚು ಒತ್ತು ಕೊಡುವ ಸುರಕ್ಷತೆಯ ಕಾರ್ಯ ಹಮ್ಮಿಕೊಳ್ಳಬೇಕು. ಕಪ್ಪತ ಗುಡ್ಡಕ್ಕೆ ಹೋಗುವ ಮಾರ್ಗಗಳು ತೀರಾ ಹದಗೆಟ್ಟಿದ್ದು ಸಂಬಂಧಿಸಿದ ಶಾಸಕರು ರಸ್ತೆ ಸರಿಪಡಿಸಿ ಪ್ರವಾಸಿಗರಿಗೆ ನೆರೆಹೊರೆಯ ರೈತರಿಗೆ ಅನುಕೂಲ ಮಾಡಬೇಕು” ಎಂದು ಕವಿಗಳು, ಬಹುಜನ ಚಿಂತಕರು ಸಾರ್ವಜನಿಕರ ಪರವಾಗಿ ಸರಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾನಸ ಜ್ಞಾನಾಮೃತ ತರಬೇತಿ ಕೇಂದ್ರ ಡಂಬಳದ ವಿದ್ಯಾರ್ಥಿಗಳು, ಶಾರಾ ಕರಿಯರ್ ಆಕಾಡಮಿ ಮಕ್ಕಳು, ಶಿಕ್ಷಣ ಸಂಸ್ಥೆಗಳ ಗುರು ಬಳಗ ಸುರೇಶ ತಲ್ಲೂರ, ಗುಡದಯ್ಯ ಶಿರನಳ್ಳಿ, ಮುತ್ತುರಾಜ ಬಿಂಕದಟ್ಟಿ, ಫೀರಸಾಬ ತೋಟದ ಹಾಗೂ ಅರಣ್ಯ ರಕ್ಷಣಾ ಸಿಬ್ಬಂದಿಗಳು, ಪಾಲಕರು ಇನ್ನೂ ಅನೇಕರು ಪಾಲ್ಗೊಂಡಿದ್ದರು.
