ಗದಗ | ಕಪ್ಪತಗುಡ್ಡದಲ್ಲಿ ಬೀಜದ ಉಂಡೆ ಎಸೆಯುವ ಜಾಗೃತಿ ಕಾರ್ಯಕ್ರಮ

Date:

“ರಕ್ಷಿಸಿ! ರಕ್ಷಿಸಿ! ಕಪ್ಪತಗುಡ್ಡ ರಕ್ಷಿಸಿ, ಗಿಡ ಮರ ಕಡಿಯಯಬೇಡ, ಪ್ರಾಣಿ ಪಕ್ಷಿಗಳ ಗೂಡ ಕದಿಯಬೇಡ, ಹಸಿರೇ ಉಸಿರಂತಿ ನಾನು ಬಾಡುವಾಗ ನೀರು ಹಾಕದೇ ಏಕೆ ಕುಂತಿ, ನಾನು ಕಪ್ಪತ ಗುಡ್ಡ, ನನ್ನನ್ನು ಬೆಂಕಿಯಿಂದ ರಕ್ಷಿಸಿ” ಎಂಬಿತ್ಯಾದಿ ಘೋಷ ವಾಕ್ಯಗಳೊಂದಿಗೆ ಕಪ್ಪತಗುಡ್ಡದ ಜಾಗೃತಿ ಕಾರ್ಯಕ್ರಮ ನಡೆಯಿತು.

- Advertisement -

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕಪ್ಪತಗುಡ್ಡದಲ್ಲಿ  ಸರ್ವೋದಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಿವಿದೊದ್ಧೇಶಗಳ ಎಸ್ ಸಿ (ರಿ)ಸಂಸ್ಥೆ ಡಂಬಳ ಮತ್ತು  ಮಾನಸ ಜ್ಞಾನಾಮೃತ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ತರಬೇತಿ ಕೇಂದ್ರ ಡಂಬಳ ಮತ್ತು ಪರಿವರ್ತನಾ ಕಲಾತಂಡ ಡಂಬಳ ಮತ್ತು ಗಂಗಾಧರ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಶಿಕ್ಷಣ ಸಂಸ್ಥೆ (ರಿ) ಮುಂಡರಗಿ ಇವುಗಳ ನೇತೃತ್ವದಲ್ಲಿ ಕಪ್ಪತಗುಡ್ಡದಲ್ಲಿ ಕಪ್ಪತಗುಡ್ಡದ ಜಾಗೃತಿ ಮತ್ತು ಬೀಜದ ಉಂಡೆಯನ್ನು ಎಸೆಯುವ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಈ ಸಂದರ್ಭದಲ್ಲಿ ಸರ್ವೋದಯ ಶೈಕ್ಷಣಿಕ,ಸಾಂಸ್ಕೃತಿಕ ಹಾಗೂ ವಿವಿದೊದ್ಧೇಶಗಳ ಸಂಸ್ಥೆಯ ಮುಖ್ಯ ಕಾರ್ಯದರ್ಶಿಗಳಾದ ಗುಡದಪ್ಪ ತಳಗೇರಿ ಮಾತನಾಡಿ, “ಕಪ್ಪತಗುಡ್ಡವು ಗದಗ ಜಿಲ್ಲೆಯ ಪ್ರತಿಯೊಬ್ಬರ ಆಸ್ತಿ. ಇದನ್ನು ರಕ್ಷಿಸಿದರೆ ನಮ್ಮನ್ನು ರಕ್ನಿಸುತ್ತದೆ ಶುದ್ಧಗಾಳಿ, ಔಷಧಿ ಸಂಪತ್ತು ಹೊಂದಿದ ಕಪ್ಪತಗುಡ್ಡವನ್ನು ರಕ್ಷಿಸುವುದು ಈ ಭಾಗದ ಜನರ ಜವಾಬ್ದಾರಿಯಾಗಿದೆ. ಸುರಕ್ಷತೆಯಿಂದ, ಶುದ್ಧ ಗಾಳಿ ಪಡೆದು ಉತ್ತಮ ಆರೋಗ್ಯದಿಂದ ಜನರು ಬದುಕುತಿದ್ದಾರೆ. ಎಂದು ಹೇಳಿದರು.

‘ಕೆಲ ಮೂಡ ಜನರು ಗುಡ್ಡದ ನೆತ್ತಿ ಸುಟ್ಟರೇ ಮಳೆ ಬರತ್ತದೆ’ ಎಂಬ ಮೂಢನಂಬಿಕೆಯಿಂದ ಬೆಂಕಿ ಇಟ್ಟು ಹಾನಿ ಮಾಡುತ್ತಿದ್ದಾರೆ. ಎಂದು ಅಸಮಾಧಾನ ವ್ಯಕ್ತಪಡಿಸಿ, ‘ಬೆಂಕಿ ಇಟ್ಟರೇ ಮಳೆ ಬರುವುದಿಲ್ಲ! ಗಿಡಮರಗಳನ್ನು ನೆಟ್ಟು ಪೋಷಿಸಿದರೆ ಮಳೆ, ಬೆಳೆ ಉತ್ತಮ ಆರೋಗ್ಯ ಎಲ್ಲವೂ ದೊರೆಯುತ್ತದೆ” ಎಂದು ಕಪ್ಪತಗುಡ್ಡದ ಜಾಗೃತಿ ಮೂಡಿಸಿದರು.

ಗಂಗಾಧರ ಶಿಕ್ಷಣ ಸಂಸ್ಥೆಯ  ಮಲ್ಲಿಕಾರ್ಜುನ ಹಡಪದ ಮಾತನಾಡಿ, “ಬೀಜದ ಉಂಡಿಯು ವಿಶೇಷವಾಗಿ ಕಾರ್ಯನಿರ್ವಹಿಸಿ ಮೊಳಕೆ ಹೊಡೆಯುತ್ತದೆ. ಇದರಿಂದ ಮಳೆಯಾದಾಗ ಹಸಿಯಾಗಿ ಬೀಜಕ್ಕೆ ಶಕ್ತಿ ತುಂಬಿ ಸಸಿ ಚಿಗುರಲು ಸಹಾಯವಾಗುತ್ತದೆ. ಎಂದು ಹೇಳಿದರು.

“ಕಪ್ಪತಗುಡ್ಡವೂ ಪ್ರೇಕ್ಷಣೀಯ ಸ್ಥಳವಾಗಿದ್ದು, ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಅನುಕೂಲಕರ ವ್ಯವಸ್ಥೆ ಕಲ್ಪಿಸಬೇಕು. ಬೆಂಕಿ ಮತ್ತು ಇತರೆ  ಹಾನಿಯಾಗದಂತೆ ಹೆಚ್ಚು ಒತ್ತು ಕೊಡುವ ಸುರಕ್ಷತೆಯ ಕಾರ್ಯ ಹಮ್ಮಿಕೊಳ್ಳಬೇಕು. ಕಪ್ಪತ ಗುಡ್ಡಕ್ಕೆ ಹೋಗುವ ಮಾರ್ಗಗಳು ತೀರಾ ಹದಗೆಟ್ಟಿದ್ದು ಸಂಬಂಧಿಸಿದ ಶಾಸಕರು ರಸ್ತೆ  ಸರಿಪಡಿಸಿ ಪ್ರವಾಸಿಗರಿಗೆ ನೆರೆಹೊರೆಯ ರೈತರಿಗೆ ಅನುಕೂಲ ಮಾಡಬೇಕು” ಎಂದು ಕವಿಗಳು, ಬಹುಜನ ಚಿಂತಕರು ಸಾರ್ವಜನಿಕರ ಪರವಾಗಿ ಸರಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾನಸ ಜ್ಞಾನಾಮೃತ ತರಬೇತಿ ಕೇಂದ್ರ ಡಂಬಳದ ವಿದ್ಯಾರ್ಥಿಗಳು, ಶಾರಾ ಕರಿಯರ್ ಆಕಾಡಮಿ ಮಕ್ಕಳು, ಶಿಕ್ಷಣ ಸಂಸ್ಥೆಗಳ ಗುರು ಬಳಗ ಸುರೇಶ ತಲ್ಲೂರ, ಗುಡದಯ್ಯ ಶಿರನಳ್ಳಿ, ಮುತ್ತುರಾಜ ಬಿಂಕದಟ್ಟಿ, ಫೀರಸಾಬ ತೋಟದ ಹಾಗೂ ಅರಣ್ಯ ರಕ್ಷಣಾ ಸಿಬ್ಬಂದಿಗಳು, ಪಾಲಕರು ಇನ್ನೂ ಅನೇಕರು ಪಾಲ್ಗೊಂಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...