ದನಕರುಗಳಿಗೆ ಮೇವು ತರಲು ತೆರಳಿದ್ದ ವೇಳೆ ಹಾವು ಕಚ್ಚಿ ವೃದ್ದೆಯೋರ್ವರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಭಾನುವಾರ ನಡೆದಿದೆ.
ಲಕ್ಷ್ಮೇಶ್ವರ ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತಟಪಟ್ಟ ಮಹಿಳೆಯನ್ನು 64 ವರ್ಷದ ನೀಲವ್ವ ಬಸಪ್ಪ ದಂಡಿನ ಎಂದು ಗುರುತಿಸಲಾಗಿದೆ.
ದನಕರುಗಳಿಗೆ ಮೇವು ತರಲು ಹೊಲಕ್ಕೆ ಹೋದಾಗ, ಸಂಜೆ 5.30ರ ಸುಮಾರಿಗೆ ಗ್ರಾಮದ ನೀಲವ್ವ ಬಸಪ್ಪ ದಂಡಿನ ಎಂಬ ವೃದ್ದೆಗೆ ಹಾವು ಕಚ್ಚಿದ್ದರಿಂದ ಸಾವನ್ನಪ್ಪಿದ್ದಾಳೆ.
ಇದನ್ನು ಓದಿದ್ದೀರಾ? ಕಾರವಾರ | ರಸ್ತೆ ಸೌಲಭ್ಯದ ಕೊರತೆ: ಕಟ್ಟಿಗೆಗೆ ಮೃತದೇಹ ಕಟ್ಟಿ ಕೊಂಡೊಯ್ದ ಗ್ರಾಮಸ್ಥರು!
ಘಟನೆಯಿಂದ ವೃದ್ದೆ ನೀಲವ್ವರ ಒಬ್ಬ ಗಂಡು ಮಗ, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಬಸ್ಥರು ದುಃಖತಪ್ತರಾಗಿದ್ದಾರೆ.
ವರದಿ : ಮಲ್ಲೇಶ್ ಮಣ್ಣಮ್ಮನವರ
ಸಿಟಿಜನ್ ಜರ್ನಲಿಸ್ಟ್, ಲಕ್ಷ್ಮೇಶ್ವರ
