ದೇಶದ ಕಟ್ಟ ಕಡೆಯ ಪ್ರತಿ ಪ್ರಜೆಯ ಹಿತಕ್ಕಾಗಿ ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆದು, ಮರಳಿ ತನ್ನ ಜನಗಳ ಹತ್ತಿರ ಬಂದು ಅವರಿಗೆ ಸಮಾನತೆ, ಹಕ್ಕುಗಳು, ಶಿಕ್ಷಣ ಸಿಗಲೆಂದು ಹಗಲಿರುಳು ಶ್ರಮಿಸಿದವರು ಡಾ. ಬಿ ಆರ್ ಅಂಬೇಡ್ಕರ್ ಎಂದು ಉಪನ್ಯಾಸಕ ಸೋಮಶೇಖರ್ ಕನಕಾಚಲ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಹಳ್ಳಿರಂಗ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ನಡೆಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಉಪನ್ಯಾಸಕರು ಸೋಮಶೇಖರ್ ಕನಕಾಚಲ ಮಾತನಾಡಿ, “ಅಂಬೇಡ್ಕರ್ ಅವರ ಜೀವನ ಮೌಲ್ಯಗಳನ್ನು, ಅವರು ಸಂಕಟ, ಕಷ್ಟ, ನೋವುಗಳನ್ನೆಲ್ಲವನ್ನು ಓದಬೇಕು. ಅಂಬೇಡ್ಕರ್ ಅವರು ಶಿಕ್ಷಣ ಸಾಕಷ್ಟು ಮಹತ್ವವನ್ನು ಕೊಟ್ಟಿದ್ದರು, ಅದಕ್ಕಾಗಿಯೇ ಓದಿನ ಮೂಲಕವೇ ನಾವೆಲ್ಲರೂ ಜ್ಞಾನವನ್ನು ಕಟ್ಟಿಕೊಳ್ಳಬೇಕ” ಎಂದರು
ಅಂಬೇಡ್ಕರ್ ಅವರ ಪರಿನಿಬ್ಬಾಣದ ನಂತರ ಅವರ ಪುಸ್ತಕಗಳು ಮೂಲೆ ಗುಂಪುಗಳಾಗಿ ಸೇರಿದ್ದವು. ಎಷ್ಟೋ ವರ್ಷಗಳ ವರೆಗೆ ಅವುಗಳು ಪ್ರಕಟಣೆ ಕಾಣದೆ, ಓದುಗರಿಂದ ದೂರ ಉಳಿದಿದ್ದವು. ಅಂಬೇಡ್ಕರ್ ಅವರ ಪುಸ್ತಕಗಳನ್ನು ಪ್ರಕಟಿಸಬೇಕೆಂದು ಅನೇಕ ಹೋರಾಟಗಳು ನಡೆದ ನಂತರದಲ್ಲಿ ಅಂಬೇಡ್ಕರ್ ಅವರ ಪುಸ್ತಕಗಳನ್ನು ಪ್ರಕಟಿಸಿದರು. ಬಳಿಕ ಅಂಬೇಡ್ಕರ್ ಅವರ ಜ್ಞಾನವನ್ನು ಎಲ್ಲರೂ ಅರಿಯುವಂತಾಯಿತು. ಅಂದರೆ, ಎಲ್ಲರಿಗೂ ಓದವ ಅವಕಾಶ ಸಿಕ್ಕಿತು. ಅಂಬೇಡ್ಕರ್ ಅವರ ವಿಚಾರಗಳು, ಚಿಂತನೆಗಳನ್ನು ತಿಳಿಯಲು ಸಾಧ್ಯವಾಯಿತು. ಹಾಗಾಗಿ ನೀವು ಅವರ ಬರಹಗಳನ್ನು ಓದಿ ಅಂಬೇಡ್ಕರ್ ವಿಚಾರಗಳನ್ನು ತಿಳಿದುಕೊಳ್ಳಬೇಕು” ಎಂದು ಸೋಮಶೇಖರ್ ಕನಕಾಚಲ ಹೇಳಿದರು.
ಕವಿಗಾರ್ತಿ ಪೂಜಾ ಶಿಂಗೆ ಮಾತನಾಡಿ, “ಅಂಬೇಡ್ಕರ್ ವಿಚಾರಗಳನ್ನು ಯಾರು ಪ್ರಭುದ್ದವಾಗಿ ಜಾರಿಗೆ ತರುತ್ತಾರೋ ಅವರು ನಿಜವಾದ ಅನುಯಾಯಿಗಳು. ಅಂತಹ ಕೆಲಸವನ್ನು ಈ ಹಳ್ಳಿರಂಗ ಶಾಲೆ ಮಾಡುತ್ತಿದೆ. ಒಂದು ಕಾಲದಲ್ಲಿ ಮನು ಗ್ರಂಥದಲ್ಲಿ ಮಹಿಳೆ ಸ್ವತಂತ್ರವಾಗಿರಲು ಅನರ್ಹಳೆಂದು ಹೇಳಿದೆ. ಆದರೆ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಮಹಿಳೆ ಸ್ವತಂತ್ರಳು, ಸ್ವತಂತ್ರವಾಗಿ ಬದುಕಲು ಹಕ್ಕು ಕೊಟ್ಟಿದೆ” ಎಂದು ಹೇಳಿದರು.
ರಾಘವೇಂದ್ರ ಬಿನ್ನಾಳ ಅಥಿತಿ ಭಾಷಣ ಮಾಡಿ, “ಹಳ್ಳಿರಂಗ ಶಾಲೆಯ ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳ ಜತೆಗೆ ಇಂತಹ ಒಳ್ಳೆಯ ವಾತಾವರಣದಲ್ಲಿ ಬೆಳೆಯುತ್ತಿದ್ದು, ಈ ಸಮಾಜದ ಬಗ್ಗೆ ದುಡಿದ ಜ್ಯೋತಿ ಬಾ ಫುಲೆ, ಅಂಬೇಡ್ಕರ್ ಅವರಂತಹ ಅನೇಕ ಮಹಿನೀಯರ ಜೀವನ ಮೌಲ್ಯಗಳನ್ನು ಸಶಕ್ತವಾಗಿ ಹೇಳುವಂತ ಸಾಮರ್ಥ್ಯವನ್ನು ನಿಮ್ಮಲ್ಲಿ ನಾನು ಕಂಡಿರುವೆ. ಶಿಕ್ಷಣ ವಂಚಿತರಾಗದಂತೆ ಮಕ್ಕಳ ಶಿಕ್ಷಣವನ್ನು ಹಳ್ಳಿರಂಗ ಶಾಲೆ ಮಾಡುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಹೊಳೆ ಮಣ್ಣೂರಲ್ಲಿ ಮನರೇಗಾ ಕೂಲಿ ಕಾರ್ಮಿಕರೊಂದಿಗೆ ಅಂಬೇಡ್ಕರ್ ಜಯಂತಿ ಆಚರಣೆ
ಕಾರ್ಯಕ್ರಮದಲ್ಲಿ ಅಜರುದ್ದೀನ ಕುಸುಗಲ್, ಬಿ ಎಮ್ ಮುಳ್ಳೂರ, ರೂಪಾ ಅಗಸಿಮನಿ, ಶಿಕ್ಷರು, ಹಿರಿಯರು ಗದಿಗೆಪ್ಪ ಕಡಿಯವರು, ವಿದ್ಯಾರ್ಥಿಗಳು, ಪಾಲಕರು ಇದ್ದರು.
