ಗದಗ | ಹಳ್ಳಿರಂಗ ಶಾಲೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ

Date:

ದೇಶದ ಕಟ್ಟ ಕಡೆಯ ಪ್ರತಿ ಪ್ರಜೆಯ ಹಿತಕ್ಕಾಗಿ ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆದು, ಮರಳಿ ತನ್ನ ಜನಗಳ ಹತ್ತಿರ ಬಂದು ಅವರಿಗೆ ಸಮಾನತೆ, ಹಕ್ಕುಗಳು, ಶಿಕ್ಷಣ ಸಿಗಲೆಂದು ಹಗಲಿರುಳು ಶ್ರಮಿಸಿದವರು ಡಾ. ಬಿ ಆರ್ ಅಂಬೇಡ್ಕರ್ ಎಂದು ಉಪನ್ಯಾಸಕ ಸೋಮಶೇಖರ್ ಕನಕಾಚಲ ಹೇಳಿದರು.

- Advertisement -

ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಹಳ್ಳಿರಂಗ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ನಡೆಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಕಾರ್ಯಕ್ರಮದ ಮುಖ್ಯ ಅತಿಥಿಗಳು ಉಪನ್ಯಾಸಕರು ಸೋಮಶೇಖರ್ ಕನಕಾಚಲ ಮಾತನಾಡಿ, “ಅಂಬೇಡ್ಕರ್ ಅವರ ಜೀವನ ಮೌಲ್ಯಗಳನ್ನು, ಅವರು ಸಂಕಟ, ಕಷ್ಟ, ನೋವುಗಳನ್ನೆಲ್ಲವನ್ನು ಓದಬೇಕು. ಅಂಬೇಡ್ಕರ್ ಅವರು ಶಿಕ್ಷಣ ಸಾಕಷ್ಟು ಮಹತ್ವವನ್ನು ಕೊಟ್ಟಿದ್ದರು, ಅದಕ್ಕಾಗಿಯೇ ಓದಿನ ಮೂಲಕವೇ ನಾವೆಲ್ಲರೂ ಜ್ಞಾನವನ್ನು ಕಟ್ಟಿಕೊಳ್ಳಬೇಕ” ಎಂದರು

ಅಂಬೇಡ್ಕರ್ ಅವರ ಪರಿನಿಬ್ಬಾಣದ ನಂತರ ಅವರ ಪುಸ್ತಕಗಳು ಮೂಲೆ ಗುಂಪುಗಳಾಗಿ ಸೇರಿದ್ದವು. ಎಷ್ಟೋ ವರ್ಷಗಳ ವರೆಗೆ ಅವುಗಳು ಪ್ರಕಟಣೆ ಕಾಣದೆ, ಓದುಗರಿಂದ ದೂರ ಉಳಿದಿದ್ದವು. ಅಂಬೇಡ್ಕರ್ ಅವರ ಪುಸ್ತಕಗಳನ್ನು ಪ್ರಕಟಿಸಬೇಕೆಂದು ಅನೇಕ ಹೋರಾಟಗಳು ನಡೆದ ನಂತರದಲ್ಲಿ ಅಂಬೇಡ್ಕರ್ ‌ಅವರ ಪುಸ್ತಕಗಳನ್ನು ಪ್ರಕಟಿಸಿದರು. ಬಳಿಕ ಅಂಬೇಡ್ಕರ್ ಅವರ ಜ್ಞಾನವನ್ನು ಎಲ್ಲರೂ ಅರಿಯುವಂತಾಯಿತು. ಅಂದರೆ, ಎಲ್ಲರಿಗೂ ಓದವ ಅವಕಾಶ ಸಿಕ್ಕಿತು. ಅಂಬೇಡ್ಕರ್ ಅವರ ವಿಚಾರಗಳು, ಚಿಂತನೆಗಳನ್ನು ತಿಳಿಯಲು ಸಾಧ್ಯವಾಯಿತು. ಹಾಗಾಗಿ ನೀವು ಅವರ ಬರಹಗಳನ್ನು ಓದಿ ಅಂಬೇಡ್ಕರ್ ವಿಚಾರಗಳನ್ನು ತಿಳಿದುಕೊಳ್ಳಬೇಕು” ಎಂದು ಸೋಮಶೇಖರ್ ಕನಕಾಚಲ ಹೇಳಿದರು.

ಕವಿಗಾರ್ತಿ ಪೂಜಾ ಶಿಂಗೆ ಮಾತನಾಡಿ, “ಅಂಬೇಡ್ಕರ್ ವಿಚಾರಗಳನ್ನು ಯಾರು ಪ್ರಭುದ್ದವಾಗಿ ಜಾರಿಗೆ ತರುತ್ತಾರೋ ಅವರು ನಿಜವಾದ ಅನುಯಾಯಿಗಳು. ಅಂತಹ ಕೆಲಸವನ್ನು ಈ ಹಳ್ಳಿರಂಗ ಶಾಲೆ ಮಾಡುತ್ತಿದೆ. ಒಂದು‌ ಕಾಲದಲ್ಲಿ ಮನು ಗ್ರಂಥದಲ್ಲಿ ಮಹಿಳೆ ಸ್ವತಂತ್ರವಾಗಿರಲು ಅನರ್ಹಳೆಂದು ಹೇಳಿದೆ. ಆದರೆ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಮಹಿಳೆ ಸ್ವತಂತ್ರಳು, ಸ್ವತಂತ್ರವಾಗಿ ಬದುಕಲು ಹಕ್ಕು ಕೊಟ್ಟಿದೆ” ಎಂದು ಹೇಳಿದರು.

ರಾಘವೇಂದ್ರ ಬಿನ್ನಾಳ ಅಥಿತಿ ಭಾಷಣ ಮಾಡಿ, “ಹಳ್ಳಿರಂಗ ಶಾಲೆಯ ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳ ಜತೆಗೆ ಇಂತಹ ಒಳ್ಳೆಯ ವಾತಾವರಣದಲ್ಲಿ ಬೆಳೆಯುತ್ತಿದ್ದು, ಈ ಸಮಾಜದ ಬಗ್ಗೆ ದುಡಿದ ಜ್ಯೋತಿ ಬಾ ಫುಲೆ, ಅಂಬೇಡ್ಕರ್ ಅವರಂತಹ ಅನೇಕ ಮಹಿನೀಯರ ಜೀವನ ಮೌಲ್ಯಗಳನ್ನು ಸಶಕ್ತವಾಗಿ ಹೇಳುವಂತ ಸಾಮರ್ಥ್ಯವನ್ನು ನಿಮ್ಮಲ್ಲಿ ನಾನು ಕಂಡಿರುವೆ. ಶಿಕ್ಷಣ ವಂಚಿತರಾಗದಂತೆ ಮಕ್ಕಳ ಶಿಕ್ಷಣವನ್ನು ಹಳ್ಳಿರಂಗ ಶಾಲೆ ಮಾಡುತ್ತಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಗದಗ | ಹೊಳೆ ಮಣ್ಣೂರಲ್ಲಿ ಮನರೇಗಾ ಕೂಲಿ ಕಾರ್ಮಿಕರೊಂದಿಗೆ ಅಂಬೇಡ್ಕರ್ ಜಯಂತಿ ಆಚರಣೆ 

ಕಾರ್ಯಕ್ರಮದಲ್ಲಿ ಅಜರುದ್ದೀನ ಕುಸುಗಲ್, ಬಿ ಎಮ್ ಮುಳ್ಳೂರ, ರೂಪಾ ಅಗಸಿಮನಿ,  ಶಿಕ್ಷರು, ಹಿರಿಯರು ಗದಿಗೆಪ್ಪ ಕಡಿಯವರು, ವಿದ್ಯಾರ್ಥಿಗಳು, ಪಾಲಕರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಧಿಕಾರಿಗಳ ನಿರ್ಲಕ್ಷ್ಯದಿಂದ ದೌರ್ಜನ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ : ಸಂಜೀವ ಬಳ್ಕೂರು

ರಾಯಚೂರು ಜಿಲ್ಲೆಯಲ್ಲಿ ದಲಿತ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಹಾಗೂ...

ಗದಗ | ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದಲ್ಲಿ ಮಧ್ಯವರ್ತಿಗಳ ಹಾವಳಿ: ಕಡಿವಾಣಕ್ಕೆ ಆಗ್ರಹ

ಗದಗ ಜಿಲ್ಲೆಯ ಬಡ ಅಲ್ಪಸಂಖ್ಯಾತರ ಕುಟುಂಬಗಳಿಗೆ ಸರ್ಕಾರದ ಯೋಜನೆಗಳು ಪ್ರಮಾಣಿಕವಾಗಿ ದೊರಕಿಸಿ...

ಕೋಲಾರ | ವಿದ್ಯಾರ್ಥಿನಿಯ ನಾಲ್ಕು ವರ್ಷದ ವಿದ್ಯಾಭ್ಯಾಸಕ್ಕೆ ಎಲ್.ಜಿ. ಫೌಂಡೇಶನ್ ನೆರವು

ವಕ್ಕಲೇರಿ ಗ್ರಾಮದ ಕೂಲಿ ಕಾರ್ಮಿಕ ನಾಗರಾಜ್ ಅವರ ಪುತ್ರಿಯ ನಾಲ್ಕು ವರ್ಷದ...

ಬಾಗೇಪಲ್ಲಿ | ದ್ವಿಭಾಷಾ ನೀತಿ ಕೈಬಿಟ್ಟು ತ್ರಿಭಾಷಾ ಸೂತ್ರವನ್ನುಮುಂದುವರಿಸಬೇಕು ಎಂದು ಬೆಂಗಳೂರು ಛಲೋ

ರಾಜ್ಯದಲ್ಲಿ 15 ಸಾವಿರ ಹಿಂದಿ ಶಿಕ್ಷಕರು ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ...