ಗದಗ ಪಟ್ಟಣದಲ್ಲಿ ದುರ್ಗಾ ವಿಹಾರ ಹೋಟೆಲ್ ಆವರಣದಲ್ಲಿ ಯಾವುದೇ ಸುರಕ್ಷತಾ ಪರಿಕರಗಳನ್ನು ಹಾಕಿಕೊಳ್ಳದೇ ಮಲದ ಗುಂಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಘಟನೆ ನಡೆದಿದೆ.
ಈ ಕುರಿತು ಸಫಾಯಿ ಕರ್ಮಚಾರಿ ಜಿಲ್ಲಾ ಸಂಯೋಜಕ ರಮೇಶ ಕೋಳೂರ ಅವರು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.
ಈ ಕುರಿತು ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಅವರು, “ಮಲ ಹೊರುವ ಪದ್ದತಿ ನಿಷೇಧ ಕಾಯ್ದೆ-2013ರ ಪ್ರಕಾರ ಅಪರಾಧ(ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್) ಗದಗ ಜಿಲ್ಲೆಯಲ್ಲಿ ಸಾಕಷ್ಟು ಘಟಕಗಳು ನಡೆಯುತ್ತಿದ್ದು, ಅದರಲ್ಲೂ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ; ಪ್ರಾಂಶುಪಾಲೆ ಸಹಿತ ಮೂವರು ಅಮಾನತು
“ದುರ್ಗಾ ವಿಹಾರ ಹೋಟೆಲ್ ಆವರಣದಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳಿಂದ ಮಲದ ಗುಂಡಿ ಸ್ವಚ್ಛತೆ ಕೆಲಸ ಮಾಡಿಸುತ್ತಿರುವುದು ದುರಂತವೇ ಸರಿ. ಇಂತಹ ಕೆಲಸಗಳನ್ನು ಬಡ, ಕೆಳ ವರ್ಗದವರಿಂದ ಮಾಡಿಸುತ್ತಿರುವುದು ಇನ್ನೂ ದುರಂತ. ಹಾಗಾಗಿ ಎಂ ಎಸ್ ಕಾಯ್ದೆ-2013 ಪ್ರಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.