ಪೌರ ಕಾರ್ಮಿಕರು ಮತ್ತು ಗ್ರಾಮ ಮಟ್ಟದ ಸ್ವಚ್ಛತಾಗಾರರು ಎಂದರೆ ಜನಸಾಮಾನ್ಯರಿಂದ ಹಿಡಿದು ಸರ್ಕಾರಿ ಅಧಿಕಾರಿಗಳ ಮಟ್ಟದಲ್ಲೂ ನಿರ್ಲಕ್ಷ್ಯಗೊಳಗಾಗುತ್ತಾರೆ ಎಂದರೆ ತಪ್ಪಾಗಲಾದರು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಕಂದಾಯ ಮತ್ತು ತಹಶಿಲ್ದಾರ್ ಕಚೇರಿಯ ಮುಂಬಾಗ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದ ಪುರಸಭೆಯ ಪೌರಕಾರ್ಮಿಕರಿಗೆ ಸರಿಯಾದ ಉಪಕರಣಗಳನ್ನು ನೀಡಲಾಗಿಲ್ಲ. ಅವರಿಗೆ ಕೈಗವಸುಗಳು, ಮುಖಕ್ಕೆ ಮಾಸ್ಕ್ ಇಲ್ಲದೆ ಕೆಲಸ ಮಾಡಿದ್ದಾರೆ.
ಗ್ರಾಮ, ಪಟ್ಟಣ, ನಗರ, ಪುರಸಭೆಯನ್ನ ಸ್ವಚ್ಚವಾಗಿಡುವ ಕಡಿಮೆ ಸಂಬಳದಲ್ಲಿ ದುಡಿಯುವ ಈ ಕಾರ್ಮಿಕರಿಗೆ ಕೆಲಸ ಮಾಡಿ ದಣಿವಾದಾಗ ಕನಿಷ್ಠ ಪಕ್ಷ ಕುಡಿಯುವ ನೀರಿನ ವ್ಯವಸ್ಥೆಯೂ ತಹಶಿಲ್ದಾರ್ ಕಚೇರಿಯಲ್ಲಿ ಇಲ್ಲ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ ಪೌರಕಾರ್ಮಿಕರೊಬ್ಬರು, “ನಮ್ಮ ಕಷ್ಟ ನಿವಾರಣೆ ಅಕ್ಕತೇನ್ರಿ? ಇಷ್ಟೋತ್ತು ಆದ್ರು ತಹಶಿಲ್ದಾರ್ ಕಛೇರಿಯಲ್ಲಿ ಕುಡಿಯಾಕ ಒಂದು ಹನಿ ನೀರು ಕೊಡ್ತಿಲ್ಲ! ‘ಕೇಳಿದ್ರ ನಮ್ಗ ಇಲ್ಲ ನಿಮ್ಗೆಲಿಂದ ತರೂನ ಎನ್ನುತ್ತಾರೆ” ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಲಕ್ಷ್ಮೇಶ್ವರ ಕಂದಾಯ ಇಲಾಖೆಯಗೆ ಬರುವ ಸಾರ್ವಜನಿಕರಿಗೂ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರು ಇದ್ರು ಶೌಚಾಲಯದ ಪಕ್ಕದಲ್ಲಿರುವರಿಂದ ಅಲ್ಲಿನ ನೀರು ಬಳಸಲು ಸಿಬ್ಬಂಧಿ ಮನಸ್ಸು ಮಾಡುತ್ತಿಲ್ಲ.