“ಜೂನ್ 28ರಿಂದ ಕುಡಿಯುವ ನೀರಿನ ಪೂರೈಕೆ ಪ್ರಾರಂಭಿಸಲಾಗಿದೆ. ಒಂದು ವೇಳೆ ನೀರು ಪೂರೈಕೆಯಲ್ಲಿ ವಿಳಂಬವಾದ ಪ್ರದೇಶಗಳಿಗೆ ನಗರಸಭೆಯಿಂದ ನಿಯೋಜಿಸಲಾದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಯನ್ನು ಉಚಿತವಾಗಿ ಮಾಡಲಾಗುವುದು” ಎಂದು ನಗರಸಭೆ ಪೌರಾಯುಕ್ತ ರಮೇಶ್ ಪವಾರ ತಿಳಿಸಿದ್ದಾರೆ.
ಗದಗ-ಬೆಟಗೇರಿದಲ್ಲಿ ವಿವಿಧ ತಾಂತ್ರಿಕ ದೋಷಗಳಿಂದ ಕಳೆದ 10 ದಿನಗಳಿಂದ ಅವಳಿ ನಗರಕ್ಕೆ ತುಂಗಭದ್ರಾ ನದಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ಈ ಕುರಿತು ಪಟ್ಟಣದ ನಗರಸಭೆ ಪೌರಾಯುಕ್ತರು ಮಾತನಾಡಿ, “ಮುಂದಿನ ದಿನಗಳಲ್ಲಿ ನೀರಿನ ಪೂರೈಕೆಯ ಸಮಸ್ಯೆ ಉಂಟಾಗಿದಲ್ಲಿ ವಾರ್ಡ್ ನಂ.1 ರಿಂದ 17- ಸಿಂಧೂ, ಕಿರಿಯ ಎಂಜಿನಿಯರ್ ಮೊಬೈಲ್ ಸಂಖ್ಯೆ: 80884 98021 ಹಾಗೂ ವಾರ್ಡ್ ನಂ.18ರಿಂದ 35ರವರೆಗೆ ಸಿದ್ದು ಹುಣಸೀಮರದ, ಕಿರಿಯ ಎಂಜಿನಿಯರ್ ಮೊಬೈಲ್ ಸಂಖ್ಯೆ: 8088782451 ಸಂಪರ್ಕಿಸಿ ನೀರಿನ ಟ್ಯಾಂಕರ್ ಪಡೆಯಬಹುದು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿ ಆದೇಶ
ಅಲ್ಲದೇ ಯಾವುದೇ ಬೋರ್‌ವೆಲ್‌ಗಳು, ಪೈಪ್‌ಲೈನ್‌ಗಳು ಇತರೆ ದುರಸ್ತಿಗಳು ಬಂದಲ್ಲಿ ಈ ಕಾರ್ಯಕ್ಕೆ ಸಂಬಂಧಪಟ್ಟ ಕಿರಿಯ ಎಂಜಿನಿಯರ್‌ಗಳನ್ನು ಸಂಪರ್ಕಿಸುವಂತೆ ಕೋರಿದ್ದಾರೆ.