ಎಂಟು ಭಾರತೀಯ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ

Date:

ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ(ಐಎಂಬಿಎಲ್) ದಾಟಿದ ಆರೋಪದ ಮೇಲೆ ಎಂಟು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಭಾನುವಾರ ಮುಂಜಾನೆ ಬಂಧಿಸಿದೆ. ಮೀನುಗಾರರು ರಾಮೇಶ್ವರಂನವರಾಗಿದ್ದು, ಅವರ ಮೀನುಗಾರಿಕಾ ದೋಣಿಯನ್ನೂ ಶ್ರೀಲಂಕಾ ವಶಕ್ಕೆ ಪಡೆದಿದೆ.

- Advertisement -

ಬಂಧಿತ ಎಂಟು ಮೀನುಗಾರರನ್ನು ಎಸ್. ಸೇಸು(39), ಎನ್. ಅಣ್ಣಾಮಲೈ(55), ವಿ. ಕಲ್ಯಾಣರಾಮನ್(48), ಎಸ್. ಸೈಯದ್ ಇಬ್ರಾಹಿಂ(35), ಎನ್. ಮುನೀಶ್ವರನ್(35), ಯು. ಸೆಲ್ವಂ(28), ಕೆ. ಕಾಂತಿವೆಕ್(67) ಮತ್ತು ಬಾಲಮುರುಗನ್(24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ರಾಮೇಶ್ವರಂ ಮೂಲದವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಇದನ್ನು ಓದಿದ್ದೀರಾ? 34 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ವಾರ್ಷಿಕವಾಗಿ ಮೀನುಗಾರಿಕ ನಿಷೇಧ ಘೋಷಣೆಯಾದ ನಂತರ ಇದು ಮೊದಲ ಬಂಧನವಾಗಿದೆ. ರಾಮೇಶ್ವರಂ ಉತ್ತರ ಬಂದರಿನಿಂದ ಸುಮಾರು 300 ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು ಶನಿವಾರ ಸಮುದ್ರಕ್ಕೆ ಇಳಿದಿದೆ ಎಂದು ವರದಿಯಾಗಿದೆ.

ದಡಕ್ಕೆ ತಲುಪುತ್ತಿದ್ದಾಗ ಕೆಲವು ಮೀನುಗಾರರು ಗಡಿ ದಾಟಿದ್ದಾರೆ ಎಂದು ಹೇಳಲಾಗಿದೆ. ಬಂಧಿತ ಮೀನುಗಾರರು ಮತ್ತು ಅವರ ದೋಣಿಯನ್ನು ಸದ್ಯ ತಲೈಮನ್ನಾರ್‌ಗೆ ಕರೆದೊಯ್ಯಲಾಗಿದೆ. ರಾಮೇಶ್ವರದ ಎಸ್. ಪಂಡಿತ್ಯಮ್ಮಳ್ ಅವರ ಮಾಲೀಕತ್ವದ ಐಎನ್‌ಡಿ-ಟಿಎನ್-10-ಎಂಎಂ-773 ನೋಂದಣಿ ಸಂಖ್ಯೆಯನ್ನು ಹೊಂದಿರುವ ದೋಣಿಯನ್ನು ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.

ರಾಮೇಶ್ವರದ ಮೀನುಗಾರರ ಸಂಘಗಳು ಬಂಧನವನ್ನು ಖಂಡಿಸಿದ್ದು, ಮೀನುಗಾರರ ಬಿಡುಗಡೆಗೆ ಮತ್ತು ವಶಪಡಿಸಿಕೊಂಡ ದೋಣಿಯನ್ನು ಮರಳಿ ಪಡೆಯಲು ಕೇಂದ್ರ ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಳೆದ ಆರು ತಿಂಗಳಲ್ಲಿ ನೆಲ ಕಚ್ಚಿದೆ ಗ್ರಾಮೀಣ ಗ್ರಾಹಕರ‌ ವಿಶ್ವಾಸ- RBI ಸಮೀಕ್ಷೆ

ಭಾರತದ ಗ್ರಾಮೀಣ ಗ್ರಾಹಕರ ವಿಶ್ವಾಸವು 2026ರ ವರ್ಷದ ಉದ್ದಕ್ಕೂ ನಿರಂತರವಾಗಿ ಕುಸಿಯುತ್ತಲೇ...

ಕೇರಳ ಮುಸ್ಲಿಂ ಲೀಗ್ ಐತಿಹಾಸಿಕ ಹೆಜ್ಜೆ: ಇದೇ ಮೊದಲ ಬಾರಿಗೆ ಹಿಂದೂ ನಾಯಕನಿಗೆ ಉಪಾಧ್ಯಕ್ಷ ಪಟ್ಟ

ಕೇರಳದ ಪ್ರಮುಖ ರಾಜಕೀಯ ಪಕ್ಷವಾದ 'ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್' (IUML)...

ಗಾಜಾ ನರಮೇಧ : ಪ್ಯಾಲೆಸ್ತೀನಿಯನ್ ಪಟ್ಟಣಗಳ ನಾಶವನ್ನು ತೋರಿಸುವ ಉಪಗ್ರಹಚಿತ್ರಗಳು

ಜೆರುಸಲೇಮ್: ಕಳೆದ ವರ್ಷ ಇಸ್ರೇಲ್–ಹಮಾಸ್ ಕದನ ವಿರಾಮ ಒಪ್ಪಂದ ಜಾರಿಯಾದ ಬಳಿಕವೂ...