ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾಗಿದ್ದ ಲಕ್ಷ್ಮೀನಾರಾಯಣ ನಾಗವಾರ ಅವರ ನುಡಿ ನಮನ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಡಿಎಸ್ಎಸ್ ಗದಗ ಜಿಲ್ಲಾ ಮುಖಂಡರು ತಿಳಿಸಿದ್ದಾರೆ.
ಗದಗ ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ನಾಟಕದ ದಲಿತ ಚಳವಳಿಯಲ್ಲಿ ಅವಿಸ್ಮರಣೀಯ ಪಾತ್ರ. ರಾಜ್ಯದಲ್ಲಿ ಚಳವಳಿಯನ್ನು ನಿರಂತರವಾಗಿಟ್ಟುಕೊಂಡವರು. ಅತ್ಯಂತ ಸ್ನೇಹಜೀವಿಯಾಗಿದ್ದ ಅವರು ಮೊನ್ನೆ ಮೊನ್ನೆಯಷ್ಟೇ ಅನಾರೋಗ್ಯದಿಂದ ನಮ್ಮನ್ನಗಲಿದ್ದಾರೆ. ಹಾಗಾಗಿ ಜನವರಿ 4ರಂದು ಅವರ ನುಡಿ ನಮನ ಕಾರ್ಯಕ್ರಮ ಮಾಡುತ್ತಿದ್ದೇವೆ” ಎಂದರು.
“ಗದಗ ನಗರದ ಕಬ್ಬಿಗರ ಕೂಟದ ಭವನ (ಕರ್ನಾಟಕ ಟಾಕೀಸ್ ಹಿಂದುಗಡೆ ಬಸವೇಶ್ವರ ನಗರ)ದಲ್ಲಿ ಲಕ್ಷ್ಮೀನಾರಾಯಣ ನಾಗವಾರ ಅವರು ಕಟ್ಟಿದ ಚಳವಳಿಯ ನೆನಪಿನಲ್ಲಿ ಇದೇ ತಿಂಗಳು ಜನವರಿ 4ರ ಶನಿವಾರ ಸಂಜೆ 5ಕ್ಕೆ ನುಡಿ ನಮನ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಎರಡು ಗಂಟೆ ಬಾರ್ನಲ್ಲಿ ಕಳೆದಿದ್ದ ಗುತ್ತಿಗೆದಾರ ಸಚಿನ್ ಪಾಂಚಾಳ್
“ಲಕ್ಷ್ಮೀನಾರಾಯಣ ನಾಗವಾರ ಅವರ ಒಡನಾಡಿಗಳು, ಸಂಘಟನೆ ಗೆಳೆಯರು, ಹೋರಾಟದ ಗೆಳೆಯರು ಸೇರಿ ಗೌರವಪೂರ್ವಕ ನುಡಿಗಳನ್ನು ಅವರಿಗೆ ಅರ್ಪಿಸೋಣ. ಅವರ ಹೋರಾಟ ಜೀವನದ ಬಗ್ಗೆ ಒಂದಿಷ್ಟು ಸಂಗತಿ, ಮಾತುಗಳನ್ನು ಮೆಲುಕು ಹಾಕೋಣ” ಎಂದು ತಿಳಿಸಿದರು.