ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸವಣೂರು ಮುಖ್ಯ ರಸ್ತೆಯಲ್ಲಿರುವ ಚಂದ್ರು ಇಳಗೇರ ಮತ್ತು ಪಾಲುದಾರರಾಗಿರುವ ಶ್ರಾವಣಿ ರೆಸ್ಟೋರೆಂಟ್, ಬಾರ್ ಮತ್ತು ಲಾಡ್ಜ್ ಸ್ಥಗಿತ(ಬಂದ್) ಮಾಡುವಂತೆ ಕಳೆದ ಮೂರು ದಿನಗಳಿಂದ ಮಹಿಳೆಯರು ರಾತ್ರೋರಾತ್ರಿ ಪ್ರತಿಭನೆ ನಡೆಸಿದರು.
ಕಾರಣ ಈ ಬಾರ್ ರೆಸ್ಟೋರೆಂಟ್ ಮತ್ತು ಲಾಡ್ಜ್ ಗೋಡೆಗೆ ಹೊಂದಿಕೊಂಡಂತೆ ಹತ್ತಿರವೇ ಸಂಸಾರಸ್ಥ ಕುಟುಂಬಗಳಿವೆ. ಕೂಗಳತೆಯಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಸತಿ ನಿಲಯ, ನೂರು ಮೀಟರ್ ದೂರದಷ್ಟು ಅಂತರದಲ್ಲಿ ಆಕ್ಸ್‌ಫರ್ಡ್ ಶಾಲೆ ಇದೆ. ಇಂತಹ ರಸ್ತೆಯಲ್ಲಿ ನಿತ್ಯವೂ ಬಹುತೇಕ ಮಹಿಳೆಯರು ಕೂಲಿ ಕೆಲಸಕ್ಕೆಂದು ಓಡಾಡುತ್ತಲೇ ಇರುತ್ತಾರೆ. ಹಾಗಾಗಿ ಇಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಸಾರ್ವಜನಿಕರಿಗೆ ತೊಂದರೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರಾವಣಿ ಬಾರ್ ರೆಸ್ಟೋರೆಂಟ್ ಮಾಲೀಕರ ಅಂಗಡಿಗೆ ಮಧ್ಯಪಾನದ ವಾಹನ ಬಂದಿತ್ತು. ಅಬಕಾರಿ ಅಧಿಕಾರಿಗಳು ವಾಹನದಲ್ಲಿದ್ದ ಮಾಲನ್ನು ಅಂಗಡಿಯೊಳಗೆ ಇರಿಸಿ ಅಂಗಡಿ ಸೀಜ಼್ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು; 8 ಮಂದಿ ಅಮಾನತು
ಕಾದು ಪ್ರತಿಭಟಸುತ್ತಿದ್ದ ಸಾರ್ವಜನಿಕರು, “ಮದ್ಯಪಾನ ತುಂಬಿಕೊಂಡು ಬಂದಿದ್ದ ಗಾಡಿಯಲ್ಲಿನ ಮದ್ಯಪಾನದ ಬಾಕ್ಸ್‌ಗಳನ್ನು ಒಳಗಿಡಿಸಿದ್ದೀರಿ. ಹೇಗೆ ಗಾಡಿ ಖಾಲಿ ಮಾಡಿಸಿದ್ದೀರಿ. ನಿಮ್ಮ ಅವರ ಮಧ್ಯೆ ಏನ್ ನಡೆದಿದೆ” ಎಂದು ಲಕ್ಷ್ಮೇಶ್ವರ ಪಿಎಸ್‌ಐ ಮತ್ತು ಅಬಕಾರಿ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.
ವರದಿ : ಲಕ್ಷ್ಮೇಶ್ವರ ಸಿಟಿಜನ್ ಜರ್ನಲಿಸ್ಟ್- ಕೇಶವ ಕಟ್ಟಿಮನಿ
