“ಮೈಕ್ರೋ ಫೈನಾನ್ಸಿಗಳ ಹಾವಳಿಯಿಂದ ಗ್ರಾಹಕರು ಊರು ಬಿಡುವುದು ಆತ್ಮಹತ್ಯೆಗಳು ಮಾಡಿಕೊಳ್ಳುವ ಪ್ರಯತ್ನಗಳನ್ನು ನಡೆಯುತ್ತಿವೆ. ಆದ್ದರಿಂದ ಮುಂಡರಗಿ ತಾಲೂಕಿನಲ್ಲಿ ಯಾವುದೇ ಲೈಸೆನ್ಸ್ ಪಡೆಯದೆ ದಿನದ ಬಡ್ಡಿ, ವಾರದ ಬಡ್ಡಿ, ತಿಂಗಳ ಬಡ್ಡಿ ಮೂಲಕ ಮೀಟರ್ ಬಡ್ಡಿ ದಂದೆ ನಡೆಸುತ್ತಿದ್ದಾರೆ. ಜೊತೆಗೆ ಮೈಕ್ರೋ ಫೈನಾನ್ಸ್ ಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಎಂದು ನಮ್ಮ ಕರವೇ ಜಿಲ್ಲಾಧ್ಯಕ್ಷ ಚಂದ್ರು ಪೂಜಾರ್ ಒತ್ತಾಯಿಸಿದರು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮೀಟರ್ ಬಡ್ಡಿ ದಂದೆ ನಡೆಸುತ್ತಿರುವವರ ಮೇಲೆ ಹಾಗೂ ಮೈಕ್ರೋ ಫೈನಾನ್ಸ್ ಗಳ ಮೇಲೆ ಕಾನೂನು ಕ್ರಮಕ್ಕೆ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಮುಂಡರಗಿ ಪಟ್ಟಣದಲ್ಲಿ ಅನೇಕ ರೈತಾಪಿ ವರ್ಗದವರು, ಕೂಲಿಕಾರ್ಮಿಕರು ಹಾಗೂ ಬಡ ಕುಟುಂಬ ವ್ಯಾಪಾರಸ್ಥರು ಇದ್ದಾರೆ. ಇವರ ಆರ್ಥಿಕ ಪರಿಸ್ಥಿತಿಯನ್ನು ಅರಿತು, ಬಂಡವಾಳ ಶಾಹಿ ಮನಸ್ಥಿತಿಯವರು ಮೀಟರ್ ಬಡ್ಡಿ ದಂಧೆ ನಡೆಸಿ ಬಡ್ಡಿ ಸಾಲದ ರೂಪದಲ್ಲಿ ನೀಡುತ್ತಾರೆ. ದಿನದ ಬಡ್ಡಿ ವಾರದ ಬಡ್ಡಿ ತಿಂಗಳ ಬಡ್ಡಿ ಅಂತ ಹೀಗೆ ಅನೇಕ ರೀತಿಯಲ್ಲಿ ಬಡವರ ರಕ್ತವನ್ನು ಹಿರುತ್ತಾರೆ. ಸಾಲ ಪಡೆದಂತ ವ್ಯಕ್ತಿಗಳು ಮೀಟರ್ ಬಡ್ಡಿ ಸಾಲವನ್ನು ತೀರಿಸಲಾಗದೆ, ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಕುಟುಂಬ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ” ಎಂದರು.
“ಕೂಡಲೇ ಮೀಟರ್ ಬಡ್ಡಿ ಹಾಗೂ ಪೈನಾನ್ಸ್ ಕಂಪನಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಚಂದ್ರು ಪೂಜಾರ್ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸೌಹಾರ್ದತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಸಾಧ್ಯ : ಬಾ.ಹ.ರಮಾಕುಮಾರಿ
ಮನವಿ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ರಾಜಭಕ್ಷಿ ಕೆಂಪ್ಪಸಾಬಣ್ಣವರ್, ಇರ್ಫಾನ್ ಬೇಪಾರಿ, ನಜಿರ್ ಸಾಬ್ ಹೊನ್ನಳ್ಳಿ, ಸುರೇಶ್ ಸವದತ್ತಿ, ಮಲ್ಲೇಶ್ ದೊಡ್ಡಮನಿ, ದಾವೂದ್ ಮಕಂದರ್ ಹಾಗೂ ಅನೇಕ ಹೋರಾಟಗಾರರು ಉಪಸ್ಥಿತರಿದ್ದರು.
