ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಸಾಮಾಜಿಕ ಹಾಗೂ ರೈತಪರ ಹೋರಾಟಗಾರರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕೋಗನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಉಪಸ್ಥಿತಿ ಇಲ್ಲದ ಕಾರಣ ಪಂಚಾಯಿತಿ ಸಿಬ್ಬಂದಿ ವರ್ಗದ ಕೊಟ್ರೇಶ್ ಬೂದನೂರು ಅವರಿಗೆ ಮನವಿ ಪತ್ರ ನೀಡಿ ಸ್ವಿಕೃತಿ ತೆಗೆದುಕೊಳ್ಳಲಾಗಿದೆ.
“ಕೋಗನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಐದು ಹಳ್ಳಿಗಳಾದ ಕೋಗನೂರು, ತಂಗೋಡ, ಗೋವಿನಕೊಪ್ಪ, ಅಂಕಲಿ, ನಾಗರಮಡವು ಈ ಹಳ್ಳಿಗಳಲ್ಲಿ ಮಹಿಳೆಯರು ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ದಲಿತ ಕೇರಿಗಳಲ್ಲಿ ಶೌಚಾಲಯಗಳಲ್ಲಿದೆ ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಿದ್ದು, ಮಳೆಗಾಲದಲ್ಲಿ ತುಂಬಾ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಚ್ಚುಕಟ್ಟಾದ ಸಾರ್ವಜನಿಕ ಮಹಿಳಾ ಶೌಚಾಲಯವನ್ನು ನಿರ್ಮಿಸಿಕೊಡಬೇಕು.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಹಿಂದೇಟಾಕದೆ ಈ ಸಮಸ್ಯೆಗೆ ಸ್ಪಂದಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪ | ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಅನ್ಯಾಯ; ಅಮೃತ ಸಿಂಚನ ಟ್ರಸ್ಟ್ ವಿರುದ್ಧ ಪ್ರತಿಭಟನೆ
ಈ ಸಂದರ್ಭದಲ್ಲಿ ಸಾಮಾಜಿಕ, ರೈತಪರ ಹೋರಾಟಗಾರರಾದ ರಾಕೇಶ್ ಬಿ, ರಾಜು ಎಚ್, ಅಂಕಲಿ ಹಿರಿಯ ಮುಖಂಡರಾದ ಮಲ್ಲಪ್ಪ ಎಂ, ಸ್ಥಳೀಯರಾದ ಮಹಾಂತೇಶ್, ಪ್ರವೀಣ್ ಕೂರಗುಂದ, ಶರಣಪ್ಪ ಎನ್ ಸಿ ಸೇರಿದಂತೆ ಇತರೆ ಸ್ಥಳೀಯರು ಇದ್ದರು.
