ಬೆಳವಣಿಕೆ-ಕೌಜಗೇರಿ ಮಾರ್ಗವಾಗಿ ಹೊಳೆ ಆಲೂರು ತಲುಪುವ ರಸ್ತೆಯಲ್ಲಿ ಅನಧಿಕೃತ ಹೆಚ್ಚು ಭಾರದ ಉಸುಕು ತುಂಬಿಕೊಂಡು ಹೋಗುವುದರಿಂದ ರಸ್ತೆ ಹಾಳಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಕೃಷಿಕ ಸಮಾಜ ನವದೆಹಲಿ ರೈತ ಮುಖಂಡರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಕೃಷಿಕ ಸಮಾಜದ ರಾಜ್ಯ ಉಪಾಧ್ಯಕ್ಷ ಬಸವರಾಜ್ ಸಜ್ಜನರ ಮಾತನಾಡಿ, “ಹೊಳೆ ಆಲೂರಿನಿಂದ ಬೆಳವಣಿಕೆ ಗ್ರಾಮದವರೆಗಿನ ರಸ್ತೆ ಮೂರು ತಿಂಗಳ ಹಿಂದೆಯಷ್ಟೆ ನಿರ್ಮಾಣವಾಗಿದೆ. ಬೃಹತ್ ಲಾರಿಗಳು ಈ ರಸ್ತೆಯಲ್ಲಿ ಉಸುಗು ತುಂಬಿಕೊಂಡು ಓಡಾಡುತ್ತಿವೆ. ಇದರಿಂದ ರಸ್ತೆ ಹಾಳಾಗಿ, ಡಾಂಬರ್ ಕಿತ್ತು ಹೋಗುತ್ತಿದೆ. ಹಾಗಾಗಿ ಕೂಡಲೇ ಅನಧಿಕೃತ ಲಾರಿಗಳ ಓಡಾಟವನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಬಡವರಿಗೆ ಹಕ್ಕುಪತ್ರ ನೀಡಲು ಹಿಂದೇಟು; ಏಕಾಂಗಿ ಪ್ರತಿಭಟನೆಗಿಳಿದ ಗ್ರಾ.ಪಂ. ಉಪಾಧ್ಯಕ್ಷ
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಮುಖಂಡರು ಮೈಲಾರಪ್ಪ ಕುರಹಟ್ಟಿ, ನೀಲಪ್ಪ ಗೌಡ, ದ್ಯಾಪನಗೌಡ್ರು, ರಾಯನ ಗೌಡ್ರು ಬದಾಮಿ, ಸಿದ್ದಪ್ಪ ಸಜ್ಜನ ಸೇರಿದಂತೆ ಇತರರು ಇದ್ದರು.