ಹತ್ತು ಹಲವು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳಿಗೆ ಅನುಕೂಲವಾಗಲು ಸರ್ಕಾರದ ವಿಶೇಷ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಸಮುದಾಯ ಭವನಗಳು ಸತ್ಕಾರ್ಯಗಳಿಗೆ ಸದ್ಬಳಕೆಯಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಖಾತೆಯ ಸಚಿವ ಡಾ.ಎಚ್.ಕೆ ಪಾಟೀಲ ಹೇಳಿದರು.
ಗದಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ದೇವಸ್ಥಾನ ನಿರ್ಮಾಣದಿಂದ ಗ್ರಾಮದಲ್ಲಿ ಧರ್ಮ ಜಾಗೃತಿ, ಪರಸ್ಪರರಲ್ಲಿ ಸೌಹಾರ್ದತೆ ಬೆಳೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ನೀಡಿದ ಹಣದಿಂದ ಇಂಥಹ ಗುಣಮಟ್ಟದ ಕಾಮಗಾರಿಗಳು ನಡೆಯಬೇಕು. ಗ್ರಾಮೀಣ ಭಾಗ ಅಭಿವೃದ್ಧಿ ಹೊಂದಬೇಕು” ಎಂದರು.
ಮುಕ್ತಿಮಂದಿರದ ವಿಮಲ ರೇಣುಕ ವೀರ ಮುಕ್ತಿಮಿನಿ ಶಿವಾಚಾರ್ಯ ಸ್ವಾಮಿಜಿ ಸಾನಿದ್ಯ ವಹಿಸಿ ಮಾತನಾಡಿರು. “ಮನುಷ್ಯ ಇಂದು ಧರ್ಮವಂತನಾಗಿ ಬಾಳುವುದನ್ನು ಕಲಿಯಬೇಕು. ಮೈಲಾರಲಿಂಗೇಶ್ವರ ಸಾಕ್ಷಾತ್ ಶಿವನ ಅವತಾರ ಅಂಥ ಜಾಗೃತ ತಾಣದಲ್ಲಿ ನಿತ್ಯ ಪೂಜಾ ಕೈಂಕರ್ಯಗಳು, ಧಾರ್ಮಿಕ ವಿಧಾನಗಳು ನಡೆಯಬೇಕು. ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೋಬ್ಬರು ಧರ್ಮದ ಹಾದಿಯಲ್ಲಿ ನಡೆದಾಗ ಜೀವನ ಸಾರ್ಥಕವಾಗುವುದು” ಎಂದರು.
ಕಾರ್ಯಕ್ರಮದಲ್ಲಿ ಕೆಆರ್‌ಐಡಿಎಲ್‌ನ ಅನಿಲ ಹಾಗೂ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಡ್ಡುಮುತ್ಯಾ ಸ್ವಾಮಿಜಿ, ಅಪ್ಪಣ್ಣ ಇನಾಮತಿ, ಎಂ.ಡಿ. ಬಟ್ಟೂರ, ಬಸವರಾಜ ಬಡ್ನಿ, ಹೇಮರಡ್ಡಿ ಹೊಸಮನಿ, ಫಕೀರೇಶ ಹಿರೇಮನಿ, ಬಿ.ವ್ಹಿ. ಸುಂಕಾಪೂರ, ದೇವಸ್ಥಾನ ಸಮಿತಿಯ ಮಹೇಶ ಕರಕಣ್ಣವರ, ಜಗನ್ನಾಥ ಕಮ್ಮಾರ, ಯಲ್ಲರಡ್ಡಿ ನೀಲಣ್ಣವರ, ನಿಂಗರಡ್ಡಿ ಚಿಕ್ಕರಡ್ಡಿ, ಗಂಗಪ್ಪ ಕತ್ತಿ, ಪ್ರಕಾಶ ನೀಲಣ್ಣವರ, ಮಂಜುನಾಥ ಕಮ್ಮಾರ, ಲಿಂಗರಾಜ ಕೈಹುಟ್ಟಿನ, ಸಿದ್ಧಲಿಂಗೇಶ ಕರಕಣ್ಣವರ, ಮಹಾಂತೇಶ ಮರ್ಚಣ್ಣವರ, ಮಲ್ಲಪ್ಪ ನಾರಾಯಣಪೂರ, ವೀರಪ್ಪ ಮುಶಣ್ಣವರ, ರಮೇಶ ಕಮ್ಮಾರ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.