ಗದಗ | ವಿಶ್ವಕರ್ಮ ಜಯಂತಿ ಆಚರಣೆ ನಮ್ಮೆಲ್ಲರಿಗೂ ಪ್ರೇರಣೆ ಆಗಲಿ: ಸಚಿವ ಎಚ್.ಕೆ ಪಾಟೀಲ್

Date:

Advertisements

ಮನುಷ್ಯನ ಬದುಕನ್ನು ಸುಂದರವಾಗಿಸೋ ಸಮುದಾಯ ವಿಶ್ವಕರ್ಮ ಸಮುದಾಯ. ದೇವಶಿಲ್ಪಿ ವಿಶ್ವಕರ್ಮ ಜಯಂತಿ ಆಚರಣೆ ನಮ್ಮೆಲ್ಲರಿಗೂ ಪ್ರೇರಣೆ ಆಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ ಪಾಟೀಲ್ ಹೇಳಿದರು.

ಗದಗದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಮನುಷ್ಯನ ವಿಕಸನ ಆಗಿದ್ದೆಲ್ಲ ವಿಶ್ವಕರ್ಮರಿಂದ. ಒಳ್ಳೆಯದನ್ನು ಕಾಣಿಸಬೇಕು, ಗ್ರಹಿಸಬೇಕು, ಸೂಕ್ಷ್ಮ ಇದ್ದದನ್ನು ಕಾಣಿಸಬೇಕು, ಆನಂದಿಸಬೇಕು ಇವುಗಳು ಸಾಧ್ಯವಾಗುವದು ವಿಶ್ವಕರ್ಮರಿಂದ ಮಾತ್ರ. ಬಡಿಗ, ಕಮ್ಮಾರ, ಶಿಲ್ಪಿ, ಕಂಬಾರ, ಅಕ್ಕಸಾಲಿಗರುಗಳು ಮಾಡುವ ಕೆಲಸದಿಂದಲೇ ಇಂದು ನಾಗರಿಕ ಸಮಾಜ ಸುಂದರವಾಗಿ ಕಾಣುವಂತೆ ಸಾಧ್ಯವಾಗಿದೆ. ನಮ್ಮ ನಾಗರಿಕ ಬದುಕು ಸುಂದರವಾಗಿ ಕಾಣುವಲ್ಲಿ ಪ್ರತಿಯೊಂದು ಹಂತದಲ್ಲಿ ವಿಶ್ವಕರ್ಮರ ಶ್ರಮ ಅಡಗಿರುತ್ತದೆ” ಎಂದರು.

“ಅಕ್ಕಸಾಲಿಗರು ಮಾಡುವಂತಹ ಆಭರಣಗಳ ವಿನ್ಯಾಸದ ಕೆಲಸದಿಂದಾಗಿ ನಮ್ಮ ನಾಗರಿಕರನ್ನು, ವಿಶೇಷವಾಗಿ ಮಹಿಳೆಯರನ್ನು ಸಂತುಷ್ಟರನ್ನಾಗಿಸುತ್ತದೆ. ಇತಿಹಾಸ ಅವಲೋಕನೆ ಶಿಲ್ಪಿಯ ಕೆಲಸದಿಂದ ಮಾತ್ರ ಸಾಧ್ಯವಾಗಿದ್ದು, ಶಿಲ್ಪಿಗಳು ಕೆತ್ತಿದ ನಾನಾ ಶಾಸನಗಳು ಹಾಗೂ ಸ್ಮಾರಕಗಳಿಂದ ಇಂದು ನಾವು ಇತಿಹಾಸ ಅಧ್ಯಯನ ಮಾಡಲು ಸಾಧ್ಯವಾಗಿದೆ. ನಮ್ಮತನವನ್ನು ನಮಗೆ ತೋರಿಸುವಲ್ಲಿ ಶಿಲ್ಪಿಯ ಪಾತ್ರ ಮಹತ್ವದಾಗಿದ್ದು ತಾವೆಲ್ಲರೂ ಇತಿಹಾಸಕಾರರಾಗಿದ್ದಿರಿ” ಎಂದು ತಿಳಿಸಿದರು.

Advertisements

“ಕುರ್ತಕೋಟಿಯಲ್ಲಿ ವಿಶ್ವಕರ್ಮರಿಗೆ ಕೌಶಲ್ಯಭಿವೃದ್ಧಿಗಾಗಿ ವಿಶೇಷ ಯೋಜನೆ ಕೈಗೊಳ್ಳಲಾಗಿದೆ. ರಾಜ್ಯದಲ್ಲಿಯೇ ಗ್ರಾಮೀಣ ಮಟ್ಟದಲ್ಲಿ ವಿಶ್ವಕರ್ಮರಿಗೆ ಉಪಯುಕ್ತವಾಗುವಂತಹ ದೊಡ್ಡ ಯೋಜನೆ ಇದಾಗಿದ್ದು ಶೀಘ್ರವೇ ಈ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಾಗುವದು. ಬರುವ ದಿನಗಳಲ್ಲಿ ಇದೊಂದು ಉಪಯುಕ್ತ ಕೇಂದ್ರವಾಗಲಿದೆ. ಮನುಷ್ಯ ಬದುಕಿನಲ್ಲಿ ನಿಮ್ಮ ಈ ಸೃಷ್ಠಿಯಿಂದ ಹೆಚ್ಚು ಜನರÀ ಬದುಕನ್ನು ಸುಂಸಕೃತರನ್ನಾಗಿಸುವ, ಸುಂದರವನ್ನಾಗಿಸುವ ಹಾಗೂ ನಮ್ಮತನವನ್ನು ಉಳಿಸಿಕೊಳ್ಳಲು ತುಂಬಾ ಸಹಕಾರಿಯಾಗಲಿದೆ. ಅಲ್ಲದೇ ಗದಗ ನಗರದಲ್ಲಿ ವಿಶ್ವಕರ್ಮ ವೃತ್ತ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದ್ದು ಮುಂದಿನ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ವಿಶ್ವಕರ್ಮ ನೂತನ ವೃತ್ತದಿಂದಲೇ ಚಾಲನೇ ನೀಡಲಾಗುವುದು” ಎಂದು ಸಚಿವ ಎಚ್.ಕೆ.ಪಾಟೀಲ ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಡಿ.ಕಡ್ಲಿಕೊಪ್ಪ, ವೀರಭದ್ರಪ್ಪ ಕಮ್ಮಾರ, ಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಡಿ.ವೈ.ಎಸ್.ಪಿ. ಸಂಕದ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಗದಗ ಜಿಲ್ಲಾ ವಿಶ್ವಕರ್ಮ ಮಹಸಭಾ ಜಿಲ್ಲಾಧ್ಯಕ್ಷರಾದ ದೇವೆಂದ್ರಪ್ಪ ಬಡಿಗೇರ, ಗಣ್ಯರಾದ ಬಿ.ಬಿ.ಅಸೂಟಿ ಸೇರಿದಂತೆ ವಿಶ್ವಕರ್ಮ ಸಮಾಜದ ಜಿಲ್ಲಾ ಹಾಗೂ ತಾಲೂಕು ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಶ್ರೀರಾಮ ಸೇನೆ

"ನಮ್ಮ ಸಂವಿಧಾನದ ರಾಷ್ಟ್ರ ಧ್ವಜದ ನಿಯಮಗಳಲ್ಲಿ ಒಂದು ನಿಯಮ ಇದೆ ಅದು...

ಗದಗ | ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಮಹನೀಯರ ಪಾತ್ರ ಅಪಾರ: ಸಚಿವ ಎಚ್.ಕೆ.ಪಾಟೀಲ

"ಗದಗ ಪರಿಸರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಇತಿಹಾಸ ರೋಚಕವಾಗಿದ್ದು, ಜಿಲ್ಲೆಯ...

ಗದಗ | ದೇವರ ಹೆಸರಿನಲ್ಲಿ ಮೌಢ್ಯ, ಕಂದಾಚಾರ: ತಡೆಗಟ್ಟುವಂತೆ ಡಿಎಸ್ಎಸ್ ಮನವಿ

"ನರಗುಂದ ಪಟ್ಟಣದಲ್ಲಿ ದೇವರ ಹೆಸರುಗಳನ್ನು ಇಟ್ಟುಕೊಂಡು ಜನರಿಗೆ ಮೌಡ್ಯತೆ ಮತ್ತು ಕಂದಾಚಾರಗಳನ್ನು...

ಗದಗ | ಭಾವನೂರು ಗ್ರಾಮದಲ್ಲಿ ನೂತನ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ

ಸಾರ್ವಜನಿಕರ ಜ್ಞಾನದಾಹ ನೀಗಿಸುವಲ್ಲಿ ಗ್ರಾಮೀಣ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ...

Download Eedina App Android / iOS

X