ನೂಲಿ ಚಂದಯ್ಯ ಸ್ವಾಭಿಮಾನದಿಂದ ಬದುಕು ನಡೆಸಿದವರು. ಅವರ ವಚನಗಳಲ್ಲಿಯೂ ಅವರ ಸ್ವಾಭಿಮಾನದ ಕುರಿತು ನಾವು ನೋಡಬಹುದು ಎಂದು ಗುರುಪಾದ ಸ್ವಾಮಿಜಿ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಭಜಂತ್ರಿ ಸಮುದಾಯದ ವತಿಯಿಂದ ಆಯೋಜಿಸಿದ್ದ ಕಾಯಕ ಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುಲಗಂಜಿಮಠ ರೋಣ ಗುರುಪಾದ ಸ್ವಾಮಿ ಮಾತನಾಡಿ, “ನೂಲಿ ಚಂದಯ್ಯ ತಳ ಸಮುದಾಯದಲ್ಲಿ ಹುಟ್ಟಿ ಶ್ರೇಷ್ಠ ವಚನಗಳನ್ನು ರಚಿಸಿ ಸಮಾಜದ ಕಣ್ಣಡಿಯಾಗಿದ್ದಾರೆ. ಇವರು ಒಟ್ಟು 48 ವಚನಗಳನ್ನು ರಚಿಸಿದ್ದು, ಅವುಗಳೆಲ್ಲವೂ ಸಮಾಜವನ್ನು ತಿದ್ದುವ, ಎಚ್ಚರಿಸುವ ವಚನಗಳಾಗಿವೆ. ಚಂದಯ್ಯನ ವಚನ್ನಗಳನ್ನು ನಿತ್ಯ ಪಠಿಸಬೇಕು. ವಚನಗಳ ಸಾರವನ್ನು ಅರಿಯಬೇಕು. ಆಗ ಮಾತ್ರ ನೂಲಿ ಚಂದಯ್ಯ ಜಯಂತಿ ಮಾಡಿದ್ದು ಸಾರ್ಥಕವಾಗುತ್ತದೆ” ಎಂದು ಹೇಳಿದರು.
“ಬಸವಣ್ಣ ಎಲ್ಲ ಜಾತಿಗಳನ್ನು ಅನುಭವ ಮಂಟಪದಲ್ಲಿ ಕೂಡಿಸಿ ವ್ಯಕ್ತಿಯಿಂದ ಸಮಾಜವನ್ನು ನಿರ್ಮಾಣ ಮಾಡಿದರು. ಇಂದು ಅಂತಹ ಸಮಾಜವಿಲ್ಲದೆ ಮನುಷ್ಯನು ತನ್ನ ಸಂಕುಚಿತ ಭಾವ ಹೊಂದಿ ಕೆಳಮಟ್ಟದ ಭಾವನೆಯನ್ನು ಹೊರ ಹಾಕುತ್ತಿದ್ದಾನೆ” ಎಂದು ಗುರುಪಾದ ಸ್ವಾಮಿಜಿ ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೈಗಾರಿಕೆಗೆ ಬೇಕಿರುವ ಕೌಶಲ್ಯಕ್ಕೂ ವಿದ್ಯಾರ್ಥಿಗಳಿಗೂ ಹೋಲಿಕೆಯೇ ಇಲ್ಲ: ಸಚಿವ ಶರಣ ಪ್ರಕಾಶ ಪಾಟೀಲ್
ಶಿವಾಚಾರ್ಯರು ಮಾತನಾಡಿ, “ನೂಲಿಚಂದಯ್ಯನ ವ್ಯಕ್ತಿತ್ವ, ಸಂಸ್ಕಾರವನ್ನು ಪ್ರತಿಯೊಬ್ಬರೂ ಅನುಸರಿಸಬೇಕು” ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗವ್ವ ಭಜಂತ್ರಿ, ಮಿಥುನ್ ಪಾಟೀಲ್, ಅನ್ನಪೂರ್ಣ ಬಿ ಪರಡ್ಡಿ, ವಿಜಯಲಕ್ಷ್ಮಿ ಹು ಕಂಬಳಿ, ಬಸಮ್ಮ ಭಜಂತ್ರಿ ಹಾಗೂ ಮುಖಂಡರು ಇದ್ದರು.