ದ್ವೀತಿಯ ಬಾರಿಗೆ ಸರಳ ಸಮೂಹಿಕ ವಿವಾಹಗಳ ಕರಪತ್ರವನ್ನು ಇಂದು ಗದಗ ಜಿಲ್ಲೆಯ ಮುಳಗುಂದ ಪಟ್ಟಣದಲ್ಲಿ ಅಂಜುಮನ್ ಸಂಸ್ಥೆ ವತಿಯ ಪ್ರಸಿದ್ಧ ಸೂಫಿ ಸಂತ ಹಜರತ ದಾವಲ ಮಲ್ಲಿಕ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಅನಾವರಣ ಮಾಡಲಾಯಿತು.
ಅಂಜುಮನ ಸಂಸ್ಥೆ ಅಧ್ಯಕ್ಷರು ತಾಜುದ್ದೀನ ಕಿಂಡ್ರೀ ಮಾತನಾಡಿ ” ವಿಶ್ವನಾಯಕ ಹಜರತ ಮಹಮ್ಮದ ಪೈಗಂಬರ್ ಅವರ ೧೫೦೧ ನೇ ಜಯಂತಿಯ ಅಂಗವಾಗಿ ದ್ವೀತಿಯ ಬಾರಿಗೆ ಬಡ ಕುಟುಂಬಗಳ ಸಾಮೂಹಿಕ ವಿವಾಹ ಇದೇ ಅಕ್ಟೋಬರನಲ್ಲಿ ಹಮ್ಮಿಕೊಂಡಿದ್ದು, ವಿವಾಹ ನೋಂದಣಿ ನೋಂದಾಯಿಸಲು ಸೆಪ್ಟೆಂಬರ್ ೧೫ ಕೊನೆಯ ದಿನವಾಗಿದ್ದು ಆಸಕ್ತರು ತಮ್ಮ ಹೆಸರನ್ನು ಅದಷ್ಟು ಶೀಘ್ರವಾಗಿ ಬರೆಯಿಸಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ ಡಿ ಮುಜಾವರ, ಎಂ ಎ ಖಾಜಿ, ಲಾಲಶಾಪೀರ ಮಕಾನದಾರ, ಹೈದರ ಖವಾಸ, ದಾವಲಸಾಬ ಲಕ್ಷ್ಮೇಶ್ವರ, ಹೆಚ್ ಎಂ ನದ್ದೀಮುಲ್ಲಾ, ದಾವೂದ ಜಮಾಲ್, ಮಹ್ಮದಜಾಪರ ಕರ್ಕಿಮುಲ್ಲಾ, ಇಮಾಮಹುಸೇನ ಮುಜಾವರ, ಚಮನಸಾಬ ಹಾದಿಮನಿ, ಜಾಪರ ಲಾಡಸಾಬನವರ, ಖಲಂದರ ಗಾಡಿ. ಮಹ್ಮದ ಮಜ್ಜಿಗಿ ಹಾಜರಿದ್ದು ನವವಿವಾಹವಾಗುವವರಿಗೆ ಶುಭಹಾರೈಸಿದರು.





