ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ ಬದುಕು!

Date:

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ದಿನಸಿ ಅಂಗಡಿಗಳ ಮೆಟ್ಟಿಲು ಹತ್ತುವ ಗ್ರಾಹಕರು, ವ್ಯಾಪಾರಿಗಳು ಹೇಳುವ ದರ ಕೇಳಿ ಕಕ್ಕಾಬಿಕ್ಕಿಯಾಗಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕಿಗೆ ಗಂಭೀರ ಹೊರೆಯಾಗಿ ಪರಿಣಮಿಸಿದೆ.

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಹಾಗೂ ಬರಗಾಲದ ಪರಿಣಾಮ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಈ ಬರಗಾಲದ ಬಿಸಿ ಅಕ್ಕಿ ಬೆಲೆಗೂ ತಾಕಿದ್ದು, ಗಗನಕ್ಕೇರಿದೆ. ಗ್ರಾಹಕರು ಅಂಗಡಿಗಳಿಗೆ‌ ಹೋಗಿ ಕೇಳಿದರೆ, ವ್ಯಾಪಾರಿಗಳು ಹೇಳುವ ಬೆಲೆ ಕೇಳಿ ಕಕ್ಕಾಬಿಕ್ಕಿಯಾಗುವಂತಾಗಿದೆ. ಕೆ.ಜಿ ,ಅಕ್ಕಿ ದರಕ್ಕೆ 100ರೂ ದಾಟಿದೆ. 25ಕೆ.ಜಿ ಚೀಲಕ್ಕೆ 2000ರೂ ದಾಟಿದೆ. ಇದರಿಂದ ಜನಸಾಮಾನ್ಯರ ಬದುಕಿಗೆ ಗಂಭೀರ ಹೊರೆಯಾಗಿದೆ. ಮತ್ತೊಂದಡೆ ಹೋಟೆಲ್‌ಗಳ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗುವ ಆತಂಕ ಎದುರಾಗಿದೆ.

- Advertisement -

ಗದಗ ಜಿಲ್ಲೆಯ ಗಜೇಂದ್ರಗಡ ಸಗಟು ಮಾರುಕಟ್ಟೆಗೆ ಕೊಪ್ಪಳ, ಗಂಗಾವತಿ, ದಾವಣಗೆರೆ, ಕಾರಟಗಿ, ರಾಯಚೂರು, ಸಿಂಧನೂರು ಸೇರಿ ಇತರೆಡೆಯಿಂದ ಅಕ್ಕಿ ಪೂರೈಕೆಯಾಗುತ್ತದೆ. ಕಳೆದ ಕೆಲ ತಿಂಗಳಿಂದ ಸತತವಾಗಿ ಅಕ್ಕಿ ಬೆಲೆ ಏರಿಕೆಯಾಗುತ್ತಲೇ ಇದೆ. 25 ಕೆಜಿ ಚೀಲದ ಬೆಲೆ ಹಿಂದಿನ ತಿಂಗಳು 1,450 ರೂ. ಆಸು-ಪಾಸಿನಲ್ಲಿತ್ತು. ಆದರೆ ಈಗ 1,850 ರೂ. ದಿಂದ 2000ಗೆ ಹೆಚ್ಚಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ಬಿಸಿಲಿಗೂ ಕುಗ್ಗದೆ ಕಬ್ಬಿಗೆ ₹5500 ಬೆಲೆಗಾಗಿ...

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕು, ಸಕ್ಕರೆಗೆ ಪ್ರತಿ ಕೆ.ಜಿ.ಗೆ ₹60 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ...

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ಬಿಜೆಪಿ ಪಕ್ಷದ ಶಾಸಕರು ಮನವೊಲಿಸಿ ದೆಹಲಿಯಲ್ಲಿ ಸಭೆ ಮಾಡುವುದಾಗಿ ತಿಳಿಸಿದ್ದರು. ಆದರೆ ದೆಹಲಿಯಲ್ಲಿ ರೈತ ಮುಖಂಡರು ಮತ್ತು ಕೇಂದ್ರ ಸಚಿವರ...

ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಅಕ್ಕಿ ಕೆಜಿಗೆ 100 ರೂ. ಗಡಿ ದಾಟಿದೆ. ಗಜೇಂದ್ರಗಡ ಮಾರುಕಟ್ಟೆಗೆ ಸೇರಿ ನಾನಾ ಕಡೆಗಳಿಂದ ನಿತ್ಯ ಸಹಸ್ರಾರು ಕ್ವಿಂಟಾಲ್‌ ಅಕ್ಕಿ ಮಾರುಕಟ್ಟೆಗೆ ಬರುತ್ತಿದೆ. ಜನಸಾಮಾನ್ಯರು ಅಕ್ಕಿ ಖರೀದಿ ಮಾಡಲು ಹೋಗಿ ಕೇಳಿದರೆ, ವ್ಯಾಪರಸ್ಥರು ಅಕ್ಕಿ ದರ ಹೇಳಿದ್ದು ಕೇಳಿ ಬಡ ಹಾಗೂ‌ ಮದ್ಯಮ ವರ್ಗದ ಜನ ಹೌಹಾರಿದ್ದಾರೆ.

ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಹಳೆಯ ಸೋನಾ ಮಸೂರಿ ಹಸಿ ಅಕ್ಕಿಯ ಬೆಲೆ ಕೆ.ಜಿ.ಗೆ ₹70ರಿಂದ ₹82ಕ್ಕೆ ಏರಿಕೆಯಾಗಿದೆ. ಸೋನಾ ಮಸೂರಿ ಆವಿಯಲ್ಲಿ ಬೇಯಿಸಿದ ಅಕ್ಕಿಯ ಬೆಲೆ ₹65ರಿಂದ ₹75ಕ್ಕೆ ಹೆಚ್ಚಳವಾಗಿದೆ. ಇನ್ನು ಬಾಸ್ಮತಿ ಅಕ್ಕಿಯ ಬೆಲೆ ಕೆ.ಜಿ.ಗೆ ₹110ರಿಂದ ₹160ಕ್ಕೆ ಜಿಗಿದಿದ್ದರೆ, ಬುಲೆಟ್ ಅಕ್ಕಿಯ ಬೆಲೆ ₹80ರಿಂದ ₹100ಕ್ಕೆ ಏರಿಕೆಯಾಗಿದೆ. ಕೋಲಂ ಅಕ್ಕಿಯ ಬೆಲೆ ₹75ರಿಂದ ₹100ಕ್ಕೆ ತಲುಪಿದೆ. ರಾಜಮುಡಿ ಅಕ್ಕಿಯ ಬೆಲೆ ಕೂಡ ₹125ರಿಂದ ₹150ಕ್ಕೆ ಹೆಚ್ಚಳವಾಗಿದೆ.

ಅಕ್ಕಿಯ ತಳಿಗೆ ಅನುಗುಣವಾಗಿ ಕೆ.ಜಿ.ಗೆ ₹20ರಿಂದ ₹50ರವರೆಗೆ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರಿಗೆ ದೊಡ್ಡ ಹೊಡೆತ ನೀಡಿದೆ. ಪ್ರತಿನಿತ್ಯ ಅಕ್ಕಿಯನ್ನೇ ಪ್ರಧಾನ ಆಹಾರವಾಗಿ ಅವಲಂಬಿಸಿದ ಬಡ ಹಾಗೂ ಮಧ್ಯಮ ಕುಟುಂಬಗಳು ಮಾಸಿಕ ಬಜೆಟ್ ನಲ್ಲಿ ಹೆಚ್ಚುವರಿ ಹಣ ವ್ಯಯಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ದಿನಸಿ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ತರಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು” ಎಂಂದು ಸಾರ್ವಜನಿಕರ ಒತ್ತಾಯಿಸುತ್ತಿದ್ದಾರೆ.

ಅಕ್ಕಿ ಬೆಲೆ ಏರಿಕೆಯಿಂದ ಹೋಟೆಲ್ ಗಳಿಗೂ ಹೊರೆ; ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಏರಿಕೆಯಿಂದ ಹೋಟೆಲುಗಳಿಗೂ ಹೊರೆಯಾಗುತ್ತಿದೆ. ಹೋಟೆಲಗಳಲ್ಲಿ ಹೆಚ್ಚು ಅಕ್ಕಿಯ ವಿವಿಧ ಆಹಾರ ಖ್ಯಾಧ್ಯಗಳನ್ನು ತಯಾರಿಸಲಾಗುತ್ತಿದ್ದು, ಹೆಚ್ಚು ಅಕ್ಕಿಯನ್ನು ಖರೀದಿ ಮಾಡುತ್ತಿದ್ದರು. ಅಕ್ಕಿ ಬೆಲೆ‌ ಏರಿಕೆಯಿಂದಾಗಿ ಜನಸಮಾನ್ಯರು ಅಷ್ಟೇ ಅಲ್ಲ ಹೊಟೇಲ್ ಮಾಲೀಕರಿಗೂ ಗಾಯದ ಮೇಲೆ‌ ಬರೆ ಎಳದಂತಾಗಿದೆ. ಬೆಲೆ ಏರಿಕೆಯಿಂದ ಹೋಟೆಲ್ ಮಾಲೀಕರು ಆಹಾರ ಪಾದಾರ್ಥಗಳ ಬೆಲೆಯನ್ನು ಏರಿಕೆ ಮಾಡಲು ಚಿಂತಿಸುತ್ತಿದ್ದಾರೆ.

ಬೆಲೆ ಏರಿಕೆಗೆ ಕಾರಣ: ಅಕ್ಕಿ ದರ ಏರಿಕೆಗೆ ಅನೇಕ ಕಾರಗಳು ಇದ್ದು, ರಾಜ್ಯದಲ್ಲಿ ಭತ್ತ ಬೆಳೆಯುವ ಜಿಲ್ಲೆಗಳಾದ ರಾಯಚೂರು, ಸಿಂಧನೂರು, ಸಿರಗುಪ್ಪ, ಗಂಗಾವತಿ, ದಾವಣಗೆರೆ ಭದ್ರಾವತಿ ಭಾಗಗಳಲ್ಲಿ ಮಳೆ ಕೊರತೆಯಿಂದ ತೀವ್ರ ಬರಗಾಲ ಉಂಟಾಗಿದ್ದು ಭತ್ತದ ಇಳುವರಿಯಲ್ಲಿ‌ ಗಣನೀಯವಾಗಿ ಕಡಿಮೆಯಾಗಿದೆ. ಕರ್ನಾಟಕಕ್ಕೆ ಹೆಚ್ಚನ ಪ್ರಮಾನದಲ್ಲಿ ಅಕ್ಕಿ ಪೂರೈಸುವ ಪಕ್ಕದ ರಾಜ್ಯಗಳಲ್ಲಿಯೂ ಒಣಹವೆ ಹಾಗೂ ಮಳೆ ಕೊರತೆಯಿಂದ ಭತ್ತದ ಇಳುವರಿ ಕಡಿಮೆ ಆಗಿದ್ದರಿಂದ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಸರಬರಾಜು ಇಲ್ಲದಿರುವುದು ಮತ್ತು ಮಧ್ಯವರ್ತಿಗಳ ಹಿಡಿತದಿಂದಾಗಿ ಕೃತಕ ಅಭಾವ ಸೃಷ್ಟಿಯಾಗಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ” ಎಂದು ವ್ಯಾಪಾರಸ್ಥರು ಹೇಳುವರು.

ಈದಿನ.ಕಾಮ್ ಜೊತೆಗೆ ಮಧ್ಯಮ ಕುಟುಂಬದ ಮಹಿಳೆ ಕೆಂಚವ್ವ ಮಾತನಾಡಿ, “ಅಂಗಡಿಗಳಿಗೆ ಅಕ್ಕಿ ಬೆಲೆ ಕೇಳಿದರೂ ಕೆ.ಜಿ. 80-100ರೂ ಹೇಳ್ತಿದ್ದಾರೆ. ಇಷ್ಟು ರೊಕ್ಕ ಕೊಟ್ಟು ಅಕ್ಕಿ ಕೊಳ್ಳಾಕ ಆಗಲ್ಲರಿ. ಬಡವರು, ಮಧ್ಯಮ ವರ್ಗದ ಜನರು ಬೆಲೆ ಇಷ್ಟ್ ಇದ್ರ ಅನ್ನನ ತಿನ್ನಾಕ ಎಲ್ಲಿ ಆಗ್ತೈತರಿ.

ಈದಿನ.ಕಾಮ್ ಜೊತೆಗೆ ಬಾಲು ರಾಠೋಡ್ ಮಾತನಾಡಿ, “ಈ ಮೊದಲೇ ಸ್ಟಾಕ್ ಮಾಡಿಕೊಂಡ ಅಕ್ಕಿಯನ್ನು ಬಂಡವಾಳ ಶಾಹಿಗಳು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಕ್ಕಿ ದರವನ್ನು ಕಡಿಮೆ ಮಾಡಿ, ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಹೇಳಿದರು.

ಕೃತಕ ಅಭಾವ ಸೃಷ್ಟಿಸುವ ಮಧ್ಯವರ್ತಿಗಳ ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಗೆ ಕಡಿವಾಣ ಹಾಕಿ, ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣಕ್ಕೆ ತರಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಜನಸಾಮನ್ಯರ ಆಕ್ರೋಶ ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಟಾರ್ಕ್ಟಿಕದಲ್ಲಿ ಪೆಂಗ್ವಿನ್ ಎಣಿಸುವ ಅಪರೂಪದ ಉದ್ಯೋಗ: ಲಕ್ಷಗಳ ಸಂಭಾವನೆ, ಹೇಗಿರುತ್ತದೆ ಹಿಮದ ನಾಡಿನ ಬದುಕು?

ಜನಜಂಗುಳಿ, ಟ್ರಾಫಿಕ್ ಕಿರಿಕಿರಿ ಹಾಗೂ ದೈನಂದಿನ ಯಾಂತ್ರಿಕ ಬದುಕಿನಿಂದ ದೂರ ಸರಿದು,...

ಲಡಾಖ್ ನಾಯಕರ ಜೊತೆ ಕೇಂದ್ರದ ಮಾತುಕತೆ ಅಪೂರ್ಣ: ಅಕ್ಟೋಬರ್ 22ಕ್ಕೆ ಮುಂದಿನ ಸಭೆ

ಕೇಂದ್ರ ಗೃಹ ಸಚಿವಾಲಯ ಹಾಗೂ ಲಡಾಖ್‌ನ ಪ್ರಾತಿನಿಧಿಕ ಸಂಸ್ಥೆಗಳ ನಡುವೆ ಲೇಹ್‌ನಲ್ಲಿ...

ಶಿವಮೊಗ್ಗ | ವಿಮಾ ಪಾಲಿಸಿ ಪುನರಾರಂಭಿಸದ ಕಂಪನಿಗೆ ದಂಡ: ಗ್ರಾಹಕ ಆಯೋಗ ಆದೇಶ

ನಿಯಮಾನುಸಾರ ಕಂತು ಪಾವತಿಸಿದರೂ ಜೀವ ವಿಮಾ ಪಾಲಿಸಿಯನ್ನು ಪುನರಾರಂಭಿಸದೆ ಸೇವಾ ನ್ಯೂನತೆ...

ಯಮೆನ್ ರಾಷ್ಟ್ರಪತಿ ಭವನದ ಮೇಲೆ ಹೂತಿಗಳ ಕ್ಷಿಪಣಿ ದಾಳಿ: ಐವರ ಸಾವು

ಯಮೆನ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಅದನ್‌ನಲ್ಲಿರುವ ಅಲ್-ಮಾಶಿಕ್ ರಾಷ್ಟ್ರಪತಿ ಭವನದ...