ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ: ಪರೀಕ್ಷೆಯಿಂದ ವಂಚಿತರಾಗುವ ಭೀತಿಯಲ್ಲಿ ವಿದ್ಯಾರ್ಥಿಗಳು!

Date:

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಅಸಾದ್ಯವಾಗಿದ್ದು, ವಿದ್ಯಾರ್ಥಿಗಳು ಪಾಲಕರು ಶಾಲೆ, ಉದ್ಯೋಗ ಬಿಟ್ಟು ತಹಶಿಲ್ದಾರರ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವ ಭಯದಲ್ಲಿದ್ದಾರೆ.

ಹಾವೇರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ, ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಜನನ ಪ್ರಮಾಣ ಪತ್ರ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ತಿದ್ದುಪಡಿ, ಶಾಲಾ ದಾಖಲಾತಿ ಮತ್ತು ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತಾಂತ್ರಿಕ ತೊಂದರೆಗಳು ಎದುರಿಸುತ್ತಿದ್ದಾರೆ. ಪ್ರಸ್ತುತ ಆಧಾರ್ ತಂತ್ರಾಂಶಗಳು ಹಳೆಯ ಕೈಬರಹದ ಜನನ ಪ್ರಮಾಣ ಪತ್ರಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಪಾಲಕರು ಪರದಾಡುವಂತಾಗಿದೆ.

- Advertisement -

15-20 ವರ್ಷಗಳ ಹಿಂದೆ ಜನಿಸಿದ ವಿದ್ಯಾರ್ಥಿಗಳು ತಮ್ಮ ಹಳೆಯ ಪ್ರಮಾಣ ಪತ್ರಗಳನ್ನು ಡಿಜಿಟಲ್ ರೂಪಕ್ಕೆ ಬದಲಾಯಿಸಿಕೊಳ್ಳುವುದು ಜಾರಿಗೊಳಿಸಲಾಗಿದೆ. ಆದರೆ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಜನನ ಪ್ರಮಾಣ ಪತ್ರ ಇಲ್ಲದೇ ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ಆಧಾರ್‌ಕಾರ್ಡ್‌ನಲ್ಲಿರುವ ನ್ಯೂನತೆಗಳ ಸರಿಪಡಿಸಿಕೊಳ್ಳಲಾಗದೇ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದ ಕುರಿತು ಈಗಾಗಲೇ ಚಿಂತಿತರಾಗಿದ್ದಾರೆ. 16 ವರ್ಷಗಳಿಗಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳ ಜನನಪ್ರಮಾಣ ಪತ್ರವನ್ನು ಡಿಜಿಟಲೀಕರಣಗೊಳಿಸುವಂತೆ ಸರ್ಕಾರದ ಆದೇಶವಿದ್ದರೂ ಆಡಳಿತ ಕಚೇರಿಯಲ್ಲಿ ಇನ್ನೂ ವೇಗ ಪಡೆದುಕೊಳ್ಳದಿರುವುದರಿಂದ ಮಕ್ಕಳು ಹಾಗೂ ಪಾಲಕರು ದಿನಂಪ್ರತಿ ಸರ್ಕಾರಿ ಕಚೇರಿಗೆ ಅಲೆದಾಡುವ ದುಸ್ಥಿತಿ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ;...

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ ಒಂದಾದರೆ, ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ನೇರ ಖರೀದಿ (URD) ಮತ್ತು ರವಾನೆ ಕೊಬ್ಬರಿ ಖರೀದಿಗೆ ಮತ್ತೊಂದು ಬೆಲೆ ನಿಗದಿಯಾಗಿದೆ. ಅಂಡರ್ ಬಿಲ್ಲಿಂಗ್...

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

ಡಿಜಿಟಲ್ ಜನನ ಪ್ರಮಾಣ ಪತ್ರ ಇಲ್ಲದೇ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು: ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗೆ ಪರೀಕ್ಷಾ ಪ್ರವೇಶ ಪತ್ರಕ್ಕೆ ಕೈಬರಹದ ಜನನ ಪ್ರಮಾಣ ಪತ್ರ ತೆಗೆದುಕೊಳ್ಳದೆ, ಡಿಜಿಟಲ್ ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ಕೇಳಲಾಗುತ್ತಿದೆ. ಆದರೆ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಪ್ರಮಾಣ ಪತ್ರ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಪಾಲಕರು ಅಲೆದಾಡುವಂತೆ ಆಗಿದೆ. ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ನಲ್ಲಿ ಹೆಸರು, ಜನ್ಮ ದಿನಾಂಕ ಅಥವಾ ತಂದೆ-ತಾಯಿಯ ಹೆಸರು ತಿದ್ದುಪಡಿ ಮಾಡಬೇಕಾದಾಗ ಕೈಬರಹದ ಹಳೆಯ ಪ್ರಮಾಣ ಪತ್ರಗಳನ್ನು ಆಧಾರ್ ಸಾಫ್ಟ್‌ವೇರ್ ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಆಧಾರ್ ಅಪ್‌ಡೇಟ್ ಸ್ಥಗಿತಗೊಳ್ಳುತ್ತಿದೆ. ಸರ್ಕಾರದ ವಿವಿಧ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಡಿಜಿಟಲ್ ಪ್ರೊಫೈಲ್ ಅಪ್‌ಡೇಟ್ ಇರಬೇಕಾಗುತ್ತದೆ. ಜನನ ಪ್ರಮಾಣ ಪತ್ರ ಡಿಜಿಟಲ್ ಆಗದಿದ್ದರೆ ಬ್ಯಾಂಕ್ ಲಿಂಕಿಂಗ್ ಮತ್ತು ಇ-ಕೆವೈಸಿ (e-KYC) ಪ್ರಕ್ರಿಯೆಗಳು ಅಪೂರ್ಣವಾಗಿಯೇ ಉಳಿಯುತ್ತವೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮತ್ತೂರು ಗ್ರಾಮದ ಅಶೋಕ ಶಿಡೇನೂರು ಈದಿನ.ಕಾಮ್ ಜೊತೆಗೆ ಮಾತನಾಡಿ, “ಶಿಡೇನೂರು ಗ್ರಾಮದ ಒಂದೇ ಮನಿಯಲ್ಲಿ ಮೂರು ಮಕ್ಕಳಿಗೆ ಜನನ ಪ್ರಮಾಣ ಪತ್ರ ಐತಿ, ಆಧಾರ್ ತಿದ್ದುಪಡಿ ಆಗುತ್ತಿಲ್ಲ. ಕೋಡ ಗ್ರಾಮದ ಆಸ್ಪತ್ರೆಯಲ್ಲಿ ಹುಟ್ಟಿದ ಹುಡುಗನ ಜನನ ಪ್ರಮಾಣ ಪತ್ರನ ಕೈಯಿಲೆ ಬರೆದು ಕೊಟ್ಟಾರ್ರಿ. ಡಿಜಿಟಲ್ ಜನನ ಪ್ರಮಾಣ ಪತ್ರ ಕೊಡ್ರಿ, ಅಂದ್ರ ಹಿರೇಕೆರೂರಿಗೆ ಹೋಗ್ರಿ ಅಂದ್ರ, ಅಲ್ಲಿಗೂ ಹೋದ್ವಿ, ಪ್ರಜಾಸೇವಾ ಕಾರ್ಯಮಕ್ಕ ಹೋದ್ವಿ, ಹಾವೇರಿಗೂ ಅಡ್ಯಾಡಿದ್ವಿ. ತಿರುಗಿ ತಿರುಗಿ ತಲಿಕೆಟ್ಟುಹೋಗೈತ್ರಿ, ಆ ಹುಡ್ರು ಎಂಟು, ಒಂಬತ್ತು, ಹತ್ತು ಕಲಿಯಾಕ ಹತ್ಯಾವ್ರಿ. ಅವ್ರಿಗೆ ಮುಂದ ಕಲಿಯಾಕ, ಪರೀಕ್ಷೇಗೆ, ಸಾಲಿ ಹಚ್ಚಾಕ, ಆದಾಯ ಪ್ರಮಾಣ ಪತ್ರ, ಸ್ಕಾಲರ್ಷಿಪ್ ಗೆ ಎಲ್ಲಾಕೂ ತೊಂದ್ರಿ ಆಗಾಕ ಹತೈತ್ರಿ. ತಹಶಿಲ್ದಾರ, ಡಿಸಿ ಹತ್ರನೂ ಬಂದವ್ರಿ. ಹಿಂಗ ಜಿಲ್ಲೆದಾಗ ಬಾಳ ಮಕ್ಕಳಿಗೆ ಸಮಸ್ಯೆ ಆಗೈತಿ. ಡಿಸಿ ಅವ್ರು ಕಡ್ಡಿ ಮುರ್ದಂಗ ಹೇಳಿದ್ರು, ಇದು ಸಮಸ್ಯೆ ಐತಿ, ಮ್ಯಾಲ ಸರ್ಕಾರಕ್ಕ ಕಳಿಸ್ತಿವಿ. ಅಲ್ಲಿಂದ ಬಂದ್ಮಾಗ ಆಧಾರ ತಿದ್ದುಪಡಿ ಮಾಡಾಕ ಬರುತ್ತ, ಅಲ್ಲಿವರ್ಗೂ ಬರಲ್ಲ ಅಂತ ಹೇಳಿ ಹ್ವಾದ್ರ. ನಮ್ಮಕ್ಳನ್ನ ಎಲ್ಲಿಗೆ ಕಳಿಸ್ಬೇಕು ಅನ್ನುದು ತಿಳಿವಲ್ದು. ಎಗ್ಸಾಂ ಬರುದ್ರೊಳಗ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿದ್ರ ಮಕ್ಕಳಿಗೆ ಚಲೊ ಆಗುತ್ತ. ಇಲ್ಲದಿದ್ರ ಜಿಲ್ಲೆಯ ಎಲ್ಲ ಪಾಲಕರು, ಮಕ್ಕಳು ಡಿಸಿ ಆಫೀಸ್ ಮುಂದ್ ಕುಂತ್ ಧರಣಿ ಮಾಡ್ತಿವಿ” ಎಂದು ಹೇಳಿದರು.

a7b359ba c0c4 4ed8 960c f611f0099c81
ಅಶೋಕ ಶಿಡೇನೂರು, ಬ್ಯಾಡಗಿ ತಾಲೂಕಿನ ಮತ್ತೂರು ಗ್ರಾಮ.

ಬ್ಯಾಡಗಿ ತಾಲೂಕು ಹಿರೆಹಳ್ಳಿ ಗ್ರಾಮದ ವಿರುಪಾಕ್ಷಯ್ಯ ಹಿರೇಮಠ ಈ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿ, “ಡಿಸಿ.ಆಫೀಸಿಗೆ ಯಾಕ ಬಂದವಿ ಅಂದ್ರ ನನ್ನ ಮಗಳ್ದು, ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸೋದಿತ್ತು. ನನ್ನ ಮಗಲಕ ಶಾಲೆಯಲ್ಲಿ‌ ನಂದು ಮತ್ತ ನನ್ನ ಮಗಳದ್ದು, ಆಧಾರ್ ಕಾರ್ಡ್ ನಲ್ಲಿ ಸೇಮ್ ಇರಬೇಕು, ಆಧಾರ್ ತಿದ್ದುಪಡಿ ಮಾಡ್ಕಂಡು ಬರ್ರಿ ಅಂತ ಹೇಲಕಿದ್ರು. ಆಧಾರ್ ತಿದ್ದುಪಡಿ ಕೇಂದ್ರ ಬಂದ್ರ ಕೈ ಬರಹ ಜನನ ಪ್ರಮಾಣ ಪತ್ರ ಬರಲ್ಲ, ಡಿಜಿಟಲ್ ಪ್ರಮಾಣ ಪತ್ರ ತಗೊಂಡು ಬರ್ರಿ, ತಿದ್ದುಪಡಿ ಮಾಡಾಕ ಬರುತ್ತ ಅಂತ ಹೇಳ್ತಾರ. ಜನನ ಪ್ರಮಾಣ ಪತ್ರ ಡಿಜಿಟಲ್ ಮಾಡೋಕೆ ಹೋದ್ರ 2011ರಲ್ಲೆ ಮುಗಿದೈತಿ. ಈಗ ಡಿಜಿಟಲ್ ಮಾಡಾಕ ಬರಲ್ಲ ಅಂತ ಹೇಳ್ತಾರ. ಮತ್ತ ಎಲ್ಲಂತ ಹೋಗ್ಬೇಕ್ರಿ. ಈಗ ನಾನು ನನ್ನ ಮಗಳನ್ನ ಶಾಲಿ ಬಿಡಿಸಿ ಕರ್ಕೊಂಡು ಅಡ್ಯಾಡಕಿಂತಿನಿ. ಒಬ್ರು ಬೆಂಗಳೂರಿಗೆ ಹೋಗ್ರ ಅಲ್ಲಿ ಸರಿ ಮಾಡ್ತಾರ ಅಂತಾರ. ಎಲ್ಲಂತ ಹೋಗುಣು. ಲಗೂಣ ಈ ಸಮಸ್ಯೆ ಬಗೆಹರಿಸಿದ್ರ ನಮ್ಮ ಮಕ್ಕಳಿಗೆ ಅನುಕೂಲ ಆಗುತ್ತ” ಎಂದು ಹೇಳಿದರು.

a99dfc7d ed2e 444f 80ce 24dc037314c6
ವಿರುಪಾಕ್ಷಯ್ಯ ಹಿರೇಮಠ, ಬ್ಯಾಡಗಿ ತಾಲೂಕು ಹಿರೆಹಳ್ಳಿ ಗ್ರಾಮ.

ಈ ಕುರಿತು ಪಾಲಕರು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್ ಅವರನ್ನು ಬೇಟಿ ಮಾಡಿದಾಗ, “ಜಿಲ್ಲೆಯಲ್ಲಿ ಈ ಸಮಸ್ಯೆ ಎರಡು ತಾಲೂಕಿನಲ್ಲಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

30 ವರ್ಷಗಳ ಹಿಂದಿನ ಕುಂಬ್ಳೆ-ಶ್ರೀನಾಥ್ ಆಟ ನೆನಪಿಸಿದ ಹೈದರಾಬಾದ್ ಹುಡುಗರಾದ ತಿಲಕ್-ನಿತೀಶ್ ಗೆಲುವಿನಾಟ

ನ್ಯೂಜಿಲೆಂಡ್ ವಿರುದ್ಧದ ಕ್ರೈಸ್ಟ್‌ಚರ್ಚ್‌ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ....

ಚಿಕ್ಕಬಳ್ಳಾಪುರದಲ್ಲಿ ಕಂಪಿಸಿದ ಭೂಮಿ; 2.9 ತೀವ್ರತೆಯ ಲಘು ಭೂಕಂಪ ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಬೆನ್ನಲ್ಲೇ, ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ...

ರಾಯಚೂರು | ಚಾಕಲೇಟ್ ಖರೀದಿ ನೆಪದಲ್ಲಿ ಬಂದು ಮಹಿಳೆಯ ಏಳು ತೊಲೆ ಬಂಗಾರದ ತಾಳಿ ಕಳವು

ತಾಲೂಕಿನ ಯರಗೇರಾ ಗ್ರಾಮದಲ್ಲಿ ಕಿರಾಣಿ ಅಂಗಡಿ ಚಾಕಲೇಟ್ ಖರೀದಿ ನೆಪದಲ್ಲಿ ಬಂದು...