ಗಂಗಾವತಿ | ನೆಹರೂ ಉದ್ಯಾನದ ಸ್ವಚ್ಛತೆ ಕುರಿತು ಶಾಸಕರ ಮಾತಿಗೂ ಕಿಮ್ಮತ್ತು ನೀಡದ ಪೌರಾಯುಕ್ತ: ಐಲಿ ನಾಗರಾಜ

Date:

Advertisements

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ನೆಹರೂ ಉದ್ಯಾನದ ಸುರಕ್ಷತೆ ಮತ್ತು ಸ್ವಚ್ಚತೆಯ ಬಗ್ಗೆ ನಗರಸಭೆ ಕಡೆಗಣಿಸಿದ್ದು, ಈ ಬಗ್ಗೆ ಸೂಕ್ತ ಕ್ರಮವಹಿಸಲು ಶಾಸಕರು ಸೂಚಿಸಿದ್ದರೂ ಕೂಡಾ, ಪೌರಾಯುಕ್ತರು ಶಾಸಕರ ಮಾತಿಗೆ ಕಿಮ್ಮತ್ತು ಕೊಡದೇ ನಿರ್ಲಕ್ಷ್ಯ ವಹಿಸಿರುತ್ತಾರೆ ಎಂದು ಕರವೇ ಗಂಗಾವತಿ ನಗರ ಘಟಕ ಅಧ್ಯಕ್ಷ ಐಲಿ ನಾಗರಾಜ ಆಕ್ರೋಶ ವ್ಯಕ್ತಪಡಿಸಿದರು.

“ಉದ್ಯಾನವನದ ಸ್ವಚ್ಛತೆ ಕಾಪಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕರವೇ ಸಂಘಟನೆ, ಶಾಸಕರು ಹಾಗೂ ಪೌರಾಯುಕ್ತರ ಉಭಯ ಸಮ್ಮುಖದಲ್ಲಿ ಕಳೆದ ತಿಂಗಳು ನಡೆದ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದು, ಶಾಸಕರು ಈ ಬಗ್ಗೆ ಸೂಕ್ತ ಕ್ರಮವಹಿಸಲು ಪೌರಾಯುಕ್ತರಿಗೆ ಸೂಚಿಸಿದಾಗ್ಯೂ ಪೌರಾಯುಕ್ತರು ಶಾಸಕರ ಮಾತಿಗೆ ಕಿಮ್ಮತ್ತು ಕೊಡದೇ ನಿರ್ಲಕ್ಷ್ಯ ವಹಿಸಿರುತ್ತಾರೆ” ಎಂದರು.

“ಸದರಿ ಉದ್ಯಾನವನದಲ್ಲಿ ಬರುವ ಸಾರ್ವಜನಿರು ಮತ್ತು ಬೇರೆ ಬೇರೆ ಊರಿಗೆ ಹೋಗುವ ಪ್ರಯಾಣಿಕರು ವಿಶ್ರಾಂತಿಯ ಸಲುವಾಗಿ ಈ ಉದ್ಯಾನಕ್ಕೆ ಬರುತ್ತಾರೆ. ವಯಸ್ಸಾದ ವೃದ್ದರು, ಹಿರಿಯ ನಾಗಕರಿಕರು ಉದ್ಯಾನವನದಲ್ಲಿ ವಾಯು ವಿಹಾರಕ್ಕೆ, ವ್ಯಾಯಾಮಕ್ಕೆ ಬರುತ್ತಾರೆ. ಆದರೆ, ಉದ್ಯಾನವನ ಸ್ವಚ್ಛತೆ ಇಲ್ಲದೆ ಮತ್ತು ವ್ಯಾಯಾಮ ಸಲುವಾಗಿ ಹಾಕಿರುವ ಎಲ್ಲ ಸಾಮಾಗ್ರಿಗಳು ಸಂಪೂರ್ಣವಾಗಿ ಹಾಳಾಗಿವೆ. ಇದರಿಂದಾಗಿ ವೃದ್ಧರಿಗೆ, ಹಿರಿಯ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹಗಲು ರಾತ್ರಿ ಈ ಉದ್ಯಾನವನದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಅನೈತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಇದರ ಬಗ್ಗೆ ಯಾವುದೇ ಇಲ್ಲಾಖೆಯ ಅಧಿಕಾರಿಗಳೂ ಕೂಡಾ ಕ್ರಮವಹಿಸುತ್ತಿಲ್ಲ. ಅಲ್ಲದೆ ಸ್ವಚ್ಚತೆ ಇಲ್ಲದೆ ಕಲುಷಿತ ವಾತಾವರಣ ಉಂಟಾಗಿದೆ” ಎಂದು ಆರೋಪಿಸಿದರು.‌

Advertisements

ಈ ಸುದ್ದಿ ಓದಿದ್ದೀರಾ? ರಾಯಚೂರು | ಅವೈಜ್ಞಾನಿಕ ಟೋಲ್ ಗೇಟ್; ಕೂಡಲೇ ಕಾಮಗಾರಿ ನಿಲ್ಲಿಸುವಂತೆ ರೈತ ಸಂಘ ಒತ್ತಾಯ

“ಉದ್ಯಾನವನಕ್ಕೆ ಬರುವ ಸಾರ್ವಜನಿಕರು, ಪ್ರಯಾಣಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಉದ್ಯಾನದಲ್ಲಿ ಮದ್ಯಪಾನದ ಬಾಟೆಲ್‌ಗಳು, ಇತರೆ ಅನೈತಿಕ ಚಟುವಟಿಕೆಗೆ ಉಪಯೋಗಿಸುವ ವಸ್ತುಗಳು ಕಾಣುತ್ತಿವೆ. ಉದ್ಯಾನವನದ ಸುತ್ತಲು ಸರಿಯಾದ ಬೇಲಿ ವ್ಯವಸ್ಥೆ ಇರುವದಿಲ್ಲ. ಈಗಲಾದರೂ ಶಾಸಕರು ಹಾಗೂ ಪೌರಾಯುಕ್ತರು ಈ ಉದ್ಯಾನದತ್ತ ಗಮನಹರಿಸಿ ಸ್ಥಳಪರಿಶೀಲನೆ ಮಾಡಿ, ಇಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು. ಸ್ವಚ್ಛತೆ ಕಾಪಾಡಬೇಕು ಮತ್ತು ವ್ಯಾಯಾಮಕ್ಕೆ ಉಪಯೋಗಿಸುವ ಸಾಮಾಗ್ರಿಗಳು ಸರಿಪಡಿಸಬೇಕು. ಸಂಜೆ 6 ಗಂಟೆಯ ನಂತರ ಉದ್ಯಾನವನದ ಭದ್ರತೆಯ ಗೇಟಿಗೆ ಬೀಗಹಾಕಬೇಕು. ಜತೆಗೆ ಕಾವಲುಗಾರರನ್ನು ನೇಮಿಸಬೇಕು” ಎಂದು ಒತ್ತಾಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X